‘ಹಿಟ್ ಅಂಡ್ ರನ್’ ಪ್ರಕರಣದಲ್ಲಿ ಹೆಚ್ಚಿನ ಆರೋಪಿಗಳ ಖುಲಾಸೆ ಆಗುತ್ತದೆ !

ನವ ದೆಹಲಿ – ರಾಷ್ಟ್ರೀಯ ಅಪರಾಧ ನೋಂದಣಿ ಇಲಾಖೆಯಿಂದ ೨೦೨೨ ರ ಅಂಕಿ ಸಂಖ್ಯೆಗಳ ಪ್ರಕಾರ ‘ಹಿಟ್ ಅಂಡ್ ರನ್’ ಪ್ರಕರಣದಲ್ಲಿನ ಬಹಳಷ್ಟು ಆರೋಪಿ ಆರೋಪ ಸಾಬೀತಾಗದೆ ನಿರಪರಾಧಿ ಎಂದು ಬಿಡುಗಡೆ ಆಗುತ್ತಾರೆ.

೧. ಕಳೆದ ೫ ವರ್ಷಗಳ ಪೈಕಿ ೨ ವರ್ಷಗಳಲ್ಲಿ ಶಿಕ್ಷೆಯ ಪ್ರಮಾಣ ಶೇಖಡ ೫೦ ಕ್ಕಿಂತಲೂ ಕೆಳಗೆ ಬಂದಿದೆ. ಕೇವಲ ಅಪವಾದವೆಂದು ೨೦೨೦ ರಲ್ಲಿ ಶೇಕಡ ೫೮.೧ ಮತ್ತು ೨೦೨೧ ರಲ್ಲಿ ಶೇಕಡ ೫೧.೯ ರಷ್ಟು ಪ್ರಮಾಣ ಇದೆ. ಇತರ ಗಂಭೀರ ಅಪರಾಧದಲ್ಲಿ ಶಿಕ್ಷೆಯ ಪ್ರಮಾಣ ಇನ್ನೂ ಕಡಿಮೆ ಆಗಿದೆ. ೨೦೨೨ ರಲ್ಲಿ ಹತ್ಯೆಯ ಮೊಕದ್ದಮೆಯಲ್ಲಿನ ಶಿಕ್ಷೆಯ ಪ್ರಮಾಣ ಶೇಕಡ ೪೩.೮ ರಷ್ಟು, ಅಪಹರಣ ಮತ್ತು ಅಪಹರಣದ ಪ್ರಯತ್ನದಲ್ಲಿ ಇದು ಶೇಕಡ ೩೩.೯ ರಷ್ಟು ಇತ್ತು.

೨. ಕಳೆದ ೫ ವರ್ಷಗಳಲ್ಲಿ ಹಿಟ್ ಅಂಡ್ ರನ್ ನ ಬಾಕಿ ಉಳಿದಿರುವ ಪ್ರಕರಣದ ಸಂಖ್ಯೆ ಹೆಚ್ಚುತ್ತಿದೆ. ೨೦೧೮ ರಲ್ಲಿ ಬಾಕಿ ಇರುವ ಪ್ರಮಾಣ ಶೇಖಡಾ ೯೦.೪ ಇತ್ತು ಹಾಗೂ ೨೦೨೨ ರಲ್ಲಿ ಹೆಚ್ಚಾಗಿ ಶೇಕಡ ೯೩ ಆಗಿದೆ.

ಸಂಪಾದಕರ ನಿಲುವು

* ಆರೋಪಿಗಳ ಖುಲಾಸೆ ಆಗುತ್ತದೆ, ಇದರ ಅರ್ಥ ಅವರು ನಿಜವಾಗಿ ಅಪರಾಧ ಮಾಡಿಲ್ಲ ಅಥವಾ ಅವರು ಅಪರಾಧ ಮಾಡಿದರು ಎಂಬುದು ಪೊಲೀಸರು ಸಾಬೀತಪಡಿಸಲಾಗಿಲ್ಲ ! ಇದಲ್ಲದೆ ‘ಆರೋಪಿಗಳ ಖುಲಾಸೆ ಆಗುತ್ತದೆಯಾದರೆ ಅಪರಾಧ ಯಾರು ಮಾಡಿದರು ? ಈ ಪ್ರಶ್ನೆ ನಿರುತ್ತರವಾಗಿ ಉಳಿಯುತ್ತದೆ ! ಇಂತಹ ಸಮಯದಲ್ಲಿ ಈ ಸಂಪೂರ್ಣ ಪ್ರಕರಣದ ಅಭ್ಯಾಸ ಮಾಡುವುದಕ್ಕಾಗಿ ವ್ಯವಸ್ಥೆ ನಿರ್ಮಾಣ ಮಾಡುವುದು ಆವಶ್ಯಕವಾಗುತ್ತದೆ !

(‘ಹಿಟ್ ಅಂಡ್ ರನ್’ ಪ್ರಕರಣದಲ್ಲಿ ರಸ್ತೆಯಲ್ಲಿನ ಅಪಘಾತದ ನಂತರ ಚಾಲಕನು ಘಟನಾ ಸ್ಥಳದಿಂದ ಓಡಿ ಹೋಗುತ್ತಾನೆ ಮತ್ತು ಪೊಲೀಸರಿಗೆ ಮಾಹಿತಿ ನೀಡುವುದಿಲ್ಲ.)