ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಶುಕ್ರವಾರ ನಮಾಜ್ ಮಾಡಲು ನ್ಯಾಯಾಲಯದ ಕೆಲಸ ಕಾರ್ಯಗಳನ್ನು ಅರ್ಧಕ್ಕೆ ನಿಲ್ಲಿಸುವ ನ್ಯಾಯವಾದಿಗಳ ನಡವಳಿಕೆ ಕುರಿತು ಇಲ್ಲಿನ ಒಂದು ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ವಿವೇಕಾನಂದ ಶರಣ ತ್ರಿಪಾಠಿಯವರು ವಿಷಾದ ವ್ಯಕ್ತಪಡಿಸಿದರು. ನ್ಯಾಯಾಧೀಶ ತ್ರಿಪಾಠಿಯವರು ಮಾತನಾಡಿ, ‘ಕೆಲಸ ಮಾಡುವುದೇ ಪೂಜೆಯಾಗಿದೆ’ ಎಂಬುದನ್ನು ನ್ಯಾಯವಾದಿಗಳು ನೆನಪಿನಲ್ಲಿಟ್ಟುಕೊಳ್ಳಬೇಕು ಮತ್ತು ಅವರು ತಮ್ಮ ನ್ಯಾಯಾಂಗ ಕರ್ತವ್ಯಗಳನ್ನು ಗೌರವಿಸಬೇಕು.” ಎಂದು ಹೇಳಿದರು. ಇದರೊಂದಿಗೆ ನ್ಯಾಯಾಲಯವು ಅಕ್ರಮ ಮತಾಂತರದ ಪ್ರಕರಣದ ಆರೋಪಿಯನ್ನು `ನ್ಯಾಯಾಲಯದ ಸ್ನೇಹಿತ’ (ಆಮಿಕಸ್ ಕ್ಯೂರಿ) ಮಾಡಲು ಆದೇಶಿಸಿದರು. ಇದರಿಂದ ಮುಸಲ್ಮಾನ ನ್ಯಾಯವಾದಿಗಳು ನಮಾಜಪಠಣಕ್ಕಾಗಿ ನ್ಯಾಯಾಲಯದ ಕೆಲಸ ಕಾರ್ಯಗಳನ್ನು ಅರ್ಧಕ್ಕೆ ನಿಲ್ಲಿಸಿ ಹೋದರೆ `ನ್ಯಾಯ ಮಿತ್ರ’ ಆಲಿಸುವಿಕೆಯನ್ನು ಮುಂದುವರಿಸಲು ಸಾಧ್ಯವಾಗುತ್ತದೆ.
1. ನ್ಯಾಯಾಧೀಶ ತ್ರಿಪಾಠಿಯವರು ಅಕ್ರಮ ಮತಾಂತರದ ಪ್ರಕರಣದ ಆರೋಪಿಗಳಾದ ಮೌಲಾನಾ ಕಲೀಮುದ್ದೀನ್ ಹಾಗೂ ಇತರರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯ ವಿಚಾರಣೆ ವೇಳೆ ಈ ಆದೇಶ ನೀಡಿದ್ದಾರೆ. ಆರೋಪಿ ಮೌಲಾನಾ ಪರವಾಗಿ ಕೆಲವು ದಾಖಲೆಗಳನ್ನು ನೀಡುವಂತೆ ನ್ಯಾಯವಾದಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
2. ಈ ಪ್ರಕರಣದ ವಿಚಾರಣೆಯ ಸಮಯದಲ್ಲಿ ಸಾಕ್ಷಿಗಳ ಕ್ರಾಸ್ ಎಕ್ಸಾಮಿನೇಷನ್ ಮಾಡುವ ಸಮಯವನ್ನು ನಿಗದಿಪಡಿಸಲಾಗಿತ್ತು. ಮಧ್ಯಾಹ್ನ 12.20ಕ್ಕೆ ನ್ಯಾಯವಾದಿ ಮೊಹಮ್ಮದ್ ಅಮೀರ್ ನದವಿ ಮತ್ತು ನ್ಯಾಯವಾದಿ ಜಿಯಾ-ಉಲ್-ಜಿಲಾನಿ ಅವರು ನ್ಯಾಯಾಲಯಕ್ಕೆ, ‘ಇಂದು ಶುಕ್ರವಾರವಾಗಿರುವುದರಿಂದ ನಾವು ನ್ಯಾಯಾಲಯದ ಕೆಲಸ ಕಾರ್ಯವನ್ನು ಮುಂದುವರಿಸಲು ಸಾಧ್ಯವಿಲ್ಲ’ ಎಂದು ತಿಳಿಸಿದರು.
3. ನ್ಯಾಯಾಲಯ ಅವರಿಗೆ, ‘ನಮಾಜ ಪಠಣಕ್ಕಾಗಿ ನಿಮಗೆ ನ್ಯಾಯಾಲಯದಿಂದ ಹೊರಗೆ ಹೋಗಲು ಅವಕಾಶ ನೀಡುವುದು ಯೋಗ್ಯವಾಗುವುದಿಲ್ಲ. ಮುಸಲ್ಮಾನ ನ್ಯಾಯವಾದಿಗಳು ನಮಾಜಪಠಣಕ್ಕಾಗಿ ನ್ಯಾಯಾಲಯದಿಂದ ಹೊರಗೆ ಹೋಗುತ್ತಿದ್ದರೆ ವಿಚಾರಣೆ ಪೂರ್ಣಗೊಳ್ಳುವುದಿಲ್ಲ.’ ಎಂದು ತಿಳಿಸಿತು.
4. ನ್ಯಾಯಾಲಯವು ಸೂಚಿಸಿದರೂ ನ್ಯಾಯವಾದಿಗಳು ನ್ಯಾಯಾಲಯದ ಕೆಲಸಕಾರ್ಯವನ್ನು ಬಿಟ್ಟು ಹೋದರು. (ನ್ಯಾಯಾಧೀಶರ ಸೂಚನೆಗೆ ನಿರ್ಲಕ್ಷಿಸುವ ನ್ಯಾಯವಾದಿಗಳು – ಸಂಪಾದಕರು) ತದನಂತರ ನ್ಯಾಯವಾದಿಗಳಿಗೆ ಎಚ್ಚರಿಕೆ ನೀಡುವಾಗ, ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಸ್ಥಗಿತಗೊಳಿಸಿತು.
ಸಂಪಾದಕರ ನಿಲುವು* ಹಿಂದೂ ನೌಕರರು ತಿಲಕವನ್ನು ಹಚ್ಚಿಕೊಂಡರೆ ಅಥವಾ ಕಚೇರಿಗಳಲ್ಲಿ ಸತ್ಯನಾರಾಯಣನ ಪೂಜೆಯನ್ನು ಮಾಡಿದರೆ ಅವರಿಗೆ ಸಂವಿಧಾನ ಜಾತ್ಯತೀತ’, ಆಗಿದೆ ಎನ್ನುವ ಉಪದೇಶ ನೀಡುವ ಜಾತ್ಯತೀತವಾದಿಗಳು ಇಂತಹ ಸಮಯದಲ್ಲಿ ಎಲ್ಲಿರುತ್ತಾರೆ? |