ಮಣಿಪುರದಲ್ಲಿ ಕ್ರೈಸ್ತ ಕುಕಿ ಭಯೋತ್ಪಾದಕರಿಂದ ಪೊಲೀಸರ ಮೇಲೆ ದಾಳಿ : 8 ಪೊಲೀಸರಿಗೆ ಗಾಯ !

ಕಳೆದ 3 ದಿನಗಳಲ್ಲಿ 4 ಜನರ ಹತ್ಯೆ, ಅನೇಕರು ಗಾಯಗೊಂಡಿದ್ದಾರೆ !

ಇಂಫಾಲ (ಮಣೀಪುರ) – ಹಿಂದೂ ಮೈತಯಿ ಹಾಗೂ ಕ್ರೈಸ್ತ ಕುಕಿ ಭಯೋತ್ಪಾದಕರ ನಡುವಿನ ಸಂಘರ್ಷವು ಮಧ್ಯಂತರದಲ್ಲಿ ಶಾಂತವಾಗಿತ್ತು. ಆದರೆ ಕಳೆದ 3 ದಿನಗಳಿಂದ ಪುನಃ ಇನ್ನೊಮ್ಮೆ ಮಣಿಪುರ ರಾಜ್ಯದಲ್ಲಿ ಹಿಂಸಾಚಾರದ ಘಟನೆಗಳು ನಡೆಯುತ್ತಿವೆ. ಜನವರಿ 1 ರ ಸಂಜೆ ಥೌಬಲನ ಲೆಂಗೊಲ ಹಿಲ್ ಪರಿಸರದಲ್ಲಿ 4 ಜನರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ 11 ಜನರು ಗಾಯಗೊಂಡಿದ್ದಾರೆ.

ಜನವರಿ 1, 2024 : ಸರಕಾರಿ ಅಧಿಕಾರಿಗಳು, ಆಕ್ರಮಣ ಮಾಡುವವರು ಹಣ ಕುದುರಿಸಲು ಲಿಂಗೋಲ ಚಿಂಗಜಾವೊ ಭಾಗಕ್ಕೆ ಬಂದಿದ್ದರು. ಆಗ ನಡೆದ ವಾದದ ಸಮಯದಲ್ಲಿ ಗುಂಡಿನ ಚಕಮಕಿ ನಡೆಯಿತು ಎಂದು ಹೇಳಿದರು. ಪ್ರಸಾರ ಮಾಧ್ಯಮಗಳ ಅನುಸಾರ, ಆರೋಪಿಗಳನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಆದರೆ, ಕೆಲವರು ಹೇಳುವಂತೆ ಮೃತರಾದವರು ಪಂಗಲ ಸಮಾಜದವರು ಅಂದರೆ ಮುಸಲ್ಮಾನರಾಗಿದ್ದಾರೆ. ಮೈತಯಿ ಹೆರಿಟೆಜ ಸೊಸೈಟಿಯ ಅನುಸಾರ ಘಟನೆಯು ಧಾರ್ಮಿಕ ತಿಕ್ಕಾಟದಿಂದ ನಡೆದಿಲ್ಲ.

ಡೆಸೆಂಬರ್ 31, 2023 : ಮೊರೆಹದಲ್ಲಿ ಕ್ರೈಸ್ತ ಕುಕಿ ಭಯೋತ್ಪಾದಕರು ಮಣಿಪುರ ಪೊಲೀಸರ ಮೇಲೆ ಆಕ್ರಮಣ ಮಾಡಿದ್ದರು. ಈ ಸಮಯದಲ್ಲಿ ಪೊಲೀಸರು ನೀಡಿದ್ದ ಪ್ರತ್ಯುತ್ತರದಲ್ಲಿ ಅನೇಕ ನಾಗರೀಕರು ಗಾಯಗೊಂಡಿದ್ದರು. ಅದೇ ದಿನ ಕೌತ್ರುಕ ಹಾಗೂ ಕಡಂಗಬಲ ಭಾಗದಲ್ಲಿ ಮೈತಯಿ ಹಾಗೂ ಕುಕಿಗಳ ನಡುವೆ ಗುಂಡಿನ ಚಕಮಕಿ ನಡೆದಿರುವ ವಾರ್ತೆಯಿದೆ.

