ಕಾಶ್ಮೀರಿ ಹಿಂದೂಗಳ ಹತ್ಯಾಕಾಂಡದ 34 ನೇ ಸ್ಮೃತಿದಿನ ನಿಮಿತ್ತ ಬ್ರಿಟಿಷ್ ಸಂಸತ್ತಿನಲ್ಲಿ ಪ್ರಸ್ತಾಪ !

ಲಂಡನ್ – ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೂಗಳ ಹತ್ಯಾಕಾಂಡದ 34 ನೇ ಸ್ಮೃತಿದಿನ ಸಂದರ್ಭದಲ್ಲಿ, ಬ್ರಿಟಿಷ್ ಸಂಸತ್ತಿನಲ್ಲಿ ಪ್ರಸ್ತಾವನೆಯನ್ನು ಮಂಡಿಸಲಾಯಿತು. ಬ್ರಿಟಿಷ್ ಸಂಸದರಾದ ಬಾಬ್ ಬ್ಲ್ಯಾಕ್‌ಮನ್, ಜಿಮ್ ಶಾನನ್ ಮತ್ತು ವೀರೇಂದ್ರ ಶರ್ಮಾ ಈ ಮೂವರು ‘ಹೌಸ್ ಆಫ್ ಕಾಮನ್ಸ್‌’ನಲ್ಲಿ ಈ ಪ್ರಸ್ತಾಪವನ್ನು ಮಂಡಿಸಿದರು. ಘಟನೆ ಅಥವಾ ಸಮಸ್ಯೆಯ ಬಗ್ಗೆ ಗಮನ ಸೆಳೆಯಲು ಬ್ರಿಟಿಷ್ ಸಂಸದರಿಗೆ ಇದು ಒಂದು ಮಾರ್ಗವಾಗಿದೆ. ಈ ಪ್ರಸ್ತಾಪದಲ್ಲಿ, ಇಸ್ಲಾಮಿ ಭಯೋತ್ಪಾದಕರು ಮತ್ತು ಅವರ ಬೆಂಬಲಿಗರು ಜಮ್ಮು ಮತ್ತು ಕಾಶ್ಮೀರದಲ್ಲಿ ಅಮಾಯಕ ಹಿಂದೂಗಳ ಮೇಲೆ ಜನವರಿ 1990 ರ ದಾಳಿಯ 34 ನೇ ಸ್ಮೃತಿದಿನದ ಸಂದರ್ಭದಲ್ಲಿ ಈ ಸದನವು ತೀವ್ರ ದುಃಖವನ್ನು ವ್ಯಕ್ತಪಡಿಸುತ್ತದೆ. ಈ ಸದನವು ಸಂತ್ರಸ್ತರ ಕುಟುಂಬಗಳಿಗೆ ಸಂತಾಪವನ್ನು ವ್ಯಕ್ತಪಡಿಸುತ್ತದೆ. ಹಿಂಸಾಚಾರದಿಂದ ಓಡಿಹೋದ ಹಿಂದೂಗಳಿಗೆ ಇನ್ನೂ ನ್ಯಾಯ ಸಿಕ್ಕಿಲ್ಲವಾದ್ದರಿಂದ ಇದು ಕಳವಳಕಾರಿ ಸಂಗತಿಯಾಗಿದೆ ಎಂದು ಹೇಳಿದೆ. (ಬ್ರಿಟಿಷ್ ಸಂಸದರಿಗೆ ಏನು ಗಮನಕ್ಕೆ ಬರುತ್ತದೆ ಅದು, ಹೆಚ್ಚಿನ ಭಾರತೀಯ ಸಂಸದರ ಗಮನಕ್ಕೆ ಬರುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು)

1. ಕಾಶ್ಮೀರದಲ್ಲಿ ಹಿಂದೂಗಳ ನಿರಂತರ ಹತ್ಯೆಗಳನ್ನು ಈ ಪ್ರಸ್ತಾಪದಲ್ಲಿ ಖಂಡಿಸಿದೆ. ಕಾಶ್ಮೀರದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಆಸ್ತಿಗಳ ಸ್ವಾಧೀನ ಇನ್ನೂ ನಡೆಯುತ್ತಿದೆ ಎಂದು ಪ್ರಸ್ತಾವನೆಯಲ್ಲಿ ಹೇಳಲಾಗಿದೆ.

2. ಭಾರತ ಸರಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೂಗಳ ನರಮೇಧವನ್ನು ಒಪ್ಪಿಕೊಳ್ಳುವ ತನ್ನ ಬದ್ಧತೆಯನ್ನು ಈಡೇರಿಸಬೇಕೆಂದು ಪ್ರಸ್ತಾಪದಲ್ಲಿ ಕರೆ ನೀಡಿದೆ.

3. ಭಾರತೀಯ ಸಂಸತ್ತು ಕಾಶ್ಮೀರ ಹತ್ಯಾಕಾಂಡದ ವಿರುದ್ಧ ಕಾನೂನನ್ನು ಅಂಗೀಕರಿಸಬೇಕು ಮತ್ತು ಕಾಶ್ಮೀರಿ ಹಿಂದೂಗಳಿಗೆ ನ್ಯಾಯವನ್ನು ಒದಗಿಸಬೇಕು ಎಂದು ಪ್ರಸ್ತಾಪದಲ್ಲಿ ಹೇಳಿದೆ. (ಬ್ರಿಟಿಷ್ ಸಂಸದೀಯರು ಇದನ್ನು ಮಾಡಬೇಕಾಗಿರುವುದು ಇದು ಭಾರತದ ಆಡಳಿತಗಾರರಿಗೆ ನಾಚಿಕೆಗೇಡಿನ ಸಂಗತಿ! – ಸಂಪಾದಕರು)

ಸಂಪಾದಕರ ನಿಲುವು

* ಅಂತಹ ಪ್ರಸ್ತಾಪವನ್ನು ಬ್ರಿಟಿಷ್ ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ; ಆದರೆ ಅಂದು ಭಾರತೀಯ ವ್ಯವಸ್ಥೆಯು ತುಳಿತಕ್ಕೊಳಗಾದ ಹಿಂದೂಗಳಿಗೆ ನ್ಯಾಯ ದೊರಕಿಸಿಕೊಡುವ ಪ್ರಯತ್ನವನ್ನೇ ಮಾಡಲಿಲ್ಲ, ನಾಚಿಕೆಗೇಡಿನ ಸಂಗತಿ !