ಶ್ರೀರಾಮ ಮಂದಿರದ ಕಾಮಗಾರಿ ಪೂರ್ಣಗೊಳ್ಳದಿದ್ದರೂ ದೇವತೆಗಳ ಪ್ರತಿಷ್ಠಾಪನೆಗೆ ಶಾಸ್ತ್ರದಿಂದ ಒಪ್ಪಿಗೆ !- ವಾರಾಣಸಿಯ ಗಣೇಶ್ವರ ಶಾಸ್ತ್ರಿ ದ್ರವೀಡಜಿ

ಕರ್ಮಕಾಂಡ ಪ್ರದೀಪ ಮುಂತಾದ ಧರ್ಮ ಗ್ರಂಥದ ಆಧಾರದಲ್ಲಿ ವಾರಾಣಸಿಯ ಗಣೇಶ್ವರ ಶಾಸ್ತ್ರಿ ದ್ರವೀಡಜಿ ಇವರು ಮಂಡಿಸಿರುವ ಸೂತ್ರಗಳು !

ವಾರಣಾಸಿ – ‘ಶ್ರೀರಾಮಮಂದಿರದ ಕಳಸದ ಕಾರ್ಯ ಪೂರ್ಣವಾಗದೆ ಅಪೂರ್ಣವಾಗಿರುವ ಮಂದಿರದಲ್ಲಿ ಶ್ರೀರಾಮಲಲ್ಲಾನ ಪ್ರತಿಷ್ಠಾಪನೆ ಆಗುವುದು ಯೋಗ್ಯವಲ್ಲ, ಹೀಗೆ ಅನೇಕರು ಆಕ್ಷೇಪ ವ್ಯಕ್ತಪಡಿಸಲಾಗುತ್ತಿದೆ. ಇದರ ಬಗ್ಗೆ ವಾರಾಣಸಿಯ ಗಣೇಶ್ವರ ಶಾಸ್ತ್ರಿ ದ್ರವೀಡಜಿ ಇವರು, ಮಂದಿರದ ಅಭಿಷೇಕ ಎರಡು ರೀತಿಯಲ್ಲಿ ಮಾಡಲಾಗುತ್ತದೆ, ಮೊದಲು ಸಂಪೂರ್ಣ ಮಂದಿರ ಕಟ್ಟಲಾಗುತ್ತದೆ ಆಗ, ಇನ್ನೊಂದು ಮಂದಿರದ ಕೆಲವು ಕಾರ್ಯ ಉಳಿದಿದ್ದರೂ ಅಭಿಷೇಕ ಮಾಡುತ್ತಾರೆ ಇದು ಶಾಸ್ತ್ರದಿಂದ ಸಮ್ಮತವಾಗಿದೆ ಎಂದು ಹೇಳಿದರು.

ಗಣೇಶ್ವರ ಶಾಸ್ತ್ರಿ ಇವರು ಮಾತು ಮುಂದುವರೆಸುತ್ತಾ,

೧. ಎರಡು ರೀತಿಯ ಅಭಿಷೇಕ (ಪ್ರತಿಷ್ಠಾಪನೆ) ಇರುತ್ತದೆ. ಇದರಲ್ಲಿ ದೇವತೆಯ ಅಭಿಷೇಕ ಮತ್ತು ಮಂದಿರದ ಕಳಶ ಅಭಿಷೇಕ ಇದರ ಸಮಾವೇಶ ಇದೆ. ಸಂಪೂರ್ಣ ಮಂದಿರ ಕಟ್ಟಿದ ನಂತರ ಗರ್ಭಗುಡಿಯಲ್ಲಿ ದೇವತೆಯ ಅಭಿಷೇಕ ಮಾಡಲಾಗುತ್ತದೆ ಹಾಗೂ ಸನ್ಯಾಸಿಗಳಿಂದ ಮಂದಿರದ ಕಳಸ ಅಭಿಷೇಕ ಮಾಡಲಾಗುತ್ತದೆ. ಕಳಸದ ಅಭಿಷೇಕ ಗೃಹಸ್ತರು ಮಾಡುವುದಿಲ್ಲ.

