ಪ್ರಭು ಶ್ರೀರಾಮನ ಅಸ್ತಿತ್ವವನ್ನು ನಿರಾಕರಿಸುವವರಿಂದ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಣೆ !

‘ಮುಂಬಯಿ ತರುಣ ಭಾರತ’ ದಿನಪತ್ರಿಕೆಯ ಸಂಪಾದಕ ಕಿರಣ ಶೇಲಾರ ಇವರ ಸ್ಪಷ್ಟ ಹೇಳಿಕೆ !

ಮುಂಬಯಿ – ‘ಮುಂಬಯಿ ತರುಣ ಭಾರತ’ ದಿನಪತ್ರಿಕೆಯ ಸಂಪಾದಕರಾದ ಶ್ರೀ. ಕಿರಣ ಶೇಲಾರ ಅವರು ಭಗವಾನ ಶ್ರೀರಾಮನ ಅಸ್ತಿತ್ವವನ್ನು ನಿರಾಕರಿಸುವ ‘ದೇಶೋನ್ನತಿ’ ದಿನಪತ್ರಿಕೆಯ ಸಂಪಾದಕ ಪ್ರಕಾಶ ಪೋಹರೆ ಅವರಿಂದ ‘ದರ್ಪಣಕಾರ ಬಾಳಶಾಸ್ತ್ರಿ ಬಾಂಭೇಕರ ಸ್ಮೃತಿ ಪ್ರಶಸ್ತಿ’ ಸ್ವೀಕರಿಸಲು ನಿರಾಕರಿಸಿದರು. ಶ್ರೀ. ಕಿರಣ ಶೇಲಾರ ಇವರ ಈ ದೃಢ ನಿರ್ಧಾರದ ಬಗ್ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

1. ಜನವರಿ 5 ರಂದು ‘ಪತ್ರಿಕಾ ವರದಿಗಾರರ ದಿನ’ದ ಮುನ್ನಾ ದಿನದಂದು, ಮರಾಠಿ ಪತ್ರಿಕೆ ಲೇಖಕರ ಸಂಘದ 23 ನೇ ವಾರ್ಷಿಕೋತ್ಸವದ ಸಂದರ್ಭದ ನಿಮಿತ್ತದಿಂದ ದಾದರನ ಮರಾಠಿ ಗ್ರಂಥಾಲಯದ ಸಭಾಗೃಹದಲ್ಲಿ , ಪತ್ರಕರ್ತರಿಗೆ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಯಿತು.

2. ಮರಾಠಿ ಪತ್ರಿಕೆ ಲೇಖಕರ ಸಂಘದ ವತಿಯಿಂದ ನೀಡುವ ಪ್ರಶಸ್ತಿಗಳಲ್ಲಿ ‘ದರ್ಪಣಕಾರ ಬಾಳಶಾಸ್ತ್ರಿ ಜಾಂಭೇಕರ ಸ್ಮೃತಿ ಪ್ರಶಸ್ತಿ’ಯನ್ನು ‘ಮುಂಬಯಿ ತರುಣ ಭಾರತ’ ದಿನಪತ್ರಿಕೆಯ ಸಂಪಾದಕರಾದ ಶ್ರೀ. ಕಿರಣ ಶೇಲಾರ ಅವರಿಗೆ ಪ್ರಶಸ್ತಿ ನೀಡಲಾಗುತ್ತಿತ್ತು. ಈ ಸಮಯದಲ್ಲಿ ವ್ಯಾಸಪೀಠದ ಮೇಲೆ ಉಪಸ್ಥಿತರಿದ್ದ ‘ದೇಶೋನ್ನತಿ’ ದಿನಪತ್ರಿಕೆಯ ಸಂಪಾದಕ ಪ್ರಕಾಶ ಪೊಹರೆ ಮಾತನಾಡಿ, ‘ ಈ ದೇಶದಲ್ಲಿ ರಾಮನನ್ನು ನಂಬದ ಮತ್ತು ರಾಮನನ್ನು ನಂಬುವ ಎರಡು ವಿಭಾಗಗಳಿವೆ. ಕೆಲವು ಜನರಿಗೆ ರಾಮನು ಕಾಲ್ಪನಿಕ ಸಂಕಲ್ಪನೆ ಎಂದೆನಿಸುತ್ತದೆ’. ಅಂತಹ ನಾಸ್ತಿಕವಾದಿಗಳನ್ನು ಓಲೈಸುವವರು ಹೇಳಿಕೆ ನೀಡುತ್ತಾರೆ.

