ಗುಜರಾತ್ ನಲ್ಲಿ ಏಕಕಾಲಕ್ಕೆ 4 ಸಾವಿರಕ್ಕೂ ಹೆಚ್ಚು ನಾಗರಿಕರಿಂದ ಸೂರ್ಯ ನಮಸ್ಕಾರ : ‘ಗಿನ್ನಿಸ್ ಬುಕ್ ಆಫ್ ರೆಕಾರ್ಡ್’ನಲ್ಲಿ ದಾಖಲೆ !

ಮೆಹಸಾನಾ (ಗುಜರಾತ್) – ಜನವರಿ 1 ರಂದು ಮೊಢೆರಾ ಸೂರ್ಯ ಮಂದಿರ ಸೇರಿದಂತೆ 108 ಸ್ಥಳಗಳಲ್ಲಿ 4 ಸಾವಿರಕ್ಕೂ ಹೆಚ್ಚು ನಾಗರಿಕರು ಏಕಕಾಲದಲ್ಲಿ ಸೂರ್ಯ ನಮಸ್ಕಾರ ಮಾಡಿ ‘ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್’ ನಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಗೃಹ ಸಚಿವ ಹರ್ಷ ಸಾಂಘ್ವಿ ಮತ್ತು ‘ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್’ನ ನಿರೀಕ್ಷಕ ಸ್ವಪ್ನಿಲ್ ಡಾಂಗ್ರಿಕ್ ಉಪಸ್ಥಿತರಿದ್ದರು. ಈ ಮಾಹಿತಿಯನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್’ ಮೂಲಕ ನೀಡಿದ್ದಾರೆ. ಗುಜರಾತ್ ವಿಶೇಷ ಸಾಧನೆಯೊಂದಿಗೆ 2024 ನೇ ವರ್ಷವನ್ನು ಸ್ವಾಗತಿಸಿದೆ ಎಂದು ಅವರು ಹೇಳಿದರು. ಏಕಕಾಲದಲ್ಲಿ 108 ಸ್ಥಳಗಳಲ್ಲಿ ಅತಿ ಹೆಚ್ಚು ಜನ ಸೂರ್ಯ ನಮಸ್ಕಾರ ಮಾಡಿ ‘ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ದಾಖಲಾಗಿದ್ದಾರೆ. ನಮ್ಮ ಸಂಸ್ಕೃತಿಯಲ್ಲಿ ‘108’ ಸಂಖ್ಯೆಗೆ ವಿಶೇಷ ಮಹತ್ವವಿದೆ. ಈ ವಿಶ್ವ ದಾಖಲೆಯು ನಡೆದ ಪ್ರಸಿದ್ಧ ಸ್ಥಳಗಳಲ್ಲಿ ಮೊಢೆರಾದ ಸೂರ್ಯ ದೇವಾಲಯವೂ ಸೇರಿತ್ತು. ಅಲ್ಲಿ ಸೂರ್ಯ ನಮಸ್ಕಾರ ಮಾಡುವ ಉಪಕ್ರಮದಲ್ಲಿ ಹಲವರು ಪಾಲ್ಗೊಂಡಿದ್ದರು. ಯೋಗ ಮತ್ತು ಸಾಂಸ್ಕೃತಿಕ ಪರಂಪರೆಯ ಮೇಲಿನ ಅವರ ವಚನಬದ್ಧತೆಗೆ ಇದು ನಿಜವಾದ ಪುರಾವೆಯಾಗಿದೆ. ಪ್ರಧಾನಿ ಮೋದಿಯವರು, ಸೂರ್ಯ ನಮಸ್ಕಾರವನ್ನು ತಮ್ಮ ದೈನಂದಿನ ದಿನಚರಿಯ ಭಾಗವಾಗಿಸುವಂತೆ ಎಲ್ಲಾ ನಾಗರಿಕರಲ್ಲಿ ಮನವಿ ಮಾಡಿದರು.