ಜಗತ್ತಿನಲ್ಲಿ 57 ಲಕ್ಷಕ್ಕೂ ಹೆಚ್ಚು ಜನರ ಹೆಸರು ‘ರಾಮ’ ಆಗಿದೆ. ಹಾಗೆಯೇ ಭಾರತದಲ್ಲಿ ಪ್ರತಿ 245 ಜನರ ‘ರಾಮ’ ಹೆಸರನ್ನು ಹೊಂದಿದ್ದಾರೆ! 

ನವ ದೆಹಲಿ – ` ಫೋರಬಿಯರ್ಸ ಡಾಟ ಇನ್ ‘ಈ ಸಂಕೇತಸ್ಥಳದ ಅನುಸಾರ  ‘ರಾಮ’ ಈ ಹೆಸರು ದೇಶದಲ್ಲಿ ಮೊದಲ ಕ್ರಮಾಂಕದಲ್ಲಿದೆ.  2021 ರ ವರೆಗೆ ಭಾರತದ 140 ಕೋಟಿ 76 ಲಕ್ಷ ಜನಸಂಖ್ಯೆಯ ಪ್ರಕಾರ,  ದೇಶದ ಪ್ರತಿಯೊಬ್ಬ 245 ನೇ ವ್ಯಕ್ತಿಯ ಹೆಸರನ್ನು ರಾಮನ ಹೆಸರಿನ ಮೇಲೆ ಇಡಲಾಗಿದೆ.

ಜಗತ್ತಿನಲ್ಲಿ 57 ಲಕ್ಷದ 43 ಸಾವಿರದ 68 ಜನರ ಹೆಸರು ರಾಮ ಆಗಿದೆ. ಜನಪ್ರಿಯ ಹೆಸರಿನ ಯಾದಿಯಲ್ಲಿ ಇದು ಜಗತ್ತಿನ 58 ನೇ ಸ್ಥಾನದಲ್ಲಿದೆ. 2021 ರಲ್ಲಿ ಜಗತ್ತಿನ ಜನಸಂಖ್ಯೆ 788 ಕೋಟಿ 84 ಲಕ್ಷಗಳಿತ್ತು. ಇಂತಹ ಪರಿಸ್ಥಿತಿಯಲ್ಲಿ, ಜಗತ್ತಿನ ಪ್ರತಿ 1 ಸಾವಿರ 373 ನೇ ವ್ಯಕ್ತಿಯ ಹೆಸರು ರಾಮ ಆಗಿದೆ. ಭಾರತವನ್ನು ಹೊರತು ಪಡಿಸಿ   ಕಾಂಬೋಡಿಯಾ, ಫಿಜಿ, ಮಡಗಾಸ್ಕರ್, ಶ್ರೀಲಂಕಾ ಮೊದಲಾದ ದೇಶಗಳ ಜನರು ‘ರಾಮ’ ಹೆಸರನ್ನು  ಇಟ್ಟುಕೊಳ್ಳಲು ಇಷ್ಟಪಡುತ್ತಾರೆ.

ಸಂಪಾದಕರ ನಿಲುವು

* ಇದರಿಂದ ನಮಗೆ ಪ್ರಭು ಶ್ರೀರಾಮನು ಹಿಂದೂ ಸಮಾಜದ ಅವಿಭಾಜ್ಯ ಅಂಗವಾಗಿದೆಯೆನ್ನುವುದು ಗಮನಕ್ಕೆ ಬರುತ್ತದೆ.