ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ ಶ್ರೀ ರಾಮ ಮಂದಿರದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದೆ !
ಅಯೋಧ್ಯೆ (ಉತ್ತರ ಪ್ರದೇಶ) – ಶ್ರೀ ರಾಮನ ಭವ್ಯ ಮಂದಿರವನ್ನು ಮುಂಬರುವ ಜನೇವರಿ 22ರಂದು ಉದ್ಘಾಟನೆಗೊಂಡು ಮೂರ್ತಿಯ ಪ್ರಾಣಪ್ರತಿಷ್ಠಾಪನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಮಂದಿರದ ವೈಶಿಷ್ಟ್ಯಗಳ ವಿವರವಾದ ಮಾಹಿತಿಯನ್ನು ಅಲ್ಲಿಯ ಸುಖ-ಸೌಲಭ್ಯಗಳು ಮುಂತಾದ ವಿವರವಾದ ಮಾಹಿತಿಯನ್ನು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ `ಎಕ್ಸ್’ ಮೇಲೆ ಪೋಸ್ಟ್ ಮಾಡಿದೆ. ಈ ಮಾಹಿತಿ ಕೆಳಗಿನಂತಿದೆ.
अयोध्या में निर्माणाधीन श्रीराम जन्मभूमि मंदिर की विशेषताएं:
1. मंदिर परम्परागत नागर शैली में बनाया जा रहा है।
2. मंदिर की लंबाई (पूर्व से पश्चिम) 380 फीट, चौड़ाई 250 फीट तथा ऊंचाई 161 फीट रहेगी।
3. मंदिर तीन मंजिला रहेगा। प्रत्येक मंजिल की ऊंचाई 20 फीट रहेगी। मंदिर में कुल… pic.twitter.com/BdKNdATqF6
— Shri Ram Janmbhoomi Teerth Kshetra (@ShriRamTeerth) January 4, 2024
1. ಅಯೋಧ್ಯೆಯ ಶ್ರೀರಾಮಮಂದಿರವನ್ನು ಸಾಂಪ್ರದಾಯಿಕ ನಗರ ಶೈಲಿಯಲ್ಲಿ ನಿರ್ಮಿಸಲಾಗಿದೆ.
2. ದೇವಸ್ಥಾನದ ಉದ್ದ (ಪೂರ್ವದಿಂದ ಪಶ್ಚಿಮಕ್ಕೆ) 380 ಅಡಿ, ಅಗಲ 250 ಮತ್ತು ಎತ್ತರ 161 ಅಡಿ ಇದೆ.
3. ಈ ದೇವಸ್ಥಾನವು 3 ಅಂತಸ್ತಿನದ್ದಾಗಿದೆ. ಪ್ರತಿಯೊಂದು ಮಹಡಿಯ ಎತ್ತರ 20 ಅಡಿ ಇರುವುದು.
4. ದೇವಸ್ಥಾನವು ಒಟ್ಟು 392 ಕಂಬಗಳು ಮತ್ತು 44 ಪ್ರವೇಶದ್ವಾರಗಳನ್ನು ಹೊಂದಿರುತ್ತದೆ.
5. ಮುಖ್ಯ ಗರ್ಭಗುಡಿಯಲ್ಲಿ ಭಗವಾನ ಶ್ರೀರಾಮನು ಮಗುವಿನ ರೂಪದಲ್ಲಿರುತ್ತಾನೆ ಮತ್ತು ಮೊದಲ ಮಹಡಿಯಲ್ಲಿ ಶ್ರೀರಾಮನ ಆಸ್ಥಾನವಿರಲಿದೆ.
6. ದೇವಸ್ಥಾನದಲ್ಲಿ ನೃತ್ಯ ಮಂಟಪ, ರಂಗಮಂಟಪ, ಸಭಾ ಮಂಟಪ, ಪ್ರಾರ್ಥನಾ ಮಂಟಪ ಮತ್ತು ಕೀರ್ತನಾ ಮಂಟಪ ಹೀಗೆ 5 ಮಂಟಪಗಳು ಇರಲಿದೆ.
