ಶ್ರೀರಾಮಭಕ್ತ ಬದರಿ ವಿಶ್ವಕರ್ಮ ತನ್ನ ಸ್ವಂತ ಜಟೆಯಿಂದ ರಾಮರಥವನ್ನು ಎಳೆದು ಜನವರಿ 22 ರಂದು ಅಯೋಧ್ಯೆಗೆ ತಲುಪಲಿದ್ದಾರೆ !

ಇದನ್ನು ಶ್ರೀರಾಮ ಮಂದಿರ ಪೂರ್ಣಗೊಂಡ ನಂತರ 1992 ರಲ್ಲಿ ಪ್ರತಿಜ್ಞೆ ಮಾಡಿದ್ದನು.

ದಮೋಹ (ಮಧ್ಯಪ್ರದೇಶ) – ಶ್ರೀರಾಮ ಮಂದಿರದ ಉದ್ಘಾಟನೆಗೆ ಒಂದು ವಾರದ ಉಳಿದಿದೆ. ಈ ಸುವರ್ಣ ಕ್ಷಣ ಸಮೀಪಿಸುತ್ತಿರುವಂತೆ, ಭಾರತದಾದ್ಯಂತ ರಾಮಭಕ್ತರು ಶ್ರೀರಾಮನಿಗಾಗಿ ಮಾಡಿದ ಪ್ರತಿಜ್ಞೆಗಳು ಜಗತ್ತಿನೆದುರಿಗೆ ಬಹಿರಂಗವಾಗುತ್ತಿದೆ. ಇವರಲ್ಲಿ ಬದರಿ ವಿಶ್ವಕರ್ಮನು ಒಬ್ಬನಾಗಿದ್ದಾನೆ. ಅವರು 1992 ರಲ್ಲಿ, ಅಂದರೆ ಈಗಿನಿಂದ 32 ವರ್ಷಗಳ ಹಿಂದೆಯೇ ರಾಮಮಂದಿರ ಯಾವಾಗ ನಿರ್ಮಾಣವಾಗುವುದೋ, ಆಗ ಅವರು ಕಾಲ್ನಡಿಗೆಯಲ್ಲಿ ರಾಮನ ರಥವನ್ನು ತಮ್ಮ ಸ್ವಂತ ಜಟೆಯಿಂದ ಎಳೆದು ಅಯೋಧ್ಯೆಯನ್ನು ತಲುಪುವುದಾಗಿ ಪ್ರತಿಜ್ಞೆ ಮಾಡಿದ್ದರು. ಅವರ ಇಚ್ಛೆ ಪೂರ್ಣವಾಗುತ್ತಿರುವುದರಿಂದ ಅವರು ಜನವರಿ 11 ರಂದು ದಮೋಹ ಜಿಲ್ಲೆಯ ಬಟಿಯಾಗಡದಿಂದ ರಾಮರಥವನ್ನು ಎಳೆದುಕೊಂಡು ಕಾಲ್ನಡಿಗೆಯಲ್ಲಿ ಹೊರಟಿದ್ದಾರೆ.

1. ಜನವರಿ 14 ರಂದು ಮಹೋಬಾದ ಸಂಕಟಮೋಚನ ದೇವಸ್ಥಾನದಲ್ಲಿ ಅವರನ್ನು ಸ್ವಾಗತಿಸಲಾಯಿತು. ಬದ್ರಿಯವರು ಮಾತನಾಡುತ್ತಾ, `ನನ್ನ ಒಟ್ಟು ಕಾಲ್ನಡಿಗೆಯ ಪ್ರವಾಸ 566 ಕಿಲೋಮೀಟರ್ ಇದ್ದು, ನಾನು ಪ್ರತಿದಿನ 50 ರಿಂದ 60 ಕಿಲೋಮೀಟರ್ ಪ್ರಯಾಣಿಸಿ, ಜನವರಿ 22 ರಂದು ಅಯೋಧ್ಯೆಯನ್ನು ತಲುಪುತ್ತೇನೆ.’ ಎಂದು ಹೇಳಿದರು.

2. ಈ ಸಮಯದಲ್ಲಿ ಅವರು, ಇಲ್ಲಿಯವರೆಗೆ ಯಾರಿಗೂ ಮಾಡಲು ಸಾಧ್ಯವಾಗದೇ ಇದ್ದುದನ್ನು ಪ್ರಧಾನಮಂತ್ರಿ ಮೋದಿ ಮತ್ತು ಯೋಗಿ ಆದಿತ್ಯನಾಥ ಇವರು ಮಾಡಿ ತೋರಿಸಿದ್ದಾರೆ. ಅವರು ಸಂತರಾಗಿದ್ದಾರೆ. ನಾನು ಅವರನ್ನು ಸಂತರೆಂದು ನಂಬುತ್ತೇನೆ. ಅವರಿಗೆ ಅತ್ಯಧಿಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಶ್ರೀರಾಮಭಕ್ತರಿಗೆ ಇಂದು ಎಷ್ಟು ಪ್ರೀತಿ ಸಿಗುತ್ತಿದೆಯೋ, ಅದನ್ನು ಈ ಹಿಂದೆ ಯಾವತ್ತೂ ಸಿಕ್ಕಿರಲಿಲ್ಲ.

3. ಬದರಿಯವರು ಛತರಪುರ ಜಿಲ್ಲೆಯನ್ನು ತಲುಪಿದ ಬಳಿಕ ಅಲ್ಲಿನ ಬಾಗೇಶ್ವರ ಧಾಮದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರ ಆಶೀರ್ವಾದವನ್ನು ಪಡೆಯಲಿದ್ದಾರೆ ಎಂದು ಹೇಳಿದರು.