3. ಈ ಸಂದರ್ಭದಲ್ಲಿ ದೇಶದ ಅನೇಕ ಸಮಸ್ಯೆಗಳನ್ನು ಕೂಡ ಪೊಹರೆಯವರು ಓದಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಕಾಶ ಪೋಹರೆ ಅಲಂಕರಿಸಿದ್ದರು. ಅವರ ಹಸ್ತದಿಂದ ಶ್ರೀ. ಕಿರಣ ಶೇಲಾರ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವವರಿದ್ದರು; ಆದರೆ ಹಿಂದೂಗಳ ಶ್ರದ್ಧಾಸ್ಥಾನವಾಗಿರುವ ಪ್ರಭು ಶ್ರೀರಾಮನ ಅಸ್ತಿತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವ ಪ್ರಕಾಶ ಪೊಹರೆ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಲು, ಶ್ರೀ. ಕಿರಣ ಶೇಲಾರ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

4. ಪ್ರಕಾಶ ಪೊಹರೆ ಅವರ ವಿವಾದಾತ್ಮಕ ಹೇಳಿಕೆ ಕುರಿತು ತಕ್ಕ ಉತ್ತರ ನೀಡಿದ ಶ್ರೀ. ಕಿರಣ ಶೇಲಾರ ” ನನಗಿಂತ ಮೊದಲು ಮಾತನಾಡಿದ ಭಾಷಣಕಾರರು ಮಂಡಿಸಿರುವ ದೇಶದ ಸಮಸ್ಯೆಗಳು ನಿಜವಾಗಿವೆ; ಆದರೆ ಭಗವಾನ ಶ್ರೀರಾಮನ ಅಸ್ತಿತ್ವವೂ ಸತ್ಯವಾಗಿದೆ. ಶ್ರೀ ರಾಮನನ್ನು ಕಾಲ್ಪನಿಕವೆಂದು ಹೇಳುವವರಿಂದ ನನಗೆ ಪ್ರಶಸ್ತಿ ಬೇಡ. ನಾನು ಅದನ್ನು ಸ್ವೀಕರಿಸುವುದಿಲ್ಲ; ಆದರೆ ದರ್ಪಣಕಾರ ಬಾಳಶಾಸ್ತ್ರಿ ಜಾಂಭೇಕರ ಇವರನ್ನು ನಾನು ಅಪಮಾನಿಸುವುದಿಲ್ಲ. ಇದರ ಬಳಿಕವೂ ಪ್ರಶಸ್ತಿಯನ್ನು ನೀಡಬೇಕೋ ಅಥವಾ ಬಾರದೋ ಎನ್ನುವ ವಿಷಯದಲ್ಲಿ ಮರಾರಿ ದಿನಪತ್ರಿಕಾ ವರದಿಗಾರ ಸಂಘ ನಿರ್ಧರಿಸಬೇಕು.

5. ಶ್ರೀ. ಕಿರಣ ಶೇಲಾರ ಅವರು ವೇದಿಕೆಯ ಮೇಲೆ ಮಂಡಿಸಿದ ಈ ಹೇಳಿಕೆಯನ್ನು ಪ್ರೇಕ್ಷಕರು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುವ ಮೂಲಕ ಸ್ವಾಗತಿಸಿದರು. ಇದಕ್ಕೆ ‘ಪ್ರಹಾರ’ ದಿನಪತ್ರಿಕೆಯ ಸಂಪಾದಕ ಸುಕೃತ ಖಾಂಡೇಕರ ಇವರ ಹಸ್ತದಿಂದ ಶ್ರೀ. ಕಿರಣ ಶೇಲಾರ ಅವರಿಗೆ ಪ್ರಶಸ್ತಿ ನೀಡಲಾಯಿತು.

ಹಿಂದೂಗಳು ಎಲ್ಲರ ಭಾವನೆಗಳನ್ನು ಗೌರವಿಸಬೇಕು; ಆದರೆ ಅವರ ಭಾವನೆಗಳನ್ನು ಯಾರೂ ಗೌರವಿಸಬಾರದು, ಹೀಗೆ ಇನ್ನು ಮುಂದೆ ನಡೆಯಲಾರದು! – ಕಿರಣ ಶೇಲಾರ, ಸಂಪಾದಕರು, ದಿನಪತ್ರಿಕೆ ‘ಮುಂಬಯಿ ತರುಣ ಭಾರತ’

