|
ಶ್ರೀನಗರ (ಜಮ್ಮು ಕಾಶ್ಮೀರ) – ಈ ವರ್ಷ ಕಾಶ್ಮೀರದಲ್ಲಿನ ತಾಪಮಾನ ಮೈನಸ್ ೩ ರಿಂದ ೫ ಡಿಗ್ರಿ ಸೆಲ್ಸಿಯಸ್ ಇಷ್ಟು ಕಡಿಮೆ ಇದ್ದರೂ ಕೂಡ ಇಲ್ಲಿ ಹಿಮವೃಷ್ಠಿ ಆಗಿಲ್ಲ. ಸಾಮಾನ್ಯವಾಗಿ ಯಾವ ಸ್ಥಳದಲ್ಲಿ ೨ ರಿಂದ ೫ ಫುಟ್ ನಷ್ಟು ಎತ್ತರ ಹಿಮ ಬಿದ್ದಿರುತ್ತದೆ, ಆ ಸ್ಥಳದಲ್ಲಿ ಕೂಡ ಒಂದು ಇಂಚು ಮಂಜುಗಡ್ಡೆ ಕೂಡ ಬಿದ್ದಿಲ್ಲ. ಆದ್ದರಿಂದ ಕಾಶ್ಮೀರಕ್ಕೆ ಬರುವ ಪ್ರಯಾಣಿಕರು ಅಸಮಾಧಾನಗೊಂಡಿರುವುದು ಕಾಣುತ್ತದೆ. ಇದರಿಂದ ಅನೇಕರು ಕಾಶ್ಮೀರಕ್ಕೆ ಹೋಗುವುದನ್ನು ರದ್ದುಪಡಿಸಿದ್ದಾರೆ. ಕಾಶ್ಮೀರ ಅಷ್ಟೇ ಅಲ್ಲದೆ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ರಾಜ್ಯದ ಪರಿಸ್ಥಿತಿ ಕೂಡ ಹೀಗೆ ಇದೆ. ಕಾಶ್ಮೀರದಲ್ಲಿನ ೧೦ ವರ್ಷದಲ್ಲಿ ಹಿಮಾ ಬೀಳದೆ ಇರುವುದು ಇದು ಮೂರನೇ ಸಲವಾಗಿದೆ.
(ಸೌಜನ್ಯ – NEWS9 Live)
೧. ಜಮ್ಮು-ಕಾಶ್ಮೀರ ಹವಾಮಾನ ಇಲಾಖೆಯ ಸಂಚಾಲಕ ಡಾ. ಮುಖ್ತಾರ್ ಅಹಮದ್ ಇವರ ಪ್ರಕಾರ, ‘ಎಲ್ ನಿನೋ’ಯಿಂದ ಹಿಮ ಬೀಳುತ್ತಿಲ್ಲ ಹಾಗೂ ಸಮುದ್ರದ ತಾಪಮಾನ ೦.೫ ಡಿಗ್ರಿ ಸೆಲ್ಸಿಯಸ್ ಅಷ್ಟು ಹೆಚ್ಚಾಗಿದೆ. ಇದರಿಂದ ಸಂಪೂರ್ಣ ದೇಶದ ಹವಾಮಾನದ ಅಂದಾಜು ಬದಲಾಗಿದೆ ಎಂದು ಹೇಳಿದರು.
೨. ಭೂವೈಜ್ಞಾನಿಕ ಶಕೀಲ್ ಅಹಮದ್ ಇವರು, ಅಂತರಾಷ್ಟ್ರೀಯ ತಾಪಮಾನದಲ್ಲಿ ವೃದ್ಧಿ ಆಗಿರುವುದರಿಂದ ೨೧ ನೇ ಶತಮಾನದ ಕೊನೆಯ ವರೆಗೆ ಕಾಶ್ಮೀರದಲ್ಲಿ ೪೦ ವರ್ಷ ಹಿಮಾ ಇಲ್ಲದೆ ಕಳೆಯಬಹುದು, ಎಂದು ಹೇಳಿದರು.
೩. ಜಮ್ಮು-ಕಾಶ್ಮೀರದಲ್ಲಿ ಜನವರಿ ೧೫ ರ ವರೆಗೆ ಇದೇ ಪರಿಸ್ಥಿತಿ ಮುಂದುವರೆಯುವುದು. ಜನವರಿ ತಿಂಗಳ ಕೊನೆಯಲ್ಲಿ ಹಿಮಾವೃಷ್ಟಿ ಆಗದಿದ್ದರೆ ಕಾಶ್ಮೀರ ಕಣಿವೆಯ ಅನೇಕ ಪ್ರದೇಶಗಳಲ್ಲಿ ಬರಗಾಲ ಸೃಷ್ಟಿ ಆಗಬಹುದು.
‘ಎಲ್ ನಿನೋ’ ಎಂದರೆ ಏನು ?
‘ಎಲ್ ನಿನೋ’ ಎಂದರೆ ಪ್ರಶಾಂತ ಮಹಾಸಾಗರದಲ್ಲಿ ಈಗ ಇರುವ ಹವಾಮಾನದ ಪರಿಸ್ಥಿತಿ, ಅದರ ಭಾಷ್ಪ ತುಂಬಿರುವ ಮಾನಸುನ್ ಗಾಳಿಯ ಮೇಲೆ ಪರಿಣಾಮ ಆಗುತ್ತದೆ. ‘ಎಲ್ ನಿನೋ’ ಇದರ ಪರಿಣಾಮ ವಿವಿಧ ದೇಶದ ಹವಾಮಾನದ ಮೇಲೆ ಆಗುತ್ತದೆ. ದಕ್ಷಿಣ ಅಮೆರಿಕದಲ್ಲಿನ ಪೇರು ಮತ್ತು ಸುತ್ತಮುತ್ತಲಿನ ದೇಶ, ಹಾಗೂ ಅಮೇರಿಕಾ, ಆಸ್ಟ್ರೇಲಿಯಾ, ಭಾರತ ಮತ್ತು ಪ್ರಶಾಂತ ಮಹಾಸಾಗರಕ್ಕೆ ಜೋಡಿಸಲಾದ ಅನೇಕ ದೇಶಗಳಿಗೆ ‘ಎಲ್ ನಿನೋ’ದ ಪರಿಣಾಮ ಬೀರುತ್ತದೆ.