ಪಾದ್ರಿಗಳಿಗೆ ವಿವಾಹ ಮಾಡಿಕೊಳ್ಳಲು ಅನುಮತಿಸಬೇಕು ! – ಪೋಪ್ ಫ್ರಾನ್ಸಿಸ್ ಇವರ ಹಿರಿಯ ಸಲಹೆಗಾರ ಆರ್ಚ್ ಬಿಷಪ್ ಚಾರ್ಲ್ಸ್ ಸೈಕ್ಲುನಾ

ಪೋಪ್ ಫ್ರಾನ್ಸಿಸ್ ಇವರ ಹಿರಿಯ ಸಲಹೆಗಾರ ಆರ್ಚ್ ಬಿಷಪ್ ಚಾರ್ಲ್ಸ್ ಸೈಕ್ಲುನಾ ಇವರ ಹೇಳಿಕೆ

ಸೈಕ್ಲುನಾ ಇವರಿಂದ ಪಾದ್ರಿಗಳಿಂದ ನಡೆದಿರುವ ಲೈಂಗಿಕ ಶೋಷಣೆಯ ಪ್ರಕರಣದ ವಿಚಾರಣೆ ನಡೆದಿತ್ತು.

ಕ್ರೈಸ್ತ ಸರ್ವೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್

ವ್ಯಾಟಿಕನ್ ಸಿಟಿ – ಪಾದ್ರಿಗಳಿಗೆ ವಿವಾಹ ಮಾಡಿಕೊಳ್ಳುವ ಅನುಮತಿ ನೀಡಬೇಕು. ಇದರ ಬಗ್ಗೆ ರೋಮನ್ ಕೆಥೋಲಿಕ್ ಚರ್ಚ ಗಂಭೀರವಾಗಿ ಯೋಚನೆ ಮಾಡಬೇಕು. ನಾನು ಮೊದಲು ಸಲ ಸಾರ್ವಜನಿಕವಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದೇನೆ, ಎಂದು ಕ್ರೈಸ್ತ ಸರ್ವೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಇವರ ಹಿರಿಯ ಸಲಹೆಗಾರ ಆಗಿರುವ ಮಾಲ್ಟಾದ ಆರ್ಚ್ ಬಿಷಪ್ (ಹಿರಿಯ ಪಾದ್ರಿ) ಚಾರ್ಲ್ಸ್ ಸೈಕ್ಲುನ್ ಇವರು ಹೇಳಿದರು. ಚಾರ್ಲ್ಸ್ ಸೈಕ್ಲುನ ಇವರು ಪಾದ್ರಿಗಳ ನಡೆಸಿರುವ ಲೈಂಗಿಕ ಶೋಷಣೆಯ ಪ್ರಕರಣಗಳ ವಿಚಾರಣೆ ನಡೆಸಿದ್ದರು. ಆದ್ದರಿಂದ ಅವರು ನೀಡಿರುವ ಮೇಲಿನ ಹೇಳಿಕೆ ಹೆಚ್ಚು ಮಹತ್ವ ಇದೆ.

ಪಾದ್ರಿಗಳು ಕೂಡ ಪ್ರೀತಿಯಲ್ಲಿ ಸಿಲುಕಬಹುದು !

ಚಾರ್ಲ್ಸ್ ಸೈಕ್ಲುನ ಇವರು, ಪಾದ್ರಿಗಳು ಮೊದಲು ೧ ಸಾವಿರ ವರ್ಷದಲ್ಲಿ ವಿವಾಹದ ಅನುಮತಿ ಇತ್ತು. ಇದು ಇತಿಹಾಸ ಆಗಿದೆ. ನನ್ನ ಅಧಿಕಾರದಲ್ಲಿ ಏನಾದರೂ ಇದ್ದರೆ ಆಗ ನಾನು ‘ಪಾದ್ರಿಗಳಿಗೆ ಬ್ರಹ್ಮಚರ್ಯ ಪಾಲನೆ ಮಾಡಬೇಕಾಗುತ್ತದೆ’, ಈ ನಿಯಮದ ಸಂಶೋಧನೆ ಮಾಡುತ್ತಿದೆ. ಇದರಿಂದ ಚರ್ಚ್ ಅನೇಕ ಒಳ್ಳೆಯ ಪಾದ್ರಿಗಳನ್ನು ಕಳೆದುಕೊಳ್ಳಬೇಕಾಗಿದೆ; ಕಾರಣ ಇಂತಹವರು ಪಾದ್ರಿ ಆಗುವ ಬದಲು ವಿವಾಹ ಮಾಡಿಕೊಳ್ಳುವ ನಿರ್ಣಯ ತೆಗೆದುಕೊಂಡರು. ಪಾದ್ರಿಗಳಿಗೆ ವಿವಾಹದ ಅನುಮತಿ ನೀಡುವುದರ ಬಗ್ಗೆ ಗಂಭೀರವಾಗಿ ಯೋಚನೆ ಮಾಡುವ ಅವಶ್ಯಕತೆ ಇದೆ ನನ್ನ ಅನುಭವದಿಂದ ಗಮನಕ್ಕೆ ಬರುತ್ತದೆ. ಚರ್ಚ್‌ನಲ್ಲಿ ಬ್ರಹ್ಮಚಾರಿಗೆ ನಿಶ್ಚಿತ ಒಂದು ಸ್ಥಾನ ಇದೆ; ಆದರೆ ಇದು ಕೂಡ, ಕೆಲವೊಮ್ಮೆ ಪಾದ್ರಿಗಳು ಕೂಡ ಪ್ರೇಮದಲ್ಲಿ ಸಿಲುಕ ಬಹುದು ಎಂಬುದು ನೋಡಬೆಕಾಗುತ್ತದೆ. ಅಂಥಹ ಸಮಯದಲ್ಲಿ ಪಾದ್ರಿಗಳಿಗೆ ಅವರ ಪ್ರೇಯಸಿ ಅಥವಾ ಪಾದ್ರಿಸ್ಥಾನ ಇವುಗಳಲ್ಲಿ ಒಂದು ಆಯ್ಕೆ ಮಾಡಬೇಕಾಗುತ್ತದೆ. ಕೆಲವು ಪಾದ್ರಿ ಇಂತಹ ಸಂಬಂಧಗಳನ್ನು ಮರೆಮಾಚುತ್ತಾರೆ.

