ಅಯೋಧ್ಯೆ (ಉತ್ತರಪ್ರದೇಶ) – ಇಲ್ಲಿಯ ಭವ್ಯ ಶ್ರೀರಾಮ ಮಂದಿರದಲ್ಲಿ ಸ್ಥಾಪಿಸಲಾಗುವ ಶ್ರೀರಾಮ ಮೂರ್ತಿಗಾಗಿ ಒಟ್ಟು ೩ ಮೂರ್ತಿಗಳು ಕೆತ್ತಲಾಗಿದೆ. ಗಣೇಶ ಭಟ್ಟ, ಸತ್ಯನಾರಾಯಣ ಪಾಂಡೆ ಮತ್ತು ಅರುಣ ಯೋಗಿರಾಜ ಈ ೩ ಶಿಲ್ಪಿಗಳು ಇವುಗಳನ್ನು ಕೆತ್ತಿದ್ದಾರೆ. ಇದರಲ್ಲಿನ ಒಂದು ಮೂರ್ತಿಯ ಆಯ್ಕೆ ಮಾಡಲಾಗಿದೆ; ಆದರೆ ಅದರ ಅಧಿಕೃತ ಮಾಹಿತಿ ಇಲ್ಲಿಯವರೆಗೆ ನೀಡಲಾಗಿಲ್ಲ. ಈ ಮೂರ್ತಿಗಳು ಯಾವ ಸ್ಥಳದಲ್ಲಿ ಕೆತ್ತಲಾಗಿದ್ದವು ಅಲ್ಲಿ ಬೆಳಗ್ಗೆ ಮತ್ತು ಸಂಜೆ ವೇದಮೂರ್ತಿ ವೇದ ಮಂತ್ರ ಪಾರಾಯಣ ಮಾಡುತ್ತಿದ್ದರು, ಎಂದು ಈಗ ಮಾಹಿತಿ ಬೆಳಕಿಗೆ ಬಂದಿದೆ. ೬ ತಿಂಗಳಿಂದ ಈ ಮೂರ್ತಿ ಕೆತ್ತನೆಯ ಕಾರ್ಯ ಆರಂಭವಾಗಿತ್ತು. ಈ ಸಮಯದಲ್ಲಿ ಈ ವೇದ ಮಂತ್ರ ಪಾರಾಯಣ ಮಾಡಲಾಗುತ್ತಿತ್ತು. ಈ ವಿಷಯವಾಗಿ ಶಿಲ್ಪಿಗಳು, ಮಂತ್ರ ಪಠಣ ಮಾಡಿರುವುದರಿಂದ ಅಲ್ಲಿಯ ವಾತಾವರಣ ಪವಿತ್ರವಾಗಿತ್ತು ಎಂದು ಹೇಳಿದರು.
Updates on #AyodhyaRamMandir
— Idols of Shri Ram were being made amidst an atmosphere filled with #VedicChants!
— The idol will undergo Jal Abhishek with water from a silver vessel containing 1,000 holes
— Mixture of Cardamom and sugar will be given as prasad!
— Sanatan Prabhat (@SanatanPrabhat) January 4, 2024
೧ ಸಾವಿರ ರಂದ್ರಗಳಿರುವ ಬೆಳ್ಳಿಯ ಪಾತ್ರೆಯಿಂದ ಮೂರ್ತಿಗೆ ಜಲ ಅಭಿಷೇಕ !
ಶ್ರೀರಾಮ ಮಂದಿರದಲ್ಲಿನ ಗರ್ಭಗೃಹದಲ್ಲಿ ಸ್ಥಾಪಿತವಾಗುವ ಶ್ರೀ ರಾಮ ಮೂರ್ತಿಗೆ ೧ ಸಾವಿರ ರಂದ್ರ ಇರುವ ಬೆಳ್ಳಿಯ ಪಾತ್ರೆಯಿಂದ ಜಲಾಭಿಷೇಕ ಮಾಡಲಾಗುವುದು. ಸಂಪೂರ್ಣ ಪೂಜೆಗಾಗಿ ಕಾಶಿಯಿಂದ ಸಾಹಿತ್ಯ ಸಿದ್ಧಪಡಿಸಲಾಗಿದೆ. ಮಂದಿರದ ಪರಿಸರದಲ್ಲಿ ಈಶಾನ್ಯ ಮೂಲೆಯಲ್ಲಿ ಮಂಟಪ ಸಿದ್ದಗೊಳಿಸಿದ್ದು ಅದರಲ್ಲಿ ಎರಡು ಅಡಿ ಆಳ ಮತ್ತು ಅಗಲ ಇರುವ ೯ ಕುಂಡಗಳು ತಯಾರಿಸಲಾಗಿದೆ. ಯಜ್ಞದಲ್ಲಿ ತುಪ್ಪ ಮತ್ತು ಸಮೇಧೆ ಅರ್ಪಿಸುವುದಕ್ಕಾಗಿ ಮಾವಿನ ಕಟ್ಟಿಗೆಯಿಂದ ಸಲಕರಣೆಗಳನ್ನು ತಯಾರಿಸಲಾಗಿದೆ.
ಪ್ರಸಾದದಲ್ಲಿ ಏಲಕ್ಕಿ ನೀಡುವರು !
ಪ್ರಾಣಪ್ರತಿಷ್ಠಾಪನೆಯ ಸಮಯದಲ್ಲಿ ಬರುವ ದೇಶದಲ್ಲಿನ ೮ ಸಾವಿರ ಗಣ್ಯರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಈ ಸಮಯದಲ್ಲಿ ಏಲಕ್ಕಿ ಪ್ರಸಾದ ನೀಡುವರು. ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿಂದ ಇದಕ್ಕಾಗಿ ೫ ಲಕ್ಷ ಪ್ಯಾಕೆಟ್ ಗಳ ಬೇಡಿಕೆ ನೀಡಲಾಗಿದೆ. ಇನ್ನೊಂದು ಕಡೆಗೆ ಪ್ರಾಣ ಪ್ರತಿಷ್ಠಾಪನೆಯ ಮಹಾಪ್ರಸಾದಕ್ಕಾಗಿ ಮೆಹೆಂದಿಪುರ ಬಾಲಾಜಿ ಇಲ್ಲಿಂದ ೨ ಲಕ್ಷ ಉಂಡೆ ಪ್ಯಾಕೆಟ್ ಕಳುಹಿಸಲಾಗುವುದು.
ಛತ್ತಿಸ್‌ಗಢ ಸರಕಾರದಿಂದ ಜನವರಿ ೨೨ ರಂದು ಮದ್ಯ ನಿಷೇಧ ದಿನ ಎಂದು ಘೋಷಣೆ !
ಛತ್ತೀಸ್ಗಡದಲ್ಲಿ ಜನವರಿ ೨೨ ರಂದು ಪ್ರಾಣಪ್ರತಿಷ್ಠೆಯ ದಿನ ಮದ್ಯ ನಿಷೇಧ (ಡ್ರೈ ಡೆ) ಇರುವುದು. ಛತ್ತೀಸ್ಗಡದ ಮುಖ್ಯಮಂತ್ರಿ ವಿಷ್ಣುದೇವ ಸಾಯ ಇವರು ಈ ಸಂದರ್ಭದಲ್ಲಿ ಘೋಷಣೆ ಮಾಡಿದರು.