ಜನವರಿ 22 ರಂದು ನಡೆಯಲಿರುವ ಶ್ರೀರಾಮಲಲಾನ ಪ್ರಾಣಪ್ರತಿಷ್ಠಾಪನೆ ಸಮಾರಂಭದ ನಿಮಿತ್ತ…
ಅಯೋಧ್ಯೆ (ಉತ್ತರ ಪ್ರದೇಶ) – ಜನವರಿ 22 ರಂದು ಶ್ರೀ ರಾಮ ಜನ್ಮಭೂಮಿಯಲ್ಲಿ ಶ್ರೀ ರಾಮಲಾಲಾನ ಪ್ರಾಣಪ್ರತಿಷ್ಠಾಪನೆ ಮಾಡಲಾಗುವುದು. ಈ ಐತಿಹಾಸಿಕ ದಿನವು ಹತ್ತಿರವಾಗುತ್ತಿದ್ದಂತೆ, ಕೊಟ್ಯಾಂತರ ಹಿಂದೂಗಳ ಆತೂರತೆ ಮತ್ತು ಉತ್ಸಾಹವು ಹೆಚ್ಚುತ್ತಿದೆ. ಅದೇ ರೀತಿ, ‘ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸ’ ತನ್ನ ಖಾತೆಯಿಂದ ‘ಎಕ್ಸ್’ ನಲ್ಲಿ ಶ್ರೀರಾಮ ಮಂದಿರದ ಪ್ರವೇಶದ್ವಾರದ ಬಳಿ ಶ್ರೀ ಹನುಮಾನ್, ಗಜರಾಜ, ಸಿಂಹ ಮತ್ತು ಗರುಡನ ವಿಗ್ರಹಗಳ ಚಿತ್ರಗಳನ್ನು ಪ್ರಸಾರ ಮಾಡಿದೆ. ಅವುಗಳನ್ನು ಇತ್ತೀಚೆಗೆ ಸ್ಥಾಪಿಸಲಾಗಿದೆ. ತಿಳಿ ಗುಲಾಬಿ ಬಣ್ಣದ ಈ ವಿಗ್ರಹಗಳು ತುಂಬಾ ಸಾತ್ವಿಕವಾಗಿ ಕಾಣುತ್ತವೆ. ಈ ಕಲ್ಲುಗಳನ್ನು ರಾಜಸ್ಥಾನದ ಬನ್ಸಿಪಹದ್‌ಪುರ ಗ್ರಾಮದಿಂದ ಅಯೋಧ್ಯೆಗೆ ತರಲಾಗಿತ್ತು. ಈ ಕಲ್ಲನ್ನು ‘ಬಲುವಾ ದಗಡ್’ ಎಂದು ಕರೆಯಲಾಗುತ್ತದೆ.
ಸಿಂಘದ್ವಾರದಿಂದ 32 ಮೆಟ್ಟಿಲುಗಳನ್ನು ಏರುವ ಮೂಲಕ ದೇವಾಲಯವನ್ನು ಪೂರ್ವದಿಂದ ಪ್ರವೇಶಿಸಬಹುದು. ಈ ವಿಗ್ರಹಗಳ ವಿಶೇಷವೆಂದರೆ ಈ ಎಲ್ಲಾ ವಿಗ್ರಹಗಳು ದೇವಾಲಯದ ಮೆಟ್ಟಿಲುಗಳ ಬಳಿ ವಿರಾಜಮಾನವಾಗಿವೆ. ಈ ಕಲಾಕೃತಿಗಳನ್ನು ಬಿಹಾರ, ಉತ್ತರ ಪ್ರದೇಶ ಮತ್ತು ಗುಜರಾತ್‌ನ ಕುಶಲಕರ್ಮಿಗಳು ತಯಾರಿಸಿದ್ದಾರೆ.