ಮೌರ್ಯ ವಿರುದ್ಧ ದೂರು ದಾಖಲಿಸಲು ಶ್ರೀ. ನೀಲಕಂಠ ಸೇವಾ ಸಂಸ್ಥಾನದ ಬೇಡಿಕೆ !

ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ ಮೌರ್ಯ ಇವರು ಹಿಂದೂ ಧರ್ಮದ ಬಗ್ಗೆ ಖೇದಕರ ಹೇಳಿಕೆ ನೀಡಿದ ಪ್ರಕರಣ

ರಾಯಪುರ (ಛತ್ತೀಸ್ಗಡ) – ಹಿಂದೂ ಧರ್ಮದ ಕುರಿತು ಖೇದಕರ ಹೇಳಿಕೆ ನೀಡಿರುವ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ ಮೌರ್ಯ ವಿರುದ್ಧ ದೂರು ದಾಖಲಿಸಬೇಕು ಎಂದು ಶ್ರೀ ನೀಲಕಂಠ ಸೇವಾ ಸಂಸ್ಥಾನ ಆಗ್ರಹಿಸಿದೆ. ಶ್ರೀ ನೀಲಕಂಠ ಸೇವಾ ಸಂಸ್ಥಾನದ ಪದಾಧಿಕಾರಿ ರಾಯಪುರ ಉತ್ತರ ವಿಧಾನ ಸಭೆಯ ಶಾಸಕ ಶ್ರೀ. ಪುರಂದರ ಮಿಶ್ರಾ ಇವರಿಗೆ ಈ ಬೇಡಿಕೆಯ ವಿಷಯವಾಗಿ ಒಂದು ಮನವಿ ನೀಡಿದೆ. ಶ್ರೀ ನೀಲಕಂಠ ಸೇವಾ ಸಂಸ್ಥಾನದ ಸಂಸ್ಥಾಪಕ ಶ್ರೀ. ನೀಲಕಂಠ ತ್ರಿಪಾಠಿ ಇವರು, ಕಳೆದ ಕೆಲ ದಿನಗಳಿಂದ ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸ್ವಾಮಿ ಪ್ರಸಾದ ಮೌರ್ಯ ಇವರು ಹಿಂದೂ ಧರ್ಮದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡುತ್ತಿದ್ದಾರೆ. ಇತ್ತೀಚಿಗೆ ಅವರು ‘ಹಿಂದೂ ಧರ್ಮ ಒಂದು ಅಪಾಯ’ ಎಂದು ಖೇದರಕ ಹೇಳಿಕೆ ನೀಡಿದ್ದರು; ಆದರೆ ಅವರ ಮೇಲೆ ಇಲ್ಲಿಯವರೆಗೆ ಯಾವುದೇ ಕಾನೂನು ರೀತಿ ಕ್ರಮ ಕೈಗೊಳ್ಳಲಾಗಿಲ್ಲ. ಸ್ವಾಮಿ ಪ್ರಸಾದ ಮೌರ್ಯ ಅವರ ವಿರುದ್ಧ ತಕ್ಷಣ ದೂರು ದಾಖಲಿಸಿ ಅವರ ಮೇಲೆ ಯೋಗ್ಯ ಕ್ರಮ ಕೈಗೊಳ್ಳಬೇಕು ಎಂದು ಶ್ರೀ. ತ್ರಿಪಾಠಿ ಇವರು ಆಗ್ರಹಿಸಿದ್ದಾರೆ.

ಸಂಪಾದಕೀಯ ನಿಲುವು

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ಧರ್ಮದ ಮೇಲೆ ಕೀಳುಮಟ್ಟಕ್ಕೆ ಹೋಗಿ ಟೀಕಿಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಕ್ಕಾಗಿ ಕಠಿಣ ಕಾನೂನು ರೂಪಿಸುವುದು ಆವಶ್ಯಕ !