ಶಾಂತಿ ಮತ್ತು ಜ್ಞಾನದ ಹುಡುಕಾಟದಲ್ಲಿದ್ದ ಅಮೇರಿಕಾದ ೯೦ ನಾಗರಿಕರು ಭಾರತಕ್ಕೆ : ಹರಿದ್ವಾರದಲ್ಲಿ ಸನಾತನ ಧರ್ಮ ಸ್ವೀಕಾರ !

ಹರಿದ್ವಾರ (ಉತ್ತರಾಖಂಡ) – ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ನಾಯಕರು ಅನೇಕ ಸಲ ಸನಾತನ ಧರ್ಮದ ವಿರುದ್ಧ ಹೇಳಿಕೆ ನೀಡುತ್ತಾರೆ; ಆದರೆ ಸನಾತನ ಧರ್ಮದ ಧ್ವಜ ಮಾತ್ರ ಜಗತ್ತಿನಾದ್ಯಂತ ಹಾರುತ್ತಿದೆ. ಶಾಂತಿ ಮತ್ತು ಜ್ಞಾನದ ಸಂದೇಶ ನೀಡುವ ಸನಾತನ ಧರ್ಮದಿಂದ ಸಂಪೂರ್ಣ ಜಗತ್ತು ಪ್ರಭಾವಿತವಾಗಿದೆ. ಶಾಂತಿ ಮತ್ತು ಜ್ಞಾನದ ಶೋಧದಲ್ಲಿ ಅಮೆರಿಕಾದ ೯೦ ನಾಗರಿಕರು ಭಾರತಕ್ಕೆ ಬಂದಿದ್ದಾರೆ. ಹರಿದ್ವಾರದಲ್ಲಿ ಅವರು ಸನಾತನ ಧರ್ಮ ಸ್ವೀಕರಿಸುವರು. ಸ್ವಾಮಿ ವೇದವ್ಯಾಸಾನಂದ ಇವರ ನೇತೃತ್ವದಲ್ಲಿ ಅವರು ಮಕರ ಸಂಕ್ರಾಂತಿಯ ದಿನದಂದು ಸನಾತನ ಧರ್ಮದ ದೀಕ್ಷೆ ಪಡೆಯುವರು. ಸ್ವಾಮಿ ವೇದವ್ಯಾಸನಂದ ಮಹಾರಾಜ ಇವರು ವಿದೇಶದಲ್ಲಿ ಸನಾತನ ಧರ್ಮ ಸಂಸ್ಕೃತಿಯ ಪ್ರಸಾರ ಮಾಡುತ್ತಿದ್ದಾರೆ. ಶ್ರೀ ದಕ್ಷಿಣ ಕಾಲಿ ಘಾಟ ಇಲ್ಲಿ ನಿರಂಜನ ಪೀಠಾಧೀಶ್ವರ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಕೈಲಾಶಾನಂದ ಗಿರಿ ಮಹಾರಾಜ ಇವರು ಸನಾತನ ಧರ್ಮದ ದೀಕ್ಷೆ ನೀಡುವವರು.

ಈ ಅಮೆರಿಕನ್ ನಾಗರಿಕರು ಇತ್ತೀಚಿಗೆ ಗಂಗಾ ತೀರದಲ್ಲಿ ಪೂಜೆ ನಡೆಸಿ ಮಾ ದಕ್ಷಿಣಕಾಲಿಯ ದರ್ಶನ ಪಡೆದರು ಮತ್ತು ಸ್ವಾಮಿ ಕೈಲಾಶಾನಂದ ಗಿರಿ ಮಹಾರಾಜರ ಆಶೀರ್ವಾದ ಪಡೆದರು. ಸ್ವಾಮಿ ಕೈಲಾಶಾನಂದ ಗಿರಿ ಮಹಾರಾಜ ಇವರು, ”ಸಂಪೂರ್ಣ ಜಗತ್ತು ಸನಾತನ ಧರ್ಮ ಸಂಸ್ಕೃತಿ ಮತ್ತು ಪರಂಪರೆಯಿಂದ ಪ್ರಭಾವಿತರಾಗಿದ್ದಾರೆ. ವಿದೇಶದಲ್ಲಿ ವಾಸಿಸುವ ಜನರಿಗೆ ಪಾಶ್ಚಾತ್ಯ ಸಂಸ್ಕೃತಿಯನ್ನು ತ್ಯಾಗ ಮಾಡಿ ಸನಾತನ ಧರ್ಮ ಸಂಸ್ಕೃತಿ ಕಲಿತುಕೊಂಡು ಅದನ್ನು ಅಳವಡಿಸಿಕೊಳ್ಳಬೇಕು. ಸನಾತನ ಧರ್ಮ ಸಂಸ್ಕೃತಿ ಜಗತ್ತಿನಾದ್ಯಂತ ಪ್ರಸಾರ ಮಾಡುವುದು ನಮ್ಮ ಪ್ರಯತ್ನವಾಗಿದೆ. ಶಾಂತಿ ಮತ್ತು ಜ್ಞಾನದ ಶೋಧದಲ್ಲಿ ೯೦ ಅಮೇರಿಕನ್ ನಾಗರೀಕರು ಹರಿದ್ವಾರಕ್ಕೆ ಬಂದಿದ್ದಾರೆ.” ಎಂದು ಹೇಳಿದರು.

ಸ್ವಾಮಿ ವೇದವ್ಯಾಸಾನಂದ ಮಹರಾಜ ಇವರು ಅವರ ಶಿಷ್ಯ ಸ್ವಾಮಿ ಕೃಷ್ಣಾನಂದ ಇವರು, ಗುರು ಇದು ಈಶ್ವರನ ಎರಡನೆಯ ರೂಪವಾಗಿದೆ, ಸನ್ಮಾನ್ಯ ಗುರು ದೇವರು ಕೈಲಾಶಾನಂದ ಗಿರಿ ಮಹಾರಾಜ ಇವರ ಮಾರ್ಗದರ್ಶನದಲ್ಲಿ ಸನಾತನ ಧರ್ಮ ಸಂಸ್ಕೃತಿಯ ಪ್ರಚಾರ ಅಮೆರಿಕ ಮತ್ತು ಇತರ ದೇಶದಲ್ಲಿ ಆಗುತ್ತಿದೆ ಎಂದು ಹೇಳಿದರು. ಸ್ವಾಮಿ ಅವಂತಿಕ ನಂದ ಬ್ರಹ್ಮಚಾರಿ ಇವರು, ಜನವರಿ ೧೫ ರಂದು ರಂದು ನಡೆಯುವ ದೀಕ್ಷಾ ಕಾರ್ಯಕ್ರಮದಲ್ಲಿ ಅನೇಕ ಹೆಸರಂತ ಸಂತರು ಉಪಸ್ಥಿತರಿರುವರು ಎಂದು ಹೇಳಿದರು.

(ಸೌಜನ್ಯ : VK News)