ಶ್ರೀರಾಮನಜನ್ಮಭೂಮಿಯ 505 ವರ್ಷಗಳ ಹೋರಾಟದ ಕಥೆಯನ್ನು ತೋರಿಸುವ ‘695’ ಚಲನಚಿತ್ರ ಬಿಡುಗಡೆಗೊಳ್ಳಲಿದೆ !

ಜನವರಿ 19 ರಂದು ದೇಶಾದ್ಯಂತ ಪ್ರದರ್ಶನ

ನವದೆಹಲಿ – ಶ್ರೀರಾಮನಜನ್ಮಭೂಮಿಯ 505 ವರ್ಷಗಳ ಹೋರಾಟದ ಹಿನ್ನೆಲೆಯಲ್ಲಿ ‘ಶದಾನಿ ಫಿಲಂಸ್’ ನಿಂದ ಚಲನಚಿತ್ರವನ್ನು ನಿರ್ಮಿಸಲಾಗಿದೆ. ‘695’ ಎಂದು ಈ ಹಿಂದಿ ಚಲನಚಿತ್ರದ ಹೆಸರಾಗಿದ್ದು, ಅದು ಜನವರಿ 19 ರಂದು ದೇಶಾದ್ಯಂತ 800 ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ. ಅದಕ್ಕಿಂತ ಮೊದಲು ದೆಹಲಿಯ ಕೆನ್ನಾಟ್ ಪ್ಲೇಸ್ ಸ್ಥಳದಲ್ಲಿರುವ ‘ಪಿ.ವಿ.ಆರ್. ‘ಪ್ಲಾಜಾ’ ಈ ಚಲನಚಿತ್ರಮಂದಿರಗಳಲ್ಲಿ ಗಣ್ಯ ವ್ಯಕ್ತಿಗಳಿಗಾಗಿ ಪ್ರದರ್ಶನವನ್ನು ಆಯೋಜಿಸಲಾಗಿತ್ತು.

ಆ ಸಮಯದಲ್ಲಿ `ಶದಾನಿ ದರಬಾರ’ ಈ ಆಧ್ಯಾತ್ಮಿಕ ಸಂಸ್ಥೆಯ ಗೌರವಾನ್ವಿತ ಯುಧಿಷ್ಠಿರ ಮಹಾರಾಜ, ಕಥಾಕಾರ ಡಾ. ಮನಮೋಹನ ಕೃಷ್ಣ, ಪಂ ರಾಮ ನರೇಶ ತಿವಾರಿ ಮಹಾರಾಜ, ವಿಶ್ವ ಹಿಂದು ಪರಿಷತ್ತಿನ ಅಂತರರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ನ್ಯಾಯವಾದಿ ಆಲೋಕ ಕುಮಾರ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ, ‘ಸುದರ್ಶನ ಟಿವಿ’ ವಾಹಿನಿಯ ಸಂಪಾದಕ ಶ್ರೀ. ಸುರೇಶ ಚವ್ಹಾಣಕೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರಾದ ಶ್ರೀ. ಇಂದ್ರೇಶ ಕುಮಾರ, ದೂರದರ್ಶನದಲ್ಲಿ ಪ್ರಸಾರವಾದ ‘ರಾಮಾಯಣ’ ಧಾರಾವಾಹಿಯಲ್ಲಿ ಶ್ರೀರಾಮನ ಪಾತ್ರವನ್ನು ನಿರ್ವಹಿಸಿದ ನಟ ಅರುಣ್ ಗೋವಿಲ್ ಮೊದಲಾದವರು ಉಪಸ್ಥಿತರಿದ್ದರು. ಈ ಸಮಯದಲ್ಲಿ ಎಲ್ಲಾ ಗಣ್ಯರನ್ನು ಗೌರವಿಸಲಾಯಿತು.