ವಾಸ್ತವವಾಗಿ ಘಟಿಸಿದ ಪ್ರಕರಣ ಸರಿಯಲ್ಲ. ಆಚಾರ್ಯ ಬಾಳಶಾಸ್ತ್ರಿ ಜಾಂಭೇಕರ ಇವರ ಹೆಸರಿನಲ್ಲಿ ನೀಡುವ ಪುರಸ್ಕಾರವಾಗಿರುವುದರಿಂದ ನಾನು ಒಪ್ಪಿಕೊಂಡಿದ್ದೆನು. ಇತರೆ ಭಾಷಣಕಾರರ ಭಾಷಣ ನನಗೆ ಒಪ್ಪಿಗೆಯಿಲ್ಲದಿದ್ದರೂ, ಅದು ಅವರ ಅಭಿಪ್ರಾಯವಾಗಿತ್ತು. ಪ್ರಕಾಶ ಪೊಹರೆಯವರು ಶ್ರೀರಾಮನ ಅಸ್ತಿತ್ವದ ಬಗ್ಗೆ ಪ್ರಶ್ನೆಚಿಹ್ನೆ ಎತ್ತಿ ಅಪ್ರಸ್ತುತ ಹೇಳಿಕೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಆ ರೀತಿ ಮಾತನಾಡುವ ಆವಶ್ಯಕತೆಯಿರಲಿಲ್ಲ. ನನ್ನ ಅಭಿಪ್ರಾಯದಲ್ಲಿ, ಇಂತಹ ವ್ಯಕ್ತಿಗಳಿಂದ ಪ್ರಶಸ್ತಿ ಸ್ವೀಕರಿಸುವುದು ಯೋಗ್ಯವಾಗಿರಲಿಲ್ಲ. ಹಿಂದೂಗಳು ಎಲ್ಲರ ಭಾವನೆಗಳನ್ನು ಗೌರವಿಸಬೇಕು; ಆದರೆ ಅವರ ಭಾವನೆಗಳನ್ನು ಯಾರೂ ಗೌರವಿಸಬಾರದು, ಇದು ಇನ್ನು ಮುಂದೆ ನಡೆಯುವುದಿಲ್ಲ. ನನಗೆ ಆಚಾರ್ಯ ಬಾಳಶಾಸ್ತ್ರಿ ಜಾಂಭೇಕರ್ ಅವರ ಹೆಸರಿನಲ್ಲಿ ನೀಡಿದ ಪ್ರಶಸ್ತಿಯನ್ನು ಅವಮಾನಿಸುವ ಇಚ್ಛೆಯಿಲ್ಲ. ಆದುದರಿಂದ ಹಿರಿಯ ಪತ್ರಕರ್ತ ಸುಕೃತ ಖಾಂಡೇಕರ ಅವರಿಂದ ಪ್ರಶಸ್ತಿ ಸ್ವೀಕರಿಸಿ ಕಾರ್ಯಕ್ರಮದಿಂದ ನಾನು ಹೊರಟುಬಂದಿದ್ದೇನೆ.

ಸಂಪಾದಕೀಯ ನಿಲುವು

ಇಂತಹ ದೃಢ ನಿರ್ಣಯವನ್ನುಹೊಂದಿರುವ ‘ಮುಂಬಯಿ ತರುಣ ಭಾರತ’ ಸಂಪಾದಕ ಕಿರಣ ಶೇಲಾರ ಅವರಿಗೆ ಅಭಿನಂದನೆಗಳು! ಕಳೆದ ಹಲವಾರು ದಶಕಗಳವರೆಗೆ ಜಾತ್ಯತೀತ ಪತ್ರಿಕೋದ್ಯಮದ ಹೆಸರಿನಲ್ಲಿ, ಹಿಂದೂ ಧರ್ಮ, ಧರ್ಮಗ್ರಂಥಗಳು ಮತ್ತು ಸಂಸ್ಕೃತಿಯ ಮೇಲೆ ದ್ವೇಷಪೂರ್ಣವಾಗಿ ಟೀಕಿಸಲಾಯಿತು. ಇದರಿಂದ ಹಿಂದೂ ಸಮಾಜಕ್ಕೆ ಒಳಗೊಳಗೆ ಅಪಾರ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಹಿಂದುತ್ವಕ್ಕಾಗಿ ಶ್ರೀ. ಶೇಲಾರ ಇವರು ತೆಗೆದುಕೊಂಡ ದೃಢವಾದ ನಿರ್ಧಾರ ಎಲ್ಲರಿಗೂ ಆದರ್ಶವಾಗಿದೆ !