ಅಯೋಧ್ಯೆ (ಉತ್ತರ ಪ್ರದೇಶ) – ಅಯೋಧ್ಯೆಯಲ್ಲಿ ಜನವರಿ 16 ರಿಂದ ಶ್ರೀ ರಾಮಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ವಿಧಿಗಳು ಪ್ರಾರಂಭವಾಗಿವೆ. ಜನೇವರಿ 18 ರಂದು ಶ್ರೀರಾಮಲಲ್ಲಾನ ಮೂರ್ತಿ ಶ್ರೀರಾಮಮಂದಿರದ ಗರ್ಭಗೃಹದಲ್ಲಿ ಸ್ಥಾಪಿಸಲಾಗಿದೆ. ಜನೇವರಿ 19ರಂದು ಬೆಳಿಗ್ಗೆ ಅರಣಿ ಮಂಥನ ಮಾಡಲಾಯಿತು. ತದನಂತರ ಶ್ರೀಗಣೇಶನ ಪೂಜೆ ಮಾಡಲಾಯಿತು. ಎಲ್ಲ ದ್ವಾರಪಾಲಕರ ಪೂಜೆಯನ್ನು ನಡೆಸಲಾಯಿತು. ಅರಣಿ ಮಂಥನದಿಂದ ಪ್ರಕಟವಾದ ಅಗ್ನಿಯನ್ನು ಕುಂಡದಲ್ಲಿ ಸ್ಥಾಪಿಸಲಾಗುತ್ತದೆ. ತದನಂತರ ಗ್ರಹಗಳ ಸ್ಥಾಪನೆ, ಭಗವಾನ ಶಂಕರನ ಆಸನದ ಸ್ಥಾಪನೆ ಮತ್ತು ಅಯೋಧ್ಯೆಯ ಮುಖ್ಯ ದೇವತೆಗಳ ಸ್ಥಾಪನೆ ಆಗುವುದು. ಶ್ರೀರಾಮ ಯಂತ್ರ, ಯೋಗಿನಿ, ಮಂಡಲ ಕ್ಷೇತ್ರಪಾಲ, ಅಧಿಕಾರಿಗಳ ಆರಾಧನೆಯನ್ನು ಮಾಡಲಾಗುತ್ತಿದೆ. ` ಈ ವಿಧಿ ಭಾವಪೂರ್ಣವಾಗಿ ಮಾಡಲಾಗುತ್ತಿದೆ’, ಎಂದು ಹೇಳಲಾಗುತ್ತಿದೆ.
ಶ್ರೀ ರಾಮಲಲ್ಲಾನ ಹಳೆಯ ಮೂರ್ತಿಯನ್ನು ಗರ್ಭಗುಡಿಯಲ್ಲಿ ಇರಿಸಲಾಗುವುದು! – ರಾಮಭದ್ರಾಚಾರ್ಯ
ಜಗದ್ಗುರು ರಾಮಭದ್ರಾಚಾರ್ಯರು ಶ್ರೀ ರಾಮಲಲ್ಲಾನ ಹಳೆಯ ಮೂರ್ತಿಯನ್ನು ಗರ್ಭಗುಡಿಯಲ್ಲಿ ಇಡದೇ ಇದ್ದರೆ, ಅದು ತಪ್ಪಾಗುತ್ತಿತ್ತು; ಆದ್ದರಿಂದ ಹಳೆಯ ಮೂರ್ತಿಯು ಗರ್ಭಗುಡಿಯಲ್ಲಿ ಉಳಿಯಲಿದೆ. ಜನರಿಗೆ ಒಳ್ಳೆಯ ರೀತಿಯಲ್ಲಿ ದರ್ಶನ ಪಡೆಯಲು ಸಾಧ್ಯವಾಗಬೇಕು ಎಂದು ಹೊಸ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಬೇರೆ ಮೂರ್ತಿಯ ತೊಂದರೆಯಿಲ್ಲ.
ತಾತ್ಕಾಲಿಕವಾಗಿ ಶ್ರೀರಾಮ ಮಂದಿರವನ್ನು ಭಕ್ತರಿಗಾಗಿ ಮುಚ್ಚಲಾಗಿದೆ.
ಜನವರಿ 19 ರಂದು ಸಂಜೆ 7 ಗಂಟೆಯಿಂದ ಶ್ರೀರಾಮ ಜನ್ಮಭೂಮಿಯಲ್ಲಿ ತಾತ್ಕಾಲಿಕ ಸ್ವರೂಪದಲ್ಲಿರುವ ಶ್ರೀರಾಮ ಮಂದಿರದ ದರ್ಶನ ಪಡೆಯಲು ಸಾಧ್ಯವಿಲ್ಲ. ಪ್ರಾಣಪ್ರತಿಷ್ಠಾಪನೆಯ ಕಾರ್ಯಕ್ರಮದ ಸಿದ್ಧತೆಯಿಂದ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ.