ನವ ದೆಹಲಿ – ಅಮೇರಿಕೆಯಿಂದ ಖಲಿಸ್ತಾನಿವಾದಿ ಕಾರ್ಯಾಚರಣೆ ನಡೆಸುವ ನಿಷೇಧಿಸಲ್ಪಟ್ಟಿರುವ ಖಲಿಸ್ತಾನಿ ಭಯೋತ್ಪಾದಕ ಸಿಖ್ ಆಫ್ ಜಸ್ಟೀಸ ಸಂಘಟನೆಯ ಮುಖಂಡ ಗುರುಪತವಂತ ಸಿಂಹ ಪನ್ನೂ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಮುಖ್ಯಮಂತ್ರಿ ಮಾನ ಅವರಿಗೆ ಪನ್ನು ಬೆದರಿಕೆ ಹಾಕುವಾಗ, ಪನ್ನೂ ಎಲ್ಲಾ ಗೂಂಡಾಗಳಿಗೆ ಜನವರಿ 26 ರಂದು ಗಣರಾಜ್ಯೋತ್ಸವದ ನಿಮಿತ್ತದಿಂದ ಒಂದೆಡೆ ಸೇರಲು ಕರೆ ನೀಡಿದ್ದಾನೆ ಎನ್ನುವ ಮಾಹಿತಿಯನ್ನು ಪಂಜಾಬ ಪೊಲೀಸಿನ ಹಿರಿಯ ಮೂಲಗಳು ಮಾಹಿತಿ ನೀಡಿದೆ. ಪಂಜಾಬಿನ ಪೊಲೀಸ ಮಹಾನಿರ್ದೇಶಕ ಗೌರವ ಯಾದವ ಇವರು, ಗೂಂಡಾಗಳ ವಿರುದ್ಧ ನಾವು ಕಠಿಣ ನೀತಿ ಅನುಸರಿಸುತ್ತಿದ್ದು, ಅನುಚಿತ ಕೆಲಸ ಮಾಡುವವರಿಗೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಹೇಳಿದ್ದಾರೆ.
#Khalistaniterrorist Gurpatwant Singh Pannun threatened to kill #Punjab CM #BhagwantMann
On one hand, the #UnitedStates arrested an Indian on the suspicion of killing #Pannun, and on the other, it doesn’t act against Pannun who is openly threatening India of a parliamentary… pic.twitter.com/nta8ZkKdMT
— Sanatan Prabhat (@SanatanPrabhat) January 16, 2024
ಸಂಪಾದಕೀಯ ನಿಲುವುಪನ್ನುವಿನ ತಥಾಕಥಿತ ಹತ್ಯೆಯ ಸಂಚು ಮಾಡಿರುವ ಬಗ್ಗೆ ಭಾರತೀಯನನ್ನು ಬಂಧಿಸುವ ಅಮೇರಿಕಾ ಭಾರತದ ಸಂಸತ್ತಿನ ಮೇಲೆ ದಾಳಿ ನಡೆಸುವ ಮತ್ತು ಭಾರತದ ಮುಖ್ಯಮಂತ್ರಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕುವ ಪನ್ನುವನ್ನು ಮಾತ್ರ ಬಂಧಿಸುವುದಿಲ್ಲ. ಇದು ಅಮೇರಿಕೆಯ ದ್ವಂದ್ವ ನೀತಿಯಾಗಿದೆಯೆನ್ನುವುದನ್ನು ಗಮನಿಸಿ. ಇಂತಹ ಅಮೇರಿಕಾದ ಮೇಲೆ ಭಾರತ ಎಂದಿಗೂ ವಿಶ್ವಾಸವಿಡಲು ಸಾಧ್ಯವಿಲ್ಲ ! |