ಶ್ರೀ ಕೃಷ್ಣನ ಜನ್ಮಸ್ಥಳ ಮತ್ತು ಕಾಶಿ ವಿಶ್ವನಾಥ ದೇವಾಲಯದ ಮುಕ್ತಿ, ಜೊತೆಗೆ ಹಿಂದೂ ರಾಷ್ಟ್ರದ ಸ್ಥಾಪನೆಯ ಅಡಿಪಾಯವನ್ನು ನಿರ್ಮಿಸಲಾಗುವುದು ! – ಸದ್ಗುರು ಡಾ.ಪಿಂಗಳೆ

ಚಲನಚಿತ್ರಕ್ಕೆ ಸಂಬಂಧಿಸಿದಂತೆ ಸದ್ಗುರು ಡಾ.ಪಿಂಗಳೆ ಮಾತನಾಡಿ, ಕಳೆದ 505 ವರ್ಷಗಳಿಂದ ಹಿಂದೂಗಳು ಶ್ರೀರಾಮ ಮಂದಿರಕ್ಕಾಗಿ ಶಾರೀರಿಕ ಮತ್ತು ಮಾನಸಿಕ ಹೀಗೆ ಎಲ್ಲ ಹಂತಗಳಲ್ಲಿ ಹೋರಾಟವನ್ನು ನಡೆಸಿದ್ದಾರೆ. 2 ಗಂಟೆಗಳ ಈ ಚಲನಚಿತ್ರಗಳಲ್ಲಿ 505 ವರ್ಷಗಳ ಹೋರಾಟದ ಪ್ರಯತ್ನಗಳನ್ನು ಅತ್ಯಂತ ಸುಂದರವಾಗಿ ಚಿತ್ರಿಸಲಾಗಿದೆ. ಚಲನಚಿತ್ರದಲ್ಲಿ ಯಾವ ರೀತಿ, ಶ್ರೀರಾಮನ ಜನ್ಮಭೂಮಿಯ ಮೇಲೆ ಶ್ರೀರಾಮ ಮಂದಿರದ ನಿರ್ಮಾಣದ ಹೋರಾಟವನ್ನು ತೋರಿಸಲಾಗಿದೆಯೋ, ಇದರಿಂದ ಒಂದು ರೀತಿಯಲ್ಲಿ ಶ್ರೀಕೃಷ್ಣ ಜನ್ಮಭೂಮಿ ಮತ್ತು ಕಾಶಿ ವಿಶ್ವನಾಥ ದೇವಸ್ಥಾನದ ಮುಕ್ತಿ ಹಾಗೂ ಹಿಂದೂ ರಾಷ್ಟ್ರದ ಸ್ಥಾಪನೆಯ ಅಡಿಪಾಯ ನಿರ್ಮಿಸಲಾಗುವುದು.

ಚಲನಚಿತ್ರದ ‘695’ ಹೆಸರಿನ ಅರ್ಥ!

ಈ ಚಲನಚಿತ್ರದ ನಿರ್ಮಾಪಕರು ಶ್ಯಾಮ ಚಾವ್ಲಾ ಆಗಿದ್ದಾರೆ. ಅವರು ಮಾತನಾಡುತ್ತಾ, ಶ್ರೀರಾಮ ಮಂದಿರಕ್ಕೆ 6, 9 ಮತ್ತು 5 ಸಂಖ್ಯೆಗಳು ಮಹತ್ತರವಾದ ಕೊಡುಗೆಗಳನ್ನು ನೀಡಿವೆ, ಡಿಸೆಂಬರ್ 6, 1992 ರಂದು ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಕೆಡವಲಾಯಿತು. ನವೆಂಬರ್ 9, 2019 ರಂದು, ಸರ್ವೋಚ್ಚ ನ್ಯಾಯಾಲಯದ ತೀರ್ಪು ಶ್ರೀರಾಮ ಮಂದಿರದ ಪರವಾಗಿ ಬಂದಿತು ಮತ್ತು ನಂತರ ಆಗಸ್ಟ್ 5, 2020 ರಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಗವಾನ ಶ್ರೀ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು ಎಂದು ಹೇಳಿದರು.