ಉತ್ತರ ಪ್ರದೇಶ ಸರಕಾರ ಕಟ್ಟಡ ಕಾರ್ಮಿಕರನ್ನು ಇಸ್ರೇಲ್‌ಗೆ ಕಳುಹಿಸಲಿದೆ !

  • ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ಪರಿಣಾಮ !

  • ತಿಂಗಳಿಗೆ 14 ಲಕ್ಷ ರೂಪಾಯಿ ವೇತನ ಹಾಗೂ 15 ಸಾವಿರ ಬೋನಸ್ !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶ ಸರಕಾರ ಕಟ್ಟಡ ಕಾರ್ಮಿಕರನ್ನು ಇಸ್ರೇಲ್‌ಗೆ ಕಳುಹಿಸಲು ಹೊರಟಿದೆ. ಪ್ರಸ್ತುತ, ಇಸ್ರೇಲ್‌ಗೆ ಅಂತಹ ಕೆಲಸಗಾರರ ಅವಶ್ಯಕತೆ ಹೆಚ್ಚಿರುವುದರಿಂದ, ಉತ್ತರ ಪ್ರದೇಶ ಸರಕಾರವು ಈ ಅವಕಾಶವನ್ನು ಬಳಸಿಕೊಳ್ಳಲು ಪ್ರಯತ್ನಿಸಿದೆ. ಇಸ್ರೇಲ್‌ನ ಕಟ್ಟಡ ಕಾರ್ಮಿಕರಿಗೆ ತಿಂಗಳಿಗೆ 14 ಲಕ್ಷ ರೂಪಾಯಿ ವೇತನ ಮತ್ತು ತಿಂಗಳಿಗೆ 15 ಸಾವಿರ ರೂಪಾಯಿ ಹೆಚ್ಚುವರಿ ಬೋನಸ್ ಸಿಗಲಿದೆ. ಈ ಮೊತ್ತವನ್ನು ಈ ಕಾರ್ಮಿಕರು ಕೆಲಸ ಮಾಡುವ ಕಂಪನಿಯ ಖಾತೆಗೆ ಜಮಾ ಮಾಡಲಾಗುವುದು ಮತ್ತು ಕಾರ್ಮಿಕರ ಕೆಲಸದ ಅವಧಿ ಮುಗಿದ ನಂತರ, ಸಂಪೂರ್ಣ ಮೊತ್ತವನ್ನು ಅವರಿಗೆ ವರ್ಗಾಯಿಸಲಾಗುತ್ತದೆ ಎಂದು ಹೇಳಲಾಗುತ್ತದೆ.

1. ಈ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರಕಾರದ ಕಾರ್ಮಿಕ ಇಲಾಖೆ ಜಾಹೀರಾತನ್ನು ಬಿಡುಗಡೆ ಮಾಡಿದೆ. ಇದರ ಅಡಿಯಲ್ಲಿ ಸರಕಾರವು ಮೇಸ್ತ್ರಿಗಳು, ಟೈಲರ್‌ಗಳು ಮತ್ತು ಇತರ ಕಟ್ಟಡ ಕಾರ್ಮಿಕರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಭಾರತ ಸರಕಾರದ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಿಷನ್ ಅಡಿಯಲ್ಲಿ, ಇಸ್ರೇಲ್‌ನಲ್ಲಿ ಸುರಕ್ಷಿತ ನಿರ್ಮಾಣ ಯೋಜನೆಯ ಸೈಟ್‌ಗಳಲ್ಲಿ ಉದ್ಯೋಗವನ್ನು ಒದಗಿಸಲಾಗುತ್ತಿದೆ.

2. ಇಸ್ರೇಲ್ ಮತ್ತು ಹಮಾಸ್ ನಡುವಿನ ಅಕ್ಟೋಬರ್ 7 ರ ಯುದ್ಧದ ನಂತರ ಇಸ್ರೇಲ್ ತನ್ನ ದೇಶದಲ್ಲಿ ಕೆಲಸ ಮಾಡುವುದನ್ನು ಪ್ಯಾಲೆಸ್ತೀನ್ ಕಾರ್ಮಿಕರನ್ನು ನಿಷೇಧಿಸಿದೆ. ಹಾಗಾಗಿ ಇಸ್ರೇಲ್‌ಗೆ ಪರ್ಯಾಯ ಕೆಲಸಗಾರರ ಅಗತ್ಯವಿದೆ. ಕಳೆದ ತಿಂಗಳಷ್ಟೇ ಇಸ್ರೇಲ್ ಈ ನಿಟ್ಟಿನಲ್ಲಿ ಭಾರತದಿಂದ ಕಾರ್ಮಿಕರನ್ನು ಕೋರಿದೆ ಎಂಬ ವರದಿಗಳು ಬಂದಿದ್ದವು. ಗಲ್ಫ್ ರಾಷ್ಟ್ರಗಳಲ್ಲಿ ಲಕ್ಷಾಂತರ ಭಾರತೀಯ ಕಾರ್ಮಿಕರು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವುದರಿಂದ ಅವರು ಈಗ ಇಸ್ರೇಲ್‌ಗೆ ಹೋಗುವ ಸಾಧ್ಯತೆ ಇದೆ.

