‘ಮನುವಾದ್ ಮತ್ತೆ ಬರುತ್ತಿದೆಯಂತೆ !’ – ಕಾಂಗ್ರೆಸ್ ನಾಯಕ ಉದಿತ್ ರಾಜ್

ಶ್ರೀರಾಮ ಮಂದಿರ ಉದ್ಘಾಟನೆ ವಿಚಾರವಾಗಿ ಕಾಂಗ್ರೆಸ್ ನಾಯಕ ಉದಿತ್ ರಾಜ್ ದ್ವೇಷದ ಹೇಳಿಕೆ !

ನವ ದೆಹಲಿ – ಶ್ರೀರಾಮ ಮಂದಿರ ಉದ್ಘಾಟನೆ ಕುರಿತು ಕಾಂಗ್ರೆಸ್ ನಾಯಕ ಉದಿತ್ ರಾಜ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ‘ಎಕ್ಸ್’ನಲ್ಲಿ ಪೋಸ್ಟ್ ಪ್ರಸಾರ ಮಾಡುವಾಗ ಅವರು, ‘ಶ್ರೀರಾಮ ಮಂದಿರ ಉದ್ಘಾಟನೆ ಎಂದರೆ 500 ವರ್ಷಗಳ ನಂತರ ಮನುವಾದ ಮತ್ತೆ ಬರುತ್ತಿದೆ. ಬಿಜೆಪಿ ಬರೀ ನಾಟಕವಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಒಬ್ಬ ರಾಜನಾ ? ಬಿಜೆಪಿಯವರು ಸಂವಿಧಾನವನ್ನು ಒಪ್ಪುವುದಿಲ್ಲ.’ ಎಂದು ಹೇಳಿದರು.

ಶ್ರೀರಾಮ ಮಂದಿರ ಉದ್ಘಾಟನೆಗೆ 6 ಸಾವಿರಕ್ಕೂ ಹೆಚ್ಚು ಸಂತರು, ಮಹಂತರು, ಗಣ್ಯರನ್ನು ಆಹ್ವಾನಿಸಲಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ನಾಯಕಿ ಸೋನಿಯಾ ಗಾಂಧಿಯವರನ್ನೂ ಆಹ್ವಾನಿಸಲಾಗಿದೆ; ಆದರೆ, ಅವರು ಹಾಜರಿರುತ್ತಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಸಂಪಾದಕೀಯ ನಿಲುವು

ಮನು ಮತ್ತು ಅವನ ಮನುಸ್ಮೃತಿ ಎಂದರೇನು ?, ನಿಜವಾಗಿಯೂ ತಿಳಿದಿರುವವನು ಅಂತಹ ಹೇಳಿಕೆಯನ್ನು ಎಂದಿಗೂ ನೀಡುವುದಿಲ್ಲ. ಕೇವಲ ಹಿಂದೂ ಧರ್ಮದ ದ್ವೇಷದಿಂದ ಹಿಂದೂ ಧರ್ಮವನ್ನು ತೊರೆದು ಇತರ ಧರ್ಮಗಳನ್ನು ಒಪ್ಪಿಕೊಳ್ಳುವ ರಾಜಕಾರಣಿಗಳು ಉದ್ದೇಶಪೂರ್ವಕವಾಗಿ ಇಂತಹ ಹೇಳಿಕೆಗಳನ್ನು ನೀಡಿ ರಾಜಕೀಯ ಮಾಡುತ್ತಿದ್ದಾರೆ ಎಂಬುದು ಹಿಂದೂಗಳಿಗೆ ತಿಳಿದಿದೆ !