7. ದೇವಸ್ಥಾನದ ಕಂಬಗಳ ಮೇಲಿನ ಮತ್ತು ಗೋಡೆಯ ಮೇಲೆ ದೇವತೆಗಳ ಮೂರ್ತಿಗಳನ್ನು ಕೆತ್ತಲಾಗಿದೆ.
8. ದೇವಸ್ಥಾನದ ಪೂರ್ವದಲ್ಲಿರುವ ಸಿಂಹದ್ವಾರದ ಮೂಲಕ 32 ಮೆಟ್ಟಿಲುಗಳನ್ನು ಏರಿ ಪ್ರವೇಶಿಸಬಹುದು.
9. ದೇವಸ್ಥಾನ ಪ್ರವೇಶಕ್ಕಾಗಿ ವಿಕಲಚೇತನರು ಮತ್ತು ವೃದ್ಧರಿಗಾಗಿ `ರಾಂಪ್’ ಹಾಗೆಯೇ ಲಿಫ್ಟ್‌ಗಳ ವ್ಯವಸ್ಥೆ ಇರಲಿದೆ.
10.ದೇವಸ್ಥಾನದ ಸುತ್ತಲೂ ಒಂದು ಆಯತಾಕಾರದ ಗೋಡೆ ಇರಲಿದೆ. ಎಲ್ಲಾ ನಾಲ್ಕು ದಿಕ್ಕುಗಳ ಒಟ್ಟು ಉದ್ದ 732 ಮೀಟರ್ ಮತ್ತು ಅಗಲ 14 ಅಡಿ ಇರಲಿದೆ.
11. ದೇವಸ್ಥಾನದ ಸುತ್ತಲೂ ಇರಲಿರುವ ಉದ್ಯಾನವನದ 4 ಮೂಲೆಗಳಲ್ಲಿ ಸೂರ್ಯದೇವ, ಮಾತಾ ಭಗವತಿ, ಗಣಪತಿ ಮತ್ತು ಭಗವಾನ್ ಶಂಕರನಿಗೆ ಅರ್ಪಿತವಾದ ನಾಲ್ಕು ದೇವಸ್ಥಾನಗಳನ್ನು ನಿರ್ಮಿಸಲಾಗುವುದು. ಉತ್ತರಕ್ಕೆ ಶ್ರೀ ಅನ್ನಪೂರ್ಣಾ ದೇವಿಯ ಹಾಗೂ ದಕ್ಷಿಣಕ್ಕೆ ಶ್ರೀ ಹನುಮಾನನ ದೇವಸ್ಥಾನಗಳಿವೆ.
12.ಮಂದಿರದ ಹತ್ತಿರ ಪೌರಾಣಿಕ ಕಾಲದ ಸೀತಾಕೂಪವಿರಲಿದೆ.
13. ಮಂದಿರದ ಸಂಕೀರ್ಣದಲ್ಲಿ ಪ್ರಸ್ತಾಪಿಸಲಾದ ಇತರ ದೇವಸ್ಥಾನಗಳು ಮಹರ್ಷಿ ವಾಲ್ಮೀಕಿ, ಮಹರ್ಷಿ ವಶಿಷ್ಠ, ಮಹರ್ಷಿ ವಿಶ್ವಾಮಿತ್ರ, ಮಹರ್ಷಿ ಅಗಸ್ತ್ಯ, ನಿಷಾದರಾಜ, ಮಾತಾ ಶಬರಿ ಮತ್ತು ಋಷಿ ಪತ್ನಿ ದೇವಿ ಅಹಲ್ಯಾ ಇವರಿಗೆ ಸಮರ್ಪಿಸಲಾಗುವುದು.
14. ನೈಋತ್ಯ ಭಾಗದಲ್ಲಿರುವ ಪುರಾತನ ಶಿವನ ದೇವಸ್ಥಾನದ ಜೀರ್ಣೋದ್ಧಾರವನ್ನು ಮಾಡಿ ಅಲ್ಲಿ ಜಟಾಯುವಿನ ಮೂರ್ತಿಯನ್ನು ಸ್ಥಾಪಿಸಲಾಗಿದೆ.