ಡಿಸೆಂಬರ್ 30, 2023 : ಡಿಸೆಂಬರ್ 30 ರ ರಾತ್ರಿಯೇ ಮೊರೆಹದಲ್ಲಿ ಕುಕಿ ಭಯೋತ್ಪಾದಕರು ಮಾಡಿದ್ದ ಆಕ್ರಮಣದಲ್ಲಿ 4 ಮಣಿಪುರ ಪೊಲೀಸರು ಗಾಯಗೊಂಡಿದ್ದರು. ಈ ಸಮಯದಲ್ಲಿ ಗ್ರನೆಡ ಬಳಸಲಾಗಿತ್ತು. ಡಿಸೆಂಬರ್ 30ರ ಮದ್ಯಾಹ್ನ ಕುಕಿಗಳು ತೆಂಗನೌಪಾಲದಲ್ಲಿ ಪೊಲೀಸರ ವಾಹನಗಳ ಮೇಲೆ ಆಕ್ರಮಣ ಮಾಡಿದ್ದರು. ಇದರಲ್ಲಿಯೂ 4 ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದರು. ಕುಕಿ ಭಯೋತ್ಪಾದಕರು ಮೊರೆಹನ ವಾರ್ಡ್ ಕ್ರಮಾಂಕ 1 ರಲ್ಲಿ ಚಿಕಿಮ ವೆಂಗನಲ್ಲಿ ಮೊರೆಹನ ಕಾಮಾಂಡೊ ಪೊಲೀಸರ ಮೇಲೆ ಗೊಲಿಬಾರ ಮಾಡಿದರು ಹಾಗೂ ಬಾಂಬಗಳನ್ನು ಎಸೆದರು.

ರಾಜಧಾನಿ ಇಂಫಾಲದೊಂದಿಗೆ 5 ಜಿಲ್ಲೆಗಳಲ್ಲಿ ಪುನಃ ಸಂಚಾರ ನಿರ್ಬಂಧ ಜ್ಯಾರಿಯಾಗಿದೆ ! 

ಹಿಂಸಾಚಾರವನ್ನು ಹತೋಟಿಗೆ ತರಲು ಸರಕಾರವು ಇಂಫಾಲ ಪೂರ್ವ, ಇಂಫಾಲ ಪಶ್ಚಿಮ, ಥೌಬಲ, ಕಕಚಿಂಗ ಹಾಗೂ ವಿಷ್ಣುಪುರ ಜಿಲ್ಲೆಗಳಲ್ಲಿ ಪುನಃ ಸಂಚಾರ ನಿರ್ಬಂಧವನ್ನು ಜ್ಯಾರಿಗೊಳಿಸಲಾಗಿದೆ. ಮುಖ್ಯಮಂತ್ರಿ ಬೀರೆನ್ ಸಿಂಹ ರವರು ಒಂದು ವಿಡಿಯೋ ಸಂದೇಶದಿಂದ ಹಿಂಸಾಚಾರವನ್ನು ನಿಷೇಧಿಸಿದ್ದಾರೆ ಹಾಗೂ ಜನರಿಗೆ ಶಾಂತಿ ಕಾಪಾಡಲು ಕರೆ ನೀಡಿದ್ದಾರೆ.

ಮೇ 3, 2023 ರಿಂದ ರಾಜ್ಯದಲ್ಲಿ ಹಿಂಸಾಚಾರ ಆರಂಭವಾಗಿದ್ದು ಜಾತೀಯ ಸಂಘರ್ಷದಲ್ಲಿ ಇಲ್ಲಿಯವರೆಗೆ 180 ಜನರು ಬಲಿಯಾಗಿದ್ದರೆ ಅಂದಾಜು 60 ಸಾವಿರ ಜನರು ಮನೆಮಠ ಕಳೆದುಕೊಂಡಿದ್ದಾರೆ.

ಸಂಪಾದಕರ ನಿಲುವು

* ಕ್ರೈಸ್ತ ಕುಕಿ ಭಯೋತ್ಪಾದಕರು, ಹಾಗೆಯೇ ಮಯನ್ಮಾರದಿಂದ ದೊರೆಯುತ್ತಿರುವ ಸಹಾಯ ನೋಡುವಾಗ ಅವರ ಸಂಪೂರ್ಣ ಸರ್ವನಾಶವಾಗುವುದೇ ಆವಶ್ಯಕವಾಗಿದೆ. ಇದಕ್ಕಾಗಿ ಭಾರತೀಯ ಸೈನ್ಯ ಹಾಗೂ ಮಣೀಪುರ ಪೊಲೀಸರು ಕಾಶ್ಮೀರದಲ್ಲಿನ `ಆಪರೇಷನ್ ಆಲ್ ಔಟ್’ನಂತಹ ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳಬೇಕು !