ಬರೇಲಿ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಬರೇಲಿಯಲ್ಲಿ ಫರಾಹ್ ಅನ್ಸಾರಿ ಎಂಬ ಮುಸ್ಲಿಂ ಹುಡುಗಿ ಹಿಂದೂ ಧರ್ಮ ಸ್ವೀಕರಿಸಿ ರಾಮ ಎಂಬ ಹಿಂದೂ ಹುಡುಗನನ್ನು ಮದುವೆಯಾಗಿ ಆತನ ‘ಜಾನಕಿ’ಯಾದಳು. ಡಿಸೆಂಬರ್ 30, 2023 ರಂದು, ಅವರಿಬ್ಬರ ಮದುವೆಯು ಭೂಟಾ ಪೊಲೀಸ್ ಠಾಣೆ ವ್ಯಾಪ್ತಿಯ ಅಯೋಧ್ಯಾ ಧಾಮ್ ದೇವಸ್ಥಾನದಲ್ಲಿ ನಡೆಯಿತು.
ಈ ಮದುವೆಗೆ ಇಬ್ಬರ ಮನೆಯವರೂ ಬಂದಿರಲಿಲ್ಲ. ಈ ಜೋಡಿ ಪೊಲೀಸರಿಗೆ ದೂರು ನೀಡಿದ್ದು, ಭದ್ರತೆ ನೀಡುವಂತೆ ಒತ್ತಾಯಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ 23ರ ಹರೆಯದ ಜಾನಕಿ, ‘ನನಗೆ ರಾಮ ಹಲವು ವರ್ಷಗಳಿಂದ ಪರಿಚಯ. ನಾವಿಬ್ಬರೂ ಸಣ್ಣಗಿರುವಾಗಲೇ ಖಾಸಗಿ ಶಾಲೆಯಲ್ಲಿ ಒಟ್ಟಿಗೆ ಓದುತ್ತಿದ್ದೆವು. ಅಂದಿನಿಂದ ನಾವು ಪರಸ್ಪರ ಪ್ರೀತಿಸುತ್ತಿದ್ದೇವೆ. ನಾನು ರಾಮನನ್ನು ಮದುವೆಯಾಗಲು ಬಯಸಿದ್ದೆ; ಹಾಗಾಗಿ ನಾನು ಹಿಂದೂ ಧರ್ಮವನ್ನು ಒಪ್ಪಿಕೊಂಡೆ. ಮದುವೆಯ ನಂತರ ನನ್ನ ಹೆಸರು ಜಾನಕಿ ಎಂದು ಇಡಲಾಯಿತು. ಇದೆಲ್ಲವನ್ನೂ ನನ್ನ ಸ್ವಂತ ಇಚ್ಛೆಯಿಂದ ಮಾಡಿದ್ದೇನೆ.” ಎಂದು ಹೇಳಿದಳು.
ಬಿ.ಟೆಕ್ ಪೂರ್ಣಗೊಂಡ ನಂತರ, ರಾಮ ಭೂಟಾ ನಗರದಲ್ಲಿ ಟ್ಯೂಟೋರಿಯಲ್ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಹಿಂದೂ ಹುಡುಗನೊಂದಿಗಿನ ಪ್ರೇಮ ಸಂಬಂಧವನ್ನು ಫರಾಹ ಕುಟುಂಬ ವಿರೋಧಿಸಿತು. ಮದುವೆಗೆ 3 ದಿನಗಳ ಮೊದಲು, ಫರಾಹ ಕುಟುಂಬವು ಅವಳನ್ನು ಕೋಣೆಯಲ್ಲಿ ಬೀಗ ಹಾಕಿ ಥಳಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ರಾಮ ಆಕೆಯ ಮನೆಗೆ ತೆರಳಿ ಆಕೆಯನ್ನು ಕರೆದುಕೊಂಡು ನೇರವಾಗಿ ಭೂಟಾ ಪೊಲೀಸ್ ಠಾಣೆಗೆ ಹೋದನು. ನಂತರ ಇಬ್ಬರೂ ಮೇಲಿನ ಸ್ಥಳದಲ್ಲಿ ಮದುವೆಯಾದರು. ಈ ಸಂದರ್ಭದಲ್ಲಿ ಭೂಟಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕ ಸರ್ವೇಂದ್ರ, ಖಂಡ ಕಾರ್ಯವಾಹ ಪರಮಾತ್ಮ ಸ್ವರೂಪ್ ಸೇರಿದಂತೆ ಹಲವರು ನವ ದಂಪತಿಗಳಿಗೆ ಆಶೀರ್ವದಿಸಿದರು.