ಶ್ರೀರಾಮನ ಜಪ ಮಾಡುವಂತೆ ಕರೆ ನೀಡಿದ್ದ ಖ್ಯಾತ ಗಾಯಕಿ ಚಿತ್ರಾ ಮೇಲೆ ಸಾಮಾಜಿಕ ಮಾಧ್ಯಮದಿಂದ ಟೀಕೆ !

ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಸಮಾರಂಭದ ನಿಮಿತ್ತದಿಂದ ಕರೆ !

ತಿರುವನಂತಪುರಂ – ಕೇರಳದ ಖ್ಯಾತ ಗಾಯಕಿ ಕೆ.ಎಸ್. ಚಿತ್ರಾ ಇವರು ಸಾಮಾಜಿಕ ಮಾಧ್ಯಮದಲ್ಲಿ ‘ಪೋಸ್ಟ್’ ಮಾಡಿ ತಮ್ಮ ಅಭಿಮಾನಿಗಳಿಗೆ ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಸಮಾರಂಭದದಂದು ದೀಪಗಳನ್ನು ಹಚ್ಚುವಂತೆ ಮತ್ತು ಪ್ರಭು ಶ್ರೀರಾಮನ ನಾಮಜಪವನ್ನು ಮಾಡುವಂತೆ ಕರೆ ನೀಡಿದ್ದರು. ಈ ಪೋಸ್ಟ ಮೇಲೆ ಅವರ ಅಭಿಮಾನಿಗಳ ಅಭಿನಂದಿಸಿದರು. ಆದರೆ ವಿರೋಧಿಗಳು ಅದನ್ನು ಆಕ್ಷೇಪಿಸಿದರು. ಕೆಲವರು `ಚಿತ್ರಾ ಇವರು ಶ್ರೀರಾಮಮಂದಿರಕ್ಕೆ ಬೆಂಬಲ ನೀಡುವ ಆವಶ್ಯಕತೆಯಿರಲಿಲ್ಲ’, ಎಂದರು, ಇನ್ನೂ ಕೆಲವು ‘ಶ್ರೀರಾಮ ಮಂದಿರಕ್ಕೆ ಬೆಂಬಲ ನೀಡಿ ಅವರು ಒಂದು ರಾಜಕೀಯ ಪಕ್ಷದ ಪರವಾಗಿದ್ದಾರೆ’, ಎಂದು ಹೇಳಿದ್ದಾರೆ.

ಕೇರಳವನ್ನು `ತಾಲಿಬಾನ’ ಆಗಲು ಬಿಡುವುದಿಲ್ಲ ! – ವಿ. ಮುರಳಿಧರನ, ಕೇಂದ್ರ ಸಚಿವ

ಒಂದು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುವಾಗ ವಿ. ಮುರಳೀಧರನ್ ಇವರು, ಚಿತ್ರಾ ಇವರಿಗೆ ಸಾಮಾಜಿಕ ಮಾಧ್ಯಮಗಳಿಂದ ಬೆದರಿಕೆ ಹಾಕಲಾಗುತ್ತಿದೆ ಎಂದು ಹೇಳಿದ್ದಾರೆ. ಅವರನ್ನು ಗುರಿ ಮಾಡಲಾಗುತ್ತಿದೆ. ಕೇರಳದಲ್ಲಿ ದೀಪ ಹಚ್ಚುವುದು ಮತ್ತು ಪ್ರಭು ಶ್ರೀರಾಮನ ನಾಮಜಪ ಮಾಡುವುದು ಅಪರಾಧವೇ ? ಇಂತಹ ಗೂಂಡಾಗಿರಿಯ ಬಗ್ಗೆ ಪೋಲೀಸರು ಏಕೆ ಸುಮ್ಮನಿದ್ದಾರೆ ? ಶಬರಿಮಲೆಯ ಸಂಪ್ರದಾಯವನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದ ಜನರೇ ಚಿತ್ರಾ ಅವರನ್ನು ವಿರೋಧಿಸುತ್ತಿದ್ದಾರೆ. ಕೇರಳದ ವಿರೋಧಿ ಮತ್ತು ಆಡಳಿತ ಪಕ್ಷಗಳು ಇಂತಹ ಅಂಶಗಳನ್ನು ಪ್ರೋತ್ಸಾಹಿಸುತ್ತವೆ ಎಂದು ಹೇಳಿದರು.

ಕೆ.ಎಸ್. ಚಿತ್ರಾ ಇವರು 40 ವರ್ಷಗಳಿಂದ ಗಾಯನ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ !

ಚಿತ್ರಾ ಅವರು 60 ವರ್ಷದವರಾಗಿದ್ದು, ಅವರು 40 ವರ್ಷಗಳಿಂದ ಗಾಯನ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಅವರು ‘ಲಿಟಲ್ ನೈಟಿಂಗೇಲ್ ಆಫ್ ಇಂಡಿಯಾ’ ಎಂದು ಪ್ರಸಿದ್ಧರಾಗಿದ್ದಾರೆ. ಅವರು ವಿವಿಧ ಭಾಷೆಗಳಲ್ಲಿ 25 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಧ್ವನಿಮುದ್ರಣ ಮಾಡಿದ್ದಾರೆ.

ಸಂಪಾದಕೀಯ ನಿಲುವು

ಚಿತ್ರಾ ಕೇರಳದವರಾಗಿದ್ದಾರೆ. ಅಲ್ಲಿಯ ಸಾಮ್ಯವಾದಿಗಳು (ಕಮ್ಯುನಿಸ್ಟರು) ಹಿಂದೂಗಳ ಸಂಪ್ರದಾಯಗಳನ್ನು ಪಾಲಿಸುವ ಮತ್ತು ಬೆಂಬಲಿಸುವವರನ್ನು ಹೇಗೆ ವಿರೋಧಿಸುತ್ತಾರೆ ಎಂಬುದು ಇದರಿಂದ ತಿಳಿಯುತ್ತದೆ !
ಬೇರೆ ಸಮಯದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಮತ್ತು ವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಡಂಗುರ ಸಾರುವವರು ಇಂತಹ ಸಮಯದಲ್ಲಿ ಯಾವ ಬಿಲದಲ್ಲಿ ಅಡಗಿಕೊಳ್ಳುತ್ತಾರೆ ?