೨. ಎಲ್ಲಿ ಮಂದಿರ ಪೂರ್ಣವಾಗಿಲ್ಲ, ಅಲ್ಲಿ ದೇವತೆಯ ಅಭಿಷೇಕದ ನಂತರ ಮಂದಿರ ಪೂರ್ಣ ಕಟ್ಟಿದ ನಂತರ ಯಾವುದಾದರೂ ಶುಭದಿನದಂದು ಶುಭ ಮುಹೂರ್ತದಲ್ಲಿ ಮಂದಿರದ ಮೇಲಿನ ಕಳಶಕ್ಕೆ ಅಭಿಷೇಕ ಮಾಡಲಾಗುತ್ತದೆ.

೩. ಮೇಲಿನ ಸೂತ್ರಗಳಿಗಾಗಿ ಗಣೇಶ್ವರ ಶಾಸ್ತ್ರಿ ಇವರು ವೈದಿಕ ಶಾಸ್ತ್ರದ ತಜ್ಞರಾದ ಅಣ್ಣ ಶಾಸ್ತ್ರೀ ಇವರು ಬರೆದಿರುವ ‘ಕರ್ಮಕಾಂಡ ಪ್ರದೀಪ’ ಗ್ರಂಥದಲ್ಲಿನ ೩೩೮ ಈ ಪುಟದಲ್ಲಿನ ಆಧಾರ ನೀಡಿದ್ದಾರೆ.

೪. ‘ಪಂಚರಾತ್ರಾಗಮ’ದಲ್ಲಿ ಈಶ್ವರ ಸಂಹಿತೆಯ ಅಗ್ರಗಣ್ಯ ಶ್ಲೋಕ ಕೂಡ ಈ ವ್ಯವಸ್ಥೆಯ ವಿರೋಧದಲ್ಲಿ ಇಲ್ಲ. ಬೃಹನ್ನಾರಾದಿಯ ಪುರಾಣದಲ್ಲಿ ಕೂಡ ಈ ರೀತಿಯ ಅಭಿಷೇಕದ ಸಂದರ್ಭ ದೊರೆಯುತ್ತದೆ.

೫. ಸಾರ್ವಜನಿಕ ವ್ಯವಹಾರದಲ್ಲಿ ಯಾವುದೋ ಒಂದು ಮಾಳಿಗೆ ಕಟ್ಟಿದ ನಂತರ ಕೂಡ ಜನರು ವಾಸ್ತು ಶಾಂತಿ ಮಾಡಿ ಗೃಹಪ್ರವೇಶ ಮಾಡುತ್ತಾರೆ. ಅದರ ನಂತರ ಮನೆಯ ಮೇಲ್ಭಾಗ ಕಟ್ಟುತ್ತಾರೆ. ಆದ್ದರಿಂದ ‘ಪೂರ್ಣ ವಾಸ್ತು ಪೂರ್ಣ ಆದಮೇಲೆ ವಾಸ್ತು ಪ್ರವೇಶ ಆಗುವುದು’, ಹೀಗೆ ಹೇಳಲಾಗುವುದಿಲ್ಲ. ಶ್ರೀರಾಮ ಮಂದಿರದ ಸಂದರ್ಭದಲ್ಲಿ ಕೂಡ ಈ ನಿಯಮ ಅನ್ವಯಿಸುತ್ತದೆ. ಇಲ್ಲಿ ಕೂಡ ಅಭಿಷೇಕ ಮಾಡುವ ಮೊದಲು ವಾಸ್ತು ಶಾಂತಿ, ಯಜ್ಞ ಮತ್ತು ಬ್ರಾಹ್ಮಣ ಭೋಜನ ಇರುವುದು.

೬. ಮಂದಿರದ ಬಾಗಿಲು ಕೂಡಿಸಲಾಗಿದೆ. ಗರ್ಭಗೃಹ ಪೂರ್ಣವಾಗಿ ಕಲ್ಲುಗಳಿಂದ ಕಟ್ಟಲಾಗಿದೆ. ಆದ್ದರಿಂದ ಶ್ರೀ ರಾಮನ ಪೂಜೆ ಮಾಡಲು ದೋಷವಿಲ್ಲ. ಮಂದಿರದ ಕಾರ್ಯಾ ಪೂರ್ಣ ಆದ ನಂತರ ವಿಧಿಗಳು ಪ್ರದೀಪದಲ್ಲಿ ನೀಡಿರುವ ‘ಪ್ರತಿಷ್ಠಾಸರ ದೀಪಿಕಕೋಟ ಕಳಸಾರೋಪಣ ವಿಧಿ’ಯ ಪ್ರಕಾರ ವೃಕ್ಷಾರೋಪಣ ಮಾಡಲಾಗುವುದು ಎಂದು ಹೇಳಿದರು.