ತೆಹರಾನ (ಇರಾನ್) – ಇರಾನ್ ಪಾಕಿಸ್ತಾನದ ಬಲೂಚಿಸ್ತಾನ ಪ್ರದೇಶದಲ್ಲಿನ ಜಿಹಾದಿ ಭಯೋತ್ಪಾದಕ ಸಂಘಟನೆ ‘ಜೈಶ್ ಉಲ ಅದಲ್’ದ ಎರಡು ನೆಲೆಯ ಮೇಲೆ ಕ್ಷಿಪಣಿ ಮತ್ತು ಡ್ರೋನ್ ಮೂಲಕ ದಾಳಿ ಮಾಡಿದೆ. ಇದರಲ್ಲಿ ೨ ಚಿಕ್ಕ ಮಕ್ಕಳು ಸಾವನ್ನಪ್ಪಿದ್ದಾರೆ ಹಾಗೂ ೨ ಮಕ್ಕಳು ಗಾಯಗೊಂಡಿದ್ದಾರೆ, ಎಂದು ಪಾಕಿಸ್ತಾನ ದಾವೆ ಮಾಡಿದೆ. ಪಾಕಿಸ್ತಾನವು ಆ ಸ್ಥಳದಲ್ಲಿ ಭಯೋತ್ಪಾದಕ ಕೇಂದ್ರ ಇತ್ತು ಮತ್ತು ಅಲ್ಲಿಯ ಭಯೋತ್ಪಾದಕರು ಹತರಾಗಿದ್ದಾರೆ, ಎಂದು ಯಾವುದು ಮಾಹಿತಿ ನೀಡಿಲ್ಲ. ಈ ಘಟನೆಯ ಬಗ್ಗೆ ಪಾಕಿಸ್ತಾನ ತನ್ನ ದೇಶದಲ್ಲಿ ಇರಾನ್ ಅಧಿಕಾರಿಗೆ ಕರೆದಿದ್ದಾರೆ. ‘ಪರಿಣಾಮದ ಸಂಪೂರ್ಣ ಜವಾಬ್ದಾರಿ ಇರಾನ್ ಮೇಲೆ ಇರುವುದು, ಎಂದು ಅವರಿಗೆ ಹೇಳಿದೆ.
೧. ಇರಾನ್ ನ ಸರಕಾರಿ ವಾರ್ತಾ ಸಂಸ್ಥೆ ‘ಮೇಹರ್’ನ ವಾರ್ತೆಯ ಪ್ರಕಾರ ಕುಹೆ ಸಬ್ಜ ಪ್ರದೇಶದಲ್ಲಿ ಜೈಶ್ ಉಲ್ ಆದಲ್ ದ ಕೇಂದ್ರ ಇದು ಎಲ್ಲಕ್ಕಿಂತ ದೊಡ್ಡ ನೆಲೆಗಳಲ್ಲಿ ಒಂದಾಗಿದೆ. ದಾಳಿಯ ಬಗ್ಗೆ ಪಾಕಿಸ್ತಾನದಿಂದ ಮನವಿ ಪ್ರಸಾರ ಮಾಡಿದೆ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯದಿಂದ, ಇರಾನ್ ನಿಂದ ವಾಯು ಕ್ಷೇತ್ರದ ಉಲ್ಲಂಘನೆ ಆಗಿರುವುದನ್ನು ನಾವು ಕಠೋರ ಶಬ್ದದಲ್ಲಿ ಖಂಡಿಸಿದ್ದೇವೆ. ಈ ಘಟನೆ ಸಂಪೂರ್ಣವಾಗಿ ಅಸ್ವಿಕಾರಾರ್ಹವಾಗಿದೆ ಮತ್ತು ಅದರ ಪರಿಣಾಮ ಗಂಭೀರವಾಗಬಹುದು ಎಂದು ಹೇಳಿದೆ.
೨. ಇರಾನ್‌ನಿಂದ ನಡೆಸಲಾದ ಈ ದಾಳಿಯ ಮೊದಲು ಅದು ಇರಾಕದ ಅರೆ ಸ್ವಯತ್ತ ಕೂರ್ದಿಸ್ಥಾನ ಪ್ರದೇಶದಲ್ಲಿನ ಇಸ್ರೈಲ್‌ನ ಮೊಸಾದ್ ಗುಪ್ತಚರ ಸಂಸ್ಥೆಯ ಪ್ರಧಾನ ಕಚೇರಿಯ ಮೇಲೆ ದಾಳಿ ನಡೆಸಿತ್ತು. ಇದಲ್ಲದೆ ಇಸ್ಲಾಮಿಕ್ ಸ್ಟೇಟ್ ನ ವಿರುದ್ಧ ಸಿರಿಯಾದಲ್ಲಿ ಕೂಡ ದಾಳಿ ನಡೆಸಿತ್ತು.
Pakistan accuses Iran of launching airstrike on its territory, killing 2 children https://t.co/mmo456NX5w
— The Times of Israel (@TimesofIsrael) January 17, 2024
ಸಂಪಾದಕರ ನಿಲುವು*ಪಾಕಿಸ್ತಾನ ಎಂದರೆ ಭಯೋತ್ಪಾದಕ ದೇಶ, ಹೀಗೆ ಜಗತ್ತಿನಲ್ಲಿ ಅಧಿಕೃತವಾಗಿ ಘೋಷಣೆ ಮಾಡುವುದು ಆವಶ್ಯಕವಾಗಿದೆ ! ಜಗತ್ತಿನಲ್ಲಿ ಈ ಮೂಲಕ ಪಾಕಿಸ್ತಾನದ ಮೇಲೆ ಎಲ್ಲಾ ರೀತಿಯಿಂದ ಬಹಿಷ್ಕಾರ ಹೇರಬೇಕು, ಆಗಲೇ ಅದು ದಾರಿಗೆ ಬರುವುದು ! |