ಪುಣೆಯಲ್ಲಿ ಬಾಂಗ್ಲಾದೇಶಿ ನುಸುಳುಕೋರರಿಂದ 604 ನಕಲಿ ಪಾಸ್‌ಪೋರ್ಟ್!

ಪುಣೆ – ಬಾಂಗ್ಲಾದೇಶಿ ನುಸುಳುಕೋರರು ಪುಣೆಯಲ್ಲಿ 604 ನಕಲಿ ಪಾಸ್‌ಪೋರ್ಟ್‌ಗಳನ್ನು ಪಡೆದಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಹಲವರನ್ನು ಬಂಧಿಸಲಾಗಿದೆ. ಕೆಲ ತಿಂಗಳ ಹಿಂದೆ ಪುಣೆ ನಗರ ಪ್ರದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶಿ ನುಸುಳುಕೋರರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದರು. ಬಾಂಗ್ಲಾದೇಶಿ ನುಸುಳುಕೋರರು ನಕಲಿ ದಾಖಲೆಗಳ ಆಧಾರದ ಮೇಲೆ 604 ಪಾಸ್‌ಪೋರ್ಟ್‌ಗಳನ್ನು ಪಡೆದಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಬಾಂಗ್ಲಾದೇಶಿ ಪ್ರಜೆಗಳ ನುಸುಳುವಿಕೆಗೆ ಸಂಬಂಧಿಸಿದಂತೆ ಹಡಪ್‌ಸರ್, ವಾನವಡಿ, ಭಾರತಿ ವಿದ್ಯಾಪೀಠ ಮತ್ತು ಫರಾಸಖಾನಾ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣದಲ್ಲಿ 29 ಬಾಂಗ್ಲಾದೇಶಿ ಒಳನುಸುಳುಕೋರರನ್ನು ಬಂಧಿಸಲಾಗಿದೆ.

ಕಾರ್ಯಾಚರಣೆಯ ನಂತರ, ಪೊಲೀಸರು ಬಾಂಗ್ಲಾದೇಶಿ ನುಸುಳುಕೋರರನ್ನು ವಿಚಾರಣೆಗೆ ಒಳಪಡಿಸಿದರು. ಆಗ 604 ಪಾಸ್‌ಪೋರ್ಟ್‌ಗಳನ್ನು ಬಾಂಗ್ಲಾದೇಶಿ ಪ್ರಜೆಗಳು ನಕಲಿ ದಾಖಲೆಗಳ ಆಧಾರದ ಮೇಲೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಆ ನಂತರ ಪೊಲೀಸ್ ಆಯುಕ್ತ ರಿತೇಶ್ ಕುಮಾರ್ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿದ್ದಾರೆ. (ನುಸುಳುಕೋರರು ಇಷ್ಟು ನಕಲಿ ಪಾಸ್‌ಪೋರ್ಟ್‌ಗಳನ್ನು ತಯಾರಿಸದೇ ಇದ್ದಿದ್ದರೆ ಪೊಲೀಸರು ಇಂತಹ ಕ್ರಮ ಕೈಗೊಳ್ಳುತ್ತಿರಲಿಲ್ಲ ! ಅಕ್ರಮ ನುಸುಳುವಿಕೆಯನ್ನು ನಿರ್ಲಕ್ಷಿಸುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ! – ಸಂಪಾದಕರು) ಸಹಾಯಕ ಪೊಲೀಸ್ ಆಯುಕ್ತ ರಮಾಕಾಂತ್ ಮಾನೆ ಮತ್ತು ಪಾಸ್‌ಪೋರ್ಟ್‌ನ ಪರಿಶೀಲನಾ ವಿಭಾಗದ ಹಿರಿಯ ಪೊಲೀಸ್ ನಿರೀಕ್ಷಕ ಡಿ.ಎಸ್. ಹಾಕೆ ಇವರು ಪಾಸ್‌ಪೋರ್ಟ್‌ಗಳನ್ನು ಪರಿಶೀಲಿಸುವ ಸಿಬ್ಬಂದಿಗೆ ಸೂಚನೆಗಳನ್ನು ನೀಡಿದ್ದಾರೆ.