ಸಂಪಾದಕರ ನಿಲುವು

* ತಮ್ಮನ್ನು ವಿಕಸಿತ ಮತ್ತು ಆಧುನಿಕ ದೇಶ ಎಂದು ನಂಬುವ ಕ್ರೈಸ್ತರಿಗೆ ಬ್ರಹ್ಮಚರ್ಯ ಪಾಲನೆ ಮಾಡುವಂತಹ ಕಠಿಣ ವಿಷಯ ಕೇವಲ ಮತ್ತು ಕೇವಲ ಅಸಾಧ್ಯವೇ ಆಗಿದೆ; ಅದು ಪಾದ್ರಿ ಆಗಿರಲಿ ಅಥವಾ ಸಾಮಾನ್ಯ ನಾಗರಿಕ ! ಆದ್ದರಿಂದಲೇ ಪಾದ್ರಿಗಳು ಲೈಂಗಿಕ ಶೋಷಣೆ ಮಾಡಿರುವ ಸಾವಿರಾರು ಘಟನೆಗಳು ಬೆಳಕಿಗೆ ಬಂದಿವೆ. ಈ ಪರಿಸ್ಥಿತಿಯಿಂದಲೇ ಈಗ ಪಾದ್ರಿಗಳಿಗೆ ವಿವಾಹದ ಅನುಮತಿ ನೀಡುವ ಬೇಡಿಕೆ ಸಲ್ಲಿಸಬೇಕಾಗುವ ಪರಿಸ್ಥಿತಿ ಪಾದ್ರಿಗಳ ಮೇಲೆ ಬಂದಿದೆ.

* ಹಿಂದೂ ಧರ್ಮದಲ್ಲಿನ ಸಾಧು, ಸನ್ಯಾಸಿ ಮತ್ತು ಸಂತರು ಬ್ರಹ್ಮಚರ್ಯೆಯ ಪಾಲನೆ ಮಾಡುತ್ತಾರೆ; ಕಾರಣ ಅವರು ‘ಸಾಧನೆಯ ಮೂಲಕ ಇಂದ್ರಿಯ ನಿಯಂತ್ರಣ ಹೇಗೆ ಇಡುವುದು? ಇದು ತಿಳಿದಿರುವುದರಿಂದ ಅವರು ಮಾಡುತ್ತಾರೆ; ಆದರೆ ಇತರ ಧರ್ಮದವರಿಗೆ ಇದು ತಿಳಿಯದೆ ಇರುವುದರಿಂದ ಮತ್ತು ಅವರ ಹಾಗೆ ಸಾಧನೆ ಕೂಡ ಇರುವುದಿಲ್ಲ ಇದು ವಸ್ತುಸ್ಥಿತಿ ಆಗಿದೆ !

* ಷಡ್ರಿಪುಗಳಲ್ಲಿ ‘ಕಾಮ’ ಇದಕ್ಕೆ ಮೊದಲ ಸ್ಥಾನವಿದೆ. ವ್ಯಕ್ತಿಗೆ ಯಾವಾಗ ಅದ್ವೈತದ ಅನುಭೂತಿ ಬರುತ್ತದೆ, ಆಗ ಕಾಮ ನಾಶವಾಗುತ್ತದೆ. ಆಸ್ಥಿತಿಗೆ ತಲುಪುವವರೆಗೆ ಮನಸ್ಸಿನಲ್ಲಿನ ವಾಸನೆಯ ವಿಚಾರ ಕಡಿಮೆ ಹೆಚ್ಚು ಪ್ರಮಾಣದಲ್ಲಿ ಇರುತ್ತದೆ. ಈ ಸ್ಥಿತಿ ಪಡೆಯುವುದಕ್ಕಾಗಿ ಸಾಧನೆ ಮಾಡುವುದು ಕೂಡ ಅವಶ್ಯಕವಾಗಿರುತ್ತದೆ !