ಕಾಟ್ಮಾಂಡು (ನೇಪಾಳ) – ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ನೇಪಾಳದ ಎರಡು ದಿನದ ಪ್ರವಾಸದಲ್ಲಿದ್ದಾರೆ. ಜನವರಿ ೪ ರಂದು ಅವರು ನೇಪಾಳದ ವಿದೇಶಾಂಗ ಸಚಿವ ನಾರಾಯಣ ಪ್ರಕಾಶ ಸೌದ ಇವರ ಜೊತೆಗೆ ಏಳನೇ ಸಂಯುಕ್ತ ಆಯೋಗದ ಸಭೆ ನಡೆಸಿದರು. ಈ ಸಮಯದಲ್ಲಿ ಭಾರತ ಮತ್ತು ನೇಪಾಳ ಇವರು ನಾಲ್ಕು ಒಪ್ಪಂದದ ಮೇಲೆ ಸಹಿ ಹಾಕಿದರು. ಈ ಸಭೆಯಲ್ಲಿ ವ್ಯಾಪಾರ, ಆರ್ಥಿಕ ಸಂಬಂಧ, ಭೂಮಿ, ರೈಲು, ರಕ್ಷಣೆ, ಕೃಷಿ, ವಿದ್ಯುತ್, ಜಲ ಸಂಪತ್ತು, ವಾಯು ಸಂಪರ್ಕ, ಪ್ರವಾಸೋದ್ಯಮ, ನಾಗರಿ ವಿಮಾನ ಸಾರಿಗೆ ಮುಂತಾದ ಕ್ಷೇತ್ರದಲ್ಲಿ ದ್ವಿಪಕ್ಷಯ ಸಂಬಂಧದ ಮೇಲೆ ಚರ್ಚೆ ನಡೆದಿದೆ. ಭಾರತ ಸರಕಾರ ನೇಪಾಳದಲ್ಲಿನ ಭೂಕಂಪ ಪೀಡಿತರಿಗಾಗಿ ಇನ್ನೂ 1 ಸಾವಿರ ಕೋಟಿ ರೂಪಾಯಿಯ ಆರ್ಥಿಕ ಸಹಾಯ ನೀಡಲಿದೆ, ಎಂದು ಜೈ ಶಂಕರ ಇವರು ಈ ಸಮಯದಲ್ಲಿ ಘೋಷಣೆ ಮಾಡಿದರು. ಈ ಸಮಯದಲ್ಲಿ ನೇಪಾಳದ ವಿದೇಶಾಂಗ ಸಚಿವ ನಾರಾಯಣ ಪ್ರಕಾಶ ಸೌದ ಇವರು, ಭಾರತದ ಜೊತೆಗೆ ಮಾಡಿರುವ ಒಪ್ಪಂದ ಎರಡು ದೇಶದಲ್ಲಿನ ಸದೃಢ ಸಂಬಂಧದ ದಿಕ್ಕಿನತ್ತ ಒಂದು ಮಹತ್ವದ ಹೆಜ್ಜೆ ಆಗಿದೆ ಎಂದು ಹೇಳಿದರು. ಕಳೆದ ನವಂಬರ್ ನಲ್ಲಿ ೬.೪ ತೀವ್ರತೆಯ ಭೂಕಂಪ ಸಂಭವಿಸಿ ೧೨೮ ಜನರು ಸಾವನ್ನಪ್ಪಿದರು ಹಾಗೂ ೧೪೧ ಜನರು ಗಾಯಗೊಂಡಿದ್ದರು.
೧. ಇದರ ಮೊದಲು ಡಾ. ಜೈಶಂಕರ ಇವರು ಕಟ್ಮಾಂಡುನಲ್ಲಿ ನೇಪಾಳದ ಪ್ರಧಾನ ಮಂತ್ರಿ ಪುಷ್ಪ ಕಮಲ ದಹಲ ಇವರನ್ನು ಭೇಟಿ ಮಾಡಿದರು ಮತ್ತು ದ್ವಿಪಕ್ಷಿಯ ಸಂಬಂಧದ ಮೇಲೆ ವಿಚಾರ ಮಂಡಿಸಿದರು.
೨. ಜೈ ಶಂಕರ ಇವರು ನೇಪಾಳಿ ಕ್ರಿಕೆಟ ಮಂಡಳಿಯ ಸದಸ್ಯರ ಜೊತೆ ಕೂಡ ಸಂವಾದ ನಡೆಸಿದರು.
EAM Jaishankar in Kathmandu: India announces NPR 1000 crores help for Nepal for earthquake relief measureshttps://t.co/iFCAt6e2xO
— OpIndia.com (@OpIndia_com) January 5, 2024