ವೈಯಕ್ತಿಕ ವಿಚಾರಣೆಯ ಆದೇಶ !

ಪಾಸ್‌ಪೋರ್ಟ್‌ಗಳಿಗೆ ಅರ್ಜಿ ಸಲ್ಲಿಸುವ ನಾಗರಿಕರನ್ನು ವೈಯಕ್ತಿಕವಾಗಿ ತನಿಖೆ ಮಾಡಬೇಕು ಮತ್ತು ಅರ್ಜಿದಾರರ ನಿವಾಸದಲ್ಲಿ ವಿಚಾರಣೆ ನಡೆಸಬೇಕು. ಪೊಲೀಸ್ ಕಮಿಷನರ್ ರಿತೇಶ್ ಕುಮಾರ್ ಅವರು ಆ ಪ್ರದೇಶದ ನಿವಾಸಿಗಳ ನಿವಾಸದ ಬಗ್ಗೆ ವಿಚಾರಣೆ ನಡೆಸಬೇಕು ಎಂದು ಆದೇಶಿಸಿದ್ದಾರೆ.

ಪರಿಶೀಲನೆಯನ್ನು ಕಟ್ಟುನಿಟ್ಟಾಗಿ ಮಾಡಬೇಕು !

ಪೊಲೀಸ್ ಆಯುಕ್ತರು ತಮ್ಮ ಆದೇಶದಲ್ಲಿ, ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರ ಮತ್ತಿತರ ಅಗತ್ಯ ದಾಖಲೆಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು. ಅಕ್ರಮವಾಗಿ ನೆಲೆಸಿರುವ ವಿದೇಶಿಗರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

ಸಂಪಾದಕರ ನಿಲುವು

* ಬಾಂಗ್ಲಾದೇಶಿ ನುಸುಳುಕೋರರು ಇಷ್ಟೊಂದು ನಕಲಿ ಪಾಸ್‌ಪೋರ್ಟ್‌ಗಳನ್ನು ಪಡೆಯುವವರೆಗೂ ಪೊಲೀಸರು ನಿದ್ರಿಸುತ್ತಿದ್ದರೇ ? ಪೊಲೀಸರಿಗೆ ನಾಚಿಕೆಗೇಡು !

* ಭಾರತೀಯ ಪೌರತ್ವದ ಯಾವುದೇ ಪುರಾವೆಗಳಿಲ್ಲದೆ ನುಸುಳುವವರಿಗೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ ನೀಡಲಾಗುತ್ತಿದ್ದು, ವ್ಯವಸ್ಥೆಯ ಬಗ್ಗೆಯೇ ಪ್ರಶ್ನಾರ್ಥಕ ಚಿಹ್ನೆಗಳು ಮೂಡಿವೆ. ಭಾರತದಲ್ಲಿನ ಅನೇಕ ರಾಜಕೀಯ ಪಕ್ಷಗಳು ತಮ್ಮ ಮತವನ್ನು ಹೆಚ್ಚಿಸಿಕೊಳ್ಳಲು ನುಸುಳುಕೋರರ ಪುನರ್ವಸತಿಯನ್ನು ಉತ್ತೇಜಿಸುತ್ತಿವೆ. ಅಕ್ರಮವಾಗಿ ದೇಶ ಪ್ರವೇಶಿಸುವವರಿಗೆ ಸಹಾಯ ಮಾಡುವ ಕೆಲಸ ಭಾರತ ಬಿಟ್ಟು ಬೇರೆ ಯಾವುದೇ ದೇಶದಲ್ಲಿ ಆಗುತ್ತಿಲ್ಲ ! ಇದು ಸರಕಾರಿ ವ್ಯವಸ್ಥೆ ಮತ್ತು ಸಂಬಂಧಿತ ರಾಜಕೀಯ ಪಕ್ಷಗಳಿಗೆ ನಾಚಿಕೆಗೇಡಿನ ಸಂಗತಿ !