ಗುಹಾ (ಅಹಲ್ಯಾನಗರ) ದ ಶ್ರೀ ಕಾನಿಫ್‌ನಾಥ್ ದೇವಸ್ಥಾನವು ಹಿಂದೂಗಳಿಗೆ ಸೇರಿದ್ದು !

ಕಮ್ಯುನಿಸ್ಟ್ ಪಕ್ಷಗಳ ಬೆಂಬಲದೊಂದಿಗೆ, ಶ್ರೀ ಕಾನಿಫ್‌ನಾಥ್ ಮಹಾರಾಜರ ವಿಗ್ರಹವನ್ನು ತೆಗೆಯಲು ಮತಾಂಧರಿಂದ ಉಪವಾಸ ಸತ್ಯಾಗ್ರಹ !

ನಗರ – ರಾಹುರಿ ತಾಲೂಕಿನ ಗುಹಾದಲ್ಲಿರುವ ಶ್ರೀ ಕಾನಿಫ್‌ನಾಥ್ ದೇವಸ್ಥಾನವನ್ನು ಕಮ್ಯುನಿಸ್ಟ್ ಪಕ್ಷದ ಸಹಾಯದಿಂದ ಮುಸ್ಲಿಮರು ವಕ್ಫ್ ಬೋರ್ಡ್‌ನ ಆಸ್ತಿ ಎಂದು ಹೇಳಿಕೊಂಡರು. (ಹಿಂದೂ ಧರ್ಮದ ವಿರುದ್ಧ ಮತಾಂಧರನ್ನು ಬೆಂಬಲಿಸುವ ಕಮ್ಯುನಿಸ್ಟ್ ಪಕ್ಷಗಳ ಕುತಂತ್ರ ತಿಳಿಯಿರಿ ! – ಸಂಪಾದಕರು) ಇಲ್ಲಿನ ಶ್ರೀ ಕಾನಿಫ್‌ನಾಥ್ ಮಹಾರಾಜರ ಪ್ರತಿಮೆಯನ್ನು ತೆಗೆಯುವಂತೆ ಕೆಲವು ಮುಸ್ಲಿಂ ಸಮುದಾಯದವರು ಉಪವಾಸ ಆರಂಭಿಸಿದ್ದಾರೆ. ಹೀಗಿರುವಾಗ ಆದಿವಾಸಿ ಏಕಲವ್ಯ ಸಂಘಟನೆ ಹಾಗೂ ವಾದರ್‌ ಸಮಾಜ ಸಂಘಟನೆಗಳು ‘ಈ ದೇವಸ್ಥಾನ ಹಿಂದೂಗಳಿಗೆ ಸೇರಿದ್ದು’ ಎಂಬ ದೃಢ ನಿಲುವು ತಳೆದಿವೆ. ಈ ಸಂಘಟನೆಗಳೊಂದಿಗೆ ಇಡೀ ಹಿಂದೂ ಸಮುದಾಯವು ದೇವಾಲಯದ ರಕ್ಷಣೆಗಾಗಿ ಬೀದಿಗಿಳಿಯಲು ಮುಂದಾಗಿದೆ.

ಏನಿದು ಪ್ರಕರಣ ?

ವಕ್ಫ್ ಬೋರ್ಡ್ ಮೂಲಕ ಈ ದೇಗುಲದ ನಿವೇಶನವನ್ನು ಕಬಳಿಸಲು ಮತಾಂಧರು ಪ್ರಯತ್ನಿಸುತ್ತಿದ್ದಾರೆ. ನವೆಂಬರ್ 13, 2023 ರಂದು, ಕೆಲವು ಮುಸ್ಲಿಂ ದುಷ್ಕರ್ಮಿಗಳು ಈ ದೇವಾಲಯದಲ್ಲಿ ಭಜನೆ ಮಾಡುತ್ತಿದ್ದ ಭಕ್ತರ ಮೇಲೆ ಹಲ್ಲೆ ನಡೆಸಿ ಥಳಿಸಿದ್ದಾರೆ. ಇದನ್ನು ವಿರೋಧಿಸಿ ನವೆಂಬರ್ 21 ರಂದು ಎಲ್ಲಾ ಧಾರ್ಮಿಕ ಹಿಂದೂಗಳು ತಹಸಿಲ್ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ 28 ಡಿಸೆಂಬರ್ 2023 ರಂದು, ಹಿಂದೂ ಸಮುದಾಯದಿಂದ ಈ ದೇವಾಲಯದಲ್ಲಿ ಕನಿಫ್‌ನಾಥ್ ಮಹಾರಾಜರ ವಿಗ್ರಹವನ್ನು ಸ್ಥಾಪಿಸಲಾಯಿತು.

ಸಂಪಾದಕೀಯ ನಿಲುವು

ಇಂತಹ ಉಪವಾಸ ಸತ್ಯಾಗ್ರಹಿಗಳಿಗೆ ತಲೆಬಾಗದೆ ಸರಕಾರಿ ವ್ಯವಸ್ಥೆಗಳು ಹಿಂದೂಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಹಿಂದೂಗಳು ನಿರೀಕ್ಷಿಸುತ್ತಾರೆ !

ಶ್ರೀ ಕಾನಿಫ್‌ನಾಥ್ ದೇವಸ್ಥಾನವನ್ನು ಹಿಂದೂಗಳ ಆಸ್ತಿ ಎಂದು ಘೋಷಿಸುವವರೆಗೆ, ಎಲ್ಲೆಡೆ ಹಿಂದೂಗಳು ದೇವಸ್ಥಾನದ ಪರವಾಗಿ ಒಗ್ಗಟ್ಟಾಗಿ ನಿಲ್ಲಬೇಕು !