ನೇಪಾಳದಲ್ಲಿ ಬಲಾತ್ಕಾರದ ಆರೋಪಿ ಬೌದ್ಧ ಧರ್ಮಗುರು ‘ಬುದ್ಧ ಬಾಯ’ ಬಂಧನ

ಕಠ್ಮಂಡು (ನೇಪಾಳ) – ನೇಪಾಳ ಪೊಲೀಸರು ಬೌದ್ಧ ಧರ್ಮಗುರು ರಾಮ ಬಹದ್ದೂರ ಬೊಮಜನ ಅವನನ್ನು ಬಲಾತ್ಕಾರದ ಆರೋಪದಡಿಯಲ್ಲಿ ಬಂಧಿಸಿದ್ದಾರೆ. ಬೊಮಜನ ಅನುಯಾಯಿಗಳು ಅವನನ್ನು ಬುದ್ಧನ ಅವತಾರವೆಂದು ನಂಬುತ್ತಾರೆ. ಇವನನ್ನು ‘ಬುದ್ಧ ಬಾಯ್’ ಈ ಲೇಖನಿಯ ಹೆಸರಿನಲ್ಲಿ ಗುರುತಿಸಲಾಗುತ್ತದೆ. ಇವನ ವಿರುದ್ಧ ಭಕ್ತರನ್ನು ಅಪಹರಣ ಮಾಡಿರುವ ಆರೋಪವೂ ದಾಖಲಾಗಿದೆ.

ಪೊಲೀಸ ಪಡೆಯ ವಕ್ತಾರ ಕುಬೇರ ಕದಾಯತ ಇವರು ಮಾತನಾಡಿ, ಪೊಲೀಸರಿಗೆ ಅನೇಕ ವರ್ಷಗಳಿಂದ ಚಳ್ಳೆಹಣ್ಣು ತಿನ್ನಿಸುತ್ತಿದ್ದ, ಬೊಮಜನನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದ್ದಾರೆ. ಸರಲಾಹಿ ಜಿಲ್ಲೆಯ ಆಶ್ರಮವೊಂದರಲ್ಲಿ ಅಪ್ರಾಪ್ತ ಮಹಿಳಾ ಭಕ್ತೆಯ ಮೇಲೆ ಬಲಾತ್ಕಾರವೆಸಗಿದ ಆರೋಪದ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. 2010ರಲ್ಲಿ ಹಲವು ಮಂದಿಯನ್ನು ಥಳಿಸಿರುವ ಬಗ್ಗೆ ದೂರುಗಳು ದಾಖಲಾಗಿದ್ದವು. ಧ್ಯಾನ ಮಾಡುವಾಗ ಏಕಾಗ್ರತೆಗೆ ಭಂಗ ತಂದರು ಎಂದು ಥಳಿಸಿದ್ದರು ಎಂದು ಬೊಮಜನ ಹೇಳುತ್ತಿದ್ದನು. 2018 ರಲ್ಲಿ, 18 ವರ್ಷದ ಕ್ರೈಸ್ತ ಸನ್ಯಾಸಿನಿಯ ಮೇಲೆ ಬಲಾತ್ಕಾರ ಮಾಡಿರುವ ಆರೋಪವನ್ನು ಕೂಡ ಅವನ ಮೇಲಿದೆ. ತದ ನಂತರ, 2019 ರಲ್ಲಿ, ಅವನ ಆಶ್ರಮದಿಂದ 4 ಅನುಯಾಯಿಗಳು ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವ ಅನುಯಾಯಿಗಳ ಕುಟುಂಬದವರು ದೂರನ್ನು ದಾಖಲಿಸಿದ್ದರು.