ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಅಯೋಧ್ಯೆಯ ಶ್ರೀರಾಮ ಮಂದಿರ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ವಿಶೇಷ ಕಾರ್ಯಾಚರಣೆ ತಂಡದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮಿತಾಬ್ ಯಶ ಅವರನ್ನು ಬಾಂಬ್ ಮೂಲಕ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ತಹರ್ ಸಿಂಗ್ ಮತ್ತು ಓಂ ಪ್ರಕಾಶ್ ಮಿಶ್ರಾ ಇಬ್ಬರನ್ನೂ ಬಂಧಿಸಲಾಗಿದೆ. ಅವರು ಗೊಂಡಾ ಮೂಲದವರಾಗಿದ್ದಾರೆ. ಭಾರತೀಯ ಕಿಸಾನ ಮಂಚ ಮತ್ತು ಭಾರತೀಯ ಗೋಸೇವಾ ಪರಿಷತ ಅಧ್ಯಕ್ಷ ದೇವೇಂದ್ರ ತಿವಾರಿ ಇವರೇ ಸಂಚು ರಚಿಸಿದ್ದರೆಂದು ಬಹಿರಂಗಗೊಂಡಿದೆ. ಭದ್ರತೆಯನ್ನು ಪಡೆಯಲು ಮತ್ತು ದೊಡ್ಡ ನಾಯಕನಾಗಲು, ಅವನು ತನ್ನ ಸಹಚರರಿಗೆ ಬೆದರಿಕೆಯ ಇ-ಮೇಲ್‌ಗಳನ್ನು ಕಳುಹಿಸಲು ಹೇಳುತ್ತಿದ್ದನು.
ದೇವೇಂದ್ರ ತಿವಾರಿಯವರ ಹೇಳಿಕೆಯ ಮೇಲೆ ತಹರ ಸಿಂಗ ಮತ್ತು ಓಂ ಪ್ರಕಾಶ ಎರಡು ಹೊಸ ಮೊಬೈಲಗಳನ್ನು ಖರೀದಿಸಿದ್ದರು. ಇದಾದ ನಂತರ ಇಬ್ಬರೂ ದೇವೇಂದ್ರನ ಕಚೇರಿಯಲ್ಲಿ ಇಂಟರ್‌ನೆಟ್ ಬಳಸಿ ಆತನ ಎಕ್ಸ್ ಖಾತೆಯಿಂದ ಬೆದರಿಕೆ ಹಾಕುತ್ತಿದ್ದರು.
Uttar Pradesh STF arrests two people for bomb threat to Ram temple, CM Yogi Adityanath#UttarPradesh #UPSTF #Ramtemple #RamMandir #YogiAdityanath#bombthreathttps://t.co/hpK2vcWTzL
— IndiaTV English (@indiatv) January 4, 2024