15. ಶ್ರೀರಾಮ ಮಂದಿರದ ಕಾಮಗಾರಿಯಲ್ಲಿ ಕಬ್ಬಿಣವನ್ನು ಬಳಸಿರುವುದಿಲ್ಲ.
16. ಮಂದಿರದ ಕೆಳಗೆ 14 ಮೀಟರ ದಪ್ಪದ ‘ರೋಲರ್ ಕಾಂಪ್ಯಾಕ್ಟೆಡ್ ಕಾಂಕ್ರೀಟ್’ (ಆರ್‌ಸಿಸಿ) ಅನ್ನು ಸುರಿಯಲಾಗುತ್ತಿದೆ. ಅದಕ್ಕೆ ಕೃತಕ ಕಲ್ಲಿನ ಆಕಾರ ನೀಡಲಾಗಿದೆ.
17. ಮಣ್ಣಿನ ತೇವದಿಂದ ಮಂದಿರವನ್ನು ರಕ್ಷಿಸಲು 21 ಅಡಿ ಎತ್ತರದ ಗ್ರಾನೈಟ್ ಮಂಟಪವನ್ನು ನಿರ್ಮಿಸಲಾಗಿದೆ.
18. ದೇವಸ್ಥಾನದ ಸಂಕೀರ್ಣದಲ್ಲಿ ಒಳಚರಂಡಿ ಸಂಸ್ಕರಣೆ ಮತ್ತು ಜಲಶುದ್ಧೀಕರಣಕ್ಕಾಗಿ ಯೋಜನೆಗಳು ಇರುತ್ತವೆ. ಹಾಗೆಯೇ ಅಗ್ನಿಶಾಮಕ ದಳಕ್ಕೆ ನೀರಿನ ವ್ಯವಸ್ಥೆ ಹಾಗೂ ಸ್ವತಂತ್ರ ‘ಜಲ ನಿಲ್ದಾಣ’ ವ್ಯವಸ್ಥೆ ಮಾಡಲಾಗಿದೆ.
19. ಮಂದಿರದ ಹತ್ತಿರ 25 ಸಾವಿರ ಜನರಿಗೆ ಸೌಲಭ್ಯ ದೊರಕಬೇಕು ಎಂದು, ಕೇಂದ್ರವನ್ನು ನಿರ್ಮಿಸಲಾಗುತ್ತಿದ್ದು, ಇಲ್ಲಿ ಭಕ್ತರ ಸಾಮಗ್ರಿಗಳಿಗೆ ಲಾಕರ್ ಸೌಲಭ್ಯ, ಹಾಗೆಯೇ ವೈದ್ಯಕೀಯ ಸೌಲಭ್ಯವೂ ಇರಲಿದೆ.
20. ದೇವಾಲಯದ ಪರಿಸರದಲ್ಲಿ ಸ್ನಾನಗೃಹ, ಶೌಚಾಲಯ, ವಾಶ್ ಬೇಸಿನ್ ಮೊದಲಾದ ಸೌಲಭ್ಯಗಳಿರುತ್ತವೆ.
21. ಈ ಮಂದಿರವನ್ನು ಸಂಪೂರ್ಣವಾಗಿ ಭಾರತೀಯ ಸಂಪ್ರದಾಯ ಮತ್ತು ಸ್ಥಳೀಯ ತಂತ್ರಜ್ಞಾನದ ಪ್ರಕಾರ ನಿರ್ಮಿಸಲಾಗಿದೆ. ಇಲ್ಲಿ, ಪರಿಸರ ಮತ್ತು ನೀರಿನ ಸಂರಕ್ಷಣೆಗೆ ವಿಶೇಷ ಗಮನವನ್ನು ನೀಡಲಾಗುತ್ತಿದ್ದು, ಈ ಕಾರಣದಿಂದಾಗಿ, 70 ಎಕರೆ ಪ್ರದೇಶದಲ್ಲಿ ಶೇ. 70 ರಷ್ಟು ಕ್ಷೇತ್ರ ಯಾವಾಗಲೂ ಹಸಿರಾಗಿರುತ್ತದೆ.