ನವ ದೆಹಲಿ – ಮಿಜೋರಾಂ ಮುಖ್ಯಮಂತ್ರಿ ಲಾಲದುಹೋಮಾ ಅವರು ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಭೇಟಿಯಾಗಿ ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಬೇಲಿ ಹಾಕುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಮಿಜೋರಾಂ ಮುಖ್ಯಮಂತ್ರಿಯನ್ನು ‘ಮೈತೇಯಿ ಹೆರಿಟೇಜ್ ಸೊಸೈಟಿ’ ತೀವ್ರವಾಗಿ ಖಂಡಿಸಿದೆ. “ಗಡಿ ಬೇಲಿ ಹಾಕುವುದು ಮಿಜೋರಾಂನ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಲಾಲದಹೋಮಾ ಇವರ ದಾವೆ ಆಘಾತಕಾರಿಯಾಗಿದೆ” ಎಂದು ‘ಮೈತೆಯಿ ಹೆರಿಟೇಜ್ ಸೊಸೈಟಿ ಹೇಳಿದೆ.
ಮೈಟತೇಯಿ ಹೆರಿಟೇಜ್ ಸೊಸೈಟಿಯು,
1. ಚೀನಾ, ಕುಕಿ ಮತ್ತು ಝೋ ಬಂಡಾಯ ಗುಂಪುಗಳು ಭಾರತದ ಈಶಾನ್ಯ ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದಿಂದ ಬೇರ್ಪಟ್ಟು ಜಾಲೆಂಗಮ್, ಕುಕಿಲ್ಯಾಂಡ್ ಅಥವಾ ಝೋಲ್ಯಾಂಡ್ ಎಂಬ ಸ್ವತಂತ್ರ ದೇಶವನ್ನು ರಚಿಸಲು ಹೋರಾಡುತ್ತಿವೆ.
2. ಲಾಲದುಹೋಮ ನೀಡಿದ ಹೇಳಿಕೆಯು ಭಾರತದ ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸುತ್ತದೆ ಮತ್ತು ಭಾರತ ವಿರೋಧಿ ಚಟುವಟಿಕೆಗಳನ್ನು ನೇರವಾಗಿ ಬೆಂಬಲಿಸುತ್ತದೆ. ಅವರ ದಾವೆ ರಾಷ್ಟ್ರೀಯ ಭದ್ರತೆಗೆ ಗಂಭೀರ ಅಪಾಯವಾಗಿದೆ.
3. ಗಡಿ ಬೇಲಿ ಇಲ್ಲದ ಕಾರಣ ಮ್ಯಾನ್ಮಾರ್ ನಿಂದ ನಿರಾಶ್ರಿತರು ಅಕ್ರಮವಾಗಿ ಭಾರತ ಪ್ರವೇಶಿಸುತ್ತಿದ್ದು, ಮಾದಕ ವಸ್ತುಗಳ ಸಾಗಣೆಯಾಗುತ್ತಿದೆ. ‘ಫ್ರೀ ಮೂವ್‌ಮೆಂಟ್ ರಿಜಿಮ್’ ಕೂಡ ಮ್ಯಾನ್ಮಾರ್ ಜನರು ಭಾರತಕ್ಕೆ ವಲಸೆ ಹೋಗುವುದಕ್ಕೆ ಕಾರಣವಾಗಿದೆ. ಮಣಿಪುರದಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಮೂಲ ಕಾರಣವೂ ಇದಾಗಿದೆ.
4. ಮುಖ್ಯಮಂತ್ರಿ ಲಾಲದುಹೋಮಾ ಅವರು ತಮ್ಮ ದೇಶವಿರೋಧಿ ಹೇಳಿಕೆಗಳನ್ನು ಹಿಂಪಡೆದು ಕೇಂದ್ರ ಸರಕಾರದೊಂದಿಗೆ ಸೇರಿ ‘ಗಡಿ ಬೇಲಿ ಯೋಜನೆ’ಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕು ಎಂದು ‘ಮೈತೇಯಿ ಹೆರಿಟೇಜ್ ಸೊಸೈಟಿ’ ಆಗ್ರಹಿಸಿದೆ.
ಮಿಜೋರಾದಲ್ಲಿ ಎರಡೂವರೆ ವರ್ಷಗಳಲ್ಲಿ ಮ್ಯಾನ್ಮಾರ್‌ನಿಂದ 53 ಸಾವಿರದ 500 ನಿರಾಶ್ರಿತರು ಭಾರತಕ್ಕೆ ಬಂದರು ! – ವಿಶ್ವಸಂಸ್ಥೆ
ಫೆಬ್ರವರಿ 2021 ರಿಂದ ಮೇ 2023 ರವರೆಗಿನ ಎರಡೂವರೆ ವರ್ಷಗಳ ಅವಧಿಯಲ್ಲಿ 53 ಸಾವಿರದ 500 ಮ್ಯಾನ್ಮಾರ್ ನಿರಾಶ್ರಿತರು ಭಾರತಕ್ಕೆ ಬಂದಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ ಮೇ 2023 ರ ವರದಿಯಲ್ಲಿ ತಿಳಿಸಿದೆ. ಈ ನಿರಾಶ್ರಿತರಲ್ಲಿ ಅನೇಕರು ವಿವಿಧ ಅಕ್ರಮವಾಗಿ ಭಾರತೀಯ ಗುರುತಿನ ದಾಖಲೆಗಳನ್ನು ತಯಾರಿಸಿದ್ದಾರೆ ಮತ್ತು ಭಾರತೀಯ ನಾಗರಿಕರಾಗಿದ್ದಾರೆ. ಈ ವಂಚನೆಯನ್ನು ತುರ್ತಾಗಿ ತಡೆಯುವ ಅಗತ್ಯವಿದೆ. ಗಡಿಗೆ ಬೇಲಿ ಹಾಕುವುದು ಮುಖ್ಯವಾಗಿದೆ ಎಂದು ಹೇಳಿದೆ.
ಸಂಪಾದಕೀಯ ನಿಲುವುಈಗ ಕೇಂದ್ರ ಸರಕಾರವು ದೇಶದ ಗಡಿಗಳನ್ನು ಸುರಕ್ಷಿತವಾಗಿರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಭಾರತೀಯರ ಅಪೇಕ್ಷೆಯಾಗಿದೆ ! |