ಶ್ರೀರಾಮಮಂದಿರಕ್ಕೆ ಇದುವರೆಗೆ ೫ ಸಾವಿರ ಕೋಟಿ ರೂಪಾಯಿ ಅರ್ಪಣೆ !

ನವ ದೆಹಲಿ – ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಭವ್ಯ ಮಂದಿರಕ್ಕಾಗಿ ದೇಶ-ವಿದೇಶಗಳಲ್ಲಿನ ರಾಮಭಕ್ತರು ಯಥೇಚ್ಛವಾಗಿ ದೇಣಿಗೆ ನೀಡಿದ್ದಾರೆ. ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ ಟ್ರಸ್ಟ್‘ ಕೊಟ್ಟಿರುವ ಮಾಹಿತಿ ಪ್ರಕಾರ ಇದುವರೆಗೆ ೩ ಸಾವಿರದ ೨೦೦ ಕೋಟಿ ರೂಪಾಯಿ ಮಂದಿರದ ಸಮರ್ಪಣಾ ನಿಧಿ ಖಾತೆಗೆ ಜಮಾ ಆಗಿದೆ. ಶ್ರೀರಾಮಮಂದಿರಕ್ಕೆ ಒಟ್ಟು ೫ ಸಾವಿರ ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆ ಬಂದಿದೆ.

ಅರ್ಪಣೆ ನಿಧಿಯ ಬಡ್ಡಿಯಿಂದಲೇ ಇದುವರೆಗೆ ಮಂದಿರದ ನಿರ್ಮಾಣ ನಡೆದಿದೆ !

ಶ್ರೀರಾಮಮಂದಿರ ಟ್ರಸ್ಟ್ ದೇಶದ ೧೧ ಕೋಟಿ ಜನರಿಂದ ೯೦೦ ಕೋಟಿ ರೂಪಾಯಿ ಸಂಗ್ರಹಿಸುವ ಗುರಿ ಹೊಂದಿತ್ತು; ಆದರೆ ಕಳೆದ ವರ್ಷ ಡಿಸೆಂಬರ್ ವರೆಗೆ ೫ ಸಾವಿರ ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆ ಬಂದಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಹೇಳಿಕೆ ಪ್ರಕಾರ, ಇದುವರೆಗೆ ಅಂದಾಜು ೧೮ ಕೋಟಿ ರಾಮಭಕ್ತರು ಮಂದಿರದ ನಿರ್ಮಾಣಕ್ಕಾಗಿ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾದ ಖಾತೆಗಳಿಗೆ ಅಂದಾಜು ೩ ಸಾವಿರದ ೨೦೦ ಕೋಟಿ ರೂಪಾಯಿಗಳನ್ನು ಸಮರ್ಪಣಾ ನಿಧಿಯಲ್ಲಿ ಠೇವಣಿ ಮಾಡಿದ್ದಾರೆ. ಟ್ರಸ್ಟ್ ಈ ಬ್ಯಾಂಕ್ ಖಾತೆಗಳಲ್ಲಿ ದೇಣಿಗೆಯಾಗಿ ನೀಡಿದ ಹಣವನ್ನು ‘ಎಫ್‌ಡಿ‘ (ಸ್ಥಿರಠೇವಣಿ) ಮಾಡಿದೆ. ಇದರ ಮೇಲಿನ ಬಡ್ಡಿಯಿಂದಲೇ ಇದುವರೆಗೂ ಮಂದಿರದ ನಿರ್ಮಾಣಕಾರ್ಯ ನಡೆದಿದೆ.