3. ಈ ವರ್ಷದ ಮೇ ತಿಂಗಳಲ್ಲಿ ಭಾರತವು 42 ಸಾವಿರ ಕಾರ್ಮಿಕರನ್ನು ಇಸ್ರೇಲ್‌ಗೆ ಕಳುಹಿಸುವ ಒಪ್ಪಂದಕ್ಕೆ ಉಭಯದೇಶಗಳು ಸಹಿ ಹಾಕಿದ್ದವು. ಇವರಲ್ಲಿ 34 ಸಾವಿರ ಕಾರ್ಮಿಕರು ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದವರು. ಹಮಾಸ್ ವಿರುದ್ಧ ಯುದ್ಧ ಪ್ರಾರಂಭವಾದಾಗಿನಿಂದ ಇಸ್ರೇಲ್‌ನಲ್ಲಿ ನಿರ್ಮಾಣ ಕ್ಷೇತ್ರವು ಬಹುತೇಕ ಸ್ಥಗಿತಗೊಂಡಿದೆ.

ಹರಿಯಾಣದಲ್ಲಿಯೂ ಜಾಹೀರಾತು ಪ್ರಕಟಣೆ !

ಇಸ್ರೇಲ್‌ನಲ್ಲಿ 10 ಸಾವಿರ ಕಾರ್ಮಿಕರ ಅಗತ್ಯವಿದೆ ಎಂದು ಹರಿಯಾಣ ಸರಕಾರ ಡಿಸೆಂಬರ್ 15 ರಂದು ಇದೇ ರೀತಿಯ ಜಾಹೀರಾತನ್ನು ಬಿಡುಗಡೆ ಮಾಡಿತು. ಇದಕ್ಕೆ ವಿರೋಧ ಪಕ್ಷಗಳಿಂದಲೂ ವಿರೋಧ ವ್ಯಕ್ತವಾಗಿತ್ತು. “ನಿರ್ಮಾಣ ಕ್ಷೇತ್ರದಲ್ಲಿ ಅನುಭವಿ ಕೆಲಸಗಾರರು ಇಸ್ರೇಲ್‌ನಲ್ಲಿ ಒಂದುವರೆ ಲಕ್ಷ ಸಂಬಳವನ್ನು ಪಡೆಯುತ್ತಾರೆ ಮತ್ತು 63 ತಿಂಗಳಿಗಿಂತ ಹೆಚ್ಚಿನ ಒಪ್ಪಂದ ಇವುದಿಲ್ಲ” ಎಂದು ಜಾಹೀರಾತಿನಲ್ಲಿ ಹೇಳಿದೆ.

ನಿಯಮಗಳು ಮತ್ತು ಷರತ್ತುಗಳನ್ನು ಪೂರೈಸಬೇಕು !

ನಿರ್ಮಾಣ ಕಾರ್ಯಕ್ಕಾಗಿ ಇಸ್ರೇಲ್‌ಗೆ ಹೋಗುವ ಕಾರ್ಮಿಕರು ಕೆಲವು ಷರತ್ತುಗಳನ್ನು ಪೂರೈಸಬೇಕು. ಕನಿಷ್ಠ 1 ವರ್ಷದಿಂದ ಗರಿಷ್ಠ 5 ವರ್ಷಗಳವರೆಗೆ ಒಪ್ಪಂದವನ್ನು ಮಾಡಿಕೊಳ್ಳಬೇಕು. ಇಸ್ರೇಲ್‌ನಲ್ಲಿ ಕೆಲಸ ಮಾಡಲು ಬಯಸುವ ಕಾರ್ಮಿಕರು ಇಸ್ರೇಲ್‌ನಲ್ಲಿ ಕೆಲಸ ಮಾಡಿದ ಯಾವುದೇ ಸಂಬಂಧಿಕರನ್ನು ಹೊಂದಿರಬಾರದು. ಅರ್ಜಿದಾರರು 21 ರಿಂದ 45 ವರ್ಷ ವಯಸ್ಸಿನವರಾಗಿರಬೇಕು. ಅವರು ನಿರ್ಮಾಣ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷಗಳ ಕೆಲಸದ ಅನುಭವವನ್ನು ಹೊಂದಿರಬೇಕು. ಇದರೊಂದಿಗೆ ಭಾರತದಿಂದ ಇಸ್ರೇಲ್‌ಗೆ ಪ್ರಯಾಣಿಸಲು ಮತ್ತು ಅಲ್ಲಿಂದ ಹಿಂತಿರುಗಲು ಕಾರ್ಮಿಕರು ವೆಚ್ಚವನ್ನು ತಾವೇ ಭರಿಸಬೇಕು ಎಂದು ಕೆಲವು ಷರತ್ತುಗಳನ್ನು ಹಾಕಲಾಗಿದೆ.