ಭಾಜಪ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಯೋಜನೆ ಎಂದು ಟೀಕೆ !
ನವ ದೆಹಲಿ – ಕಾಂಗ್ರೆಸ್ ಜನವರಿ ೨೨ ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆಗೆ ಹೋಗದಿರುವ ನಿರ್ಣಯ ತೆಗೆದುಕೊಂಡಿದೆ. ಅವರ ನಾಯಕರು ಉದ್ಘಾಟನೆಯ ಆಮಂತ್ರಣ ನಿರಾಕರಿಸಿದ್ದಾರೆ. ಪಕ್ಷದ ಕಾರ್ಯದರ್ಶಿ ಜೈ ರಾಮ ರಮೇಶ ಇವರು ಒಂದು ಮನವಿ ಪ್ರಸಾರ ಮಾಡಿ ಕಾಂಗ್ರೆಸ್ಸಿನ ನಿಲುವು ಸ್ಪಷ್ಟಪಡಿಸಿದ್ದಾರೆ. ಇದರಲ್ಲಿ ಅವರು, ಧರ್ಮ ಇದು ವೈಯಕ್ತಿಕ ವಿಷಯವಾಗಿದೆ; ಆದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಭಾಜಪ ದೀರ್ಘಕಾಲದಿಂದ ಅಯೋಧ್ಯೆಯಲ್ಲಿನ ಮಂದಿರಕ್ಕೆ ರಾಜಕೀಯ ಯೋಜನೆಯ ರೂಪ ನೀಡಿದೆ. ಕೇವಲ ರಾಜಕೀಯ ಲಾಭಕ್ಕಾಗಿ ಭಾಜಪ ಮತ್ತು ಸಂಘದ ನಾಯಕರಿಂದ ಅಪೂರ್ಣ ಮಂದಿರದ ಉದ್ಘಾಟನೆ ಮಾಡುತ್ತಿದ್ದಾರೆ. ೨೦೧೯ ರಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪಾಲನೆ ಮಾಡುತ್ತಾ ಮತ್ತು ಶ್ರೀ ರಾಮನ ಲಕ್ಷಾಂತರ ಭಕ್ತರನ್ನು ಗೌರವಿಸುತ್ತಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ ಮತ್ತು ಲೋಕಸಭೆಯಲ್ಲಿನ ಪಕ್ಷದ ಗುಂಪು ನಾಯಕ ಅಧೀರ ರಂಜನ ಚೌದರಿ ಇವರು ಕಾರ್ಯಕ್ರಮದ ಆಮಂತ್ರಣ ನಿರಾಕರಿಸಿದ್ದಾರೆ.
ಸಂಪಾದಕೀಯ ನಿಲುವುಶ್ರೀರಾಮ ಮಂದಿರ ಇದು ಭಾಜಪ ಮತ್ತು ಸಂಘದ ಯೋಜನೆ ಇರುವದರಿಂದ ಕಾಂಗ್ರೆಸ್ ಮಂದಿರ ನಿರ್ಮಾಣಕ್ಕೆ ವಿರೋಧಿಸಿತ್ತು, ಇದು ಬಹಿರಂಗವಾಗಿದೆ. ಆದ್ದರಿಂದ ಕಾಂಗ್ರೆಸ್ಸಿಗೆ ಮಂದಿರ ಆಗುವ ಇಚ್ಛೆ ಇರಲಿಲ್ಲ. ಆದ್ದರಿಂದ ಅದರ ಮುಖಂಡರು ಮಂದಿರದ ಉದ್ಘಾಟನೆಗೆ ಹೇಗೆ ಹೋಗುವರು ? |