ನಿಖಿಲ ಗುಪ್ತಾ ಇವರ ವಿರುದ್ಧ ಸಾಕ್ಷಿ ನೀಡಲು ಅಮೇರಿಕಾದಿಂದ ನಿರಾಕರಣೆ

ಗುರುಪತವಂತ ಸಿಂಹ ಪನ್ನು ಇವನ ಕಥಿತ ಹತ್ಯೆಯ ಷಡ್ಯಂತ್ರದ ಪ್ರಕರಣದ ಆರೋಪಿ ಇನ್ನೂ ಬಂಧನದಲ್ಲಿ !

ಗುರುಪತವಂತ ಸಿಂಹ ಪನ್ನು ಮತ್ತು ನಿಖಿಲ ಗುಪ್ತಾ

ವಾಷಿಂಗ್ಟನ್ (ಅಮೇರಿಕಾ) – ‘ಸಿಖ್ ಫಾರ್ ಜಸ್ಟಿಸ್’ ಈ ನಿಷೇಧಿತ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಗುರುಪತವಂತ ಸಿಂಹ ಪನ್ನು ಇವನ ಕಥಿತ ಹತ್ಯೆಯ ಷಡ್ಯಂತ್ರ ರೂಪಿಸಿರುವ ಆರೋಪದಲ್ಲಿ ಅಮೆರಿಕಾದ ಯುರೋಪದಲ್ಲಿನ ಚೆಕ್ ರಿಪಬ್ಲಿಕ್ ದೇಶದ ಭಾರತೀಯ ಪ್ರಜೆ ನಿಖಿಲ ಗುಪ್ತ ಇವರನ್ನು ಬಂಧಿಸಲಾಗಿದೆ. ಗುಪ್ತ ಇವರಿಗೆ ಇಲ್ಲಿಯವರೆಗೆ ಅಮೇರಿಕಾದ ವಶಕ್ಕೆ ನೀಡಲಾಗಿಲ್ಲ. ಪನ್ನು ಇವನ ಹತ್ತಿರ ಷಡ್ಯಂತ್ರದ ಆರೋಪದ ಸಂದರ್ಭದಲ್ಲಿನ ಅಮೆರಿಕಾದಿಂದ ಯಾವುದೇ ಸಾಕ್ಷಿ ಒದಗಿಸಲಾಗಿಲ್ಲ. ಅಮೇರಿಕಾದ ಸರಕಾರವು ಗುಪ್ತಾ ಇವರ ವಿರುದ್ಧದ ಸಾಕ್ಷಿ ಪ್ರಸ್ತುತಪಡಿಸಲು ನಿರಾಕರಿಸಿದೆ. ‘ಗುಪ್ತಾ ಇವರು ಚೆಕ್ ರಿಪಬ್ಲಿಕದಿಂದ ಅಮೇರಿಕಾಕ್ಕೆ ಕರೆತಂದನಂತರವೇ ನಿಖಿಲ ಗುಪ್ತ ವಿರುದ್ಧ ನ್ಯೂಯಾರ್ಕ್ ನ್ಯಾಯಾಲಯದಲ್ಲಿ ಸಾಕ್ಷಿ ನೀಡುವೆವು’, ಎಂದು ಅಮೆರಿಕಾ ಸರಕಾರ ಹೇಳಿದೆ. ನಿಖಿಲ ಗುಪ್ತ ಇವರ ನ್ಯಾಯವಾದಿ ಅವರಿಗೆ ಅಮೆರಿಕಕ್ಕೆ ಕರೆತರುವುದಕ್ಕಾಗಿ ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ.

ವಿದೇಶಾಂಗ ಸಚಿವಾಲಯದ ಮಾಜಿ ವಕ್ತಾರರಾದ ಅರಿಂದಮ ಬಾಗಚಿ ಇವರು, ಭಾರತಕ್ಕೆ ಗುಪ್ತಾ ಇವರ ೩ ಸಲ ‘ಕಾನ್ಸುಲರ್ ಎಕ್ಸೆಸ್’ (ಬಂದಿತನು ಯಾವ ದೇಶದಲ್ಲಿದ್ದಾನೆ, ಆ ದೇಶದ ಮುತ್ಸದ್ದಿ ಅಥವಾ ಅಧಿಕಾರಿ ಜೈಲಿಗೆ ಹೋಗಿ ಕೈದಿಯನ್ನು ಭೇಟಿ ಮಾಡಲು ಅನುಮತಿ) ದೊರೆತಿದೆ ಎಂದು ಹೇಳಿದರು.

ನಿಖಿಲ ಗುಪ್ತಾ ಇವರಿಗೆ ಬಲವಂತವಾಗಿ ಹಂದಿ ಮತ್ತು ಗೋಮಾಂಸ ತಿನ್ನಲು ನೀಡಲಾಗುತ್ತಿದೆ !

ಕಳೆದ ತಿಂಗಳಲ್ಲಿ ನಿಖಿಲ ಗುಪ್ತಾ ಇವರ ಕುಟುಂಬದವರು ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ದಾಖಲಿಸಲಾಗಿತ್ತು. ನಿಖಿಲ ಗುಪ್ತಾ ಇವರಿಗೆ ಪ್ರಾಗ (ಚೆಕ್ ರಿಪಬ್ಲಿಕ್) ಇಲ್ಲಿಯ ಜೈಲಿನಲ್ಲಿ ಅಕ್ರಮವಾಗಿ ಇರಿಸಲಾಗಿದೆ. ಹಿಂದೂ ಪದ್ಧತಿಯ ವಿರುದ್ಧವಾಗಿದ್ದರು ಕೂಡ ಅವರಿಗೆ ಬಲವಂತವಾಗಿ ಹಂದಿ ಮತ್ತು ಗೋಮಾಂಸ ತಿನ್ನಲು ನೀಡಲಾಗುತ್ತಿದೆ. ಜೈಲು ಅಧಿಕಾರಿಗಳಿಗೆ ಹೇಳಿದರು ಕೂಡ ಅವರಿಗೆ ಸಸ್ಯಹಾರಿ ಊಟ ಸಿಕ್ಕಿಲ್ಲ.

ಸಂಪಾದಕರ ನಿಲುವು

* ಕೆನಡಾ ಮತ್ತು ಅಮೆರಿಕಾ ಒಂದೇ ಮಾಲೆಯ ಮಣಿಗಳಾಗಿದ್ದಾರೆ. ಇಬ್ಬರು ಕೂಡ ಖಲಿಸ್ತಾನಿ ಭಯೋತ್ಪಾದಕರನ್ನು ರಕ್ಷಿಸಿ ಭಾರತಕ್ಕೆ ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ. ಈ ಇಬ್ಬರಿಗೂ ಭಾರತ ಪ್ರತ್ಯುತ್ತರ ನೀಡಬೇಕು !