ಹಿಂದೂಗಳನ್ನು ವಿಲನ್‌ಆಗಿ ತೋರಿಸಿದಾಗ ಯಾರೂ ಟೀಕಿಸಲಿಲ್ಲ; ಆದರೆ ಮುಸ್ಲಿಂ ವಿಲನ್ ಗಳನ್ನು ತೋರಿಸಿದಾಗ ಮಾತ್ರ ಟೀಕೆ ! – ‘ಅನಿಮಲ್’ ಚಲನಚಿತ್ರದ ನಿರ್ಮಾಪಕ ಪ್ರಣಯ್ ರೆಡ್ಡಿ ವಾಂಗಾ

‘ಅನಿಮಲ್’ ಚಲನಚಿತ್ರದ ನಿರ್ಮಾಪಕ ಪ್ರಣಯ್ ರೆಡ್ಡಿ ವಾಂಗಾ ಇವರ ಪ್ರತ್ಯುತ್ತರ !

ಮುಂಬಯಿ – ‘ಅನಿಮಲ್’ ಹಿಂದಿ ಚಿತ್ರ ನಾನಾ ಕಾರಣಗಳಿಂದ ಟೀಕೆಗೆ ಗುರಿಯಾಗುತ್ತಿದೆ. ಚಿತ್ರವು ಸಾಕಷ್ಟು ಘೋರ, ಹಿಂಸೆ ಮತ್ತು ಅಶ್ಲೀಲತೆಯನ್ನು ಒಳಗೊಂಡಿದೆ. ಇದರಿಂದ ಈ ಟೀಕೆಗಳು ನಡೆಯುತ್ತಿದ್ದರೂ ಮುಸ್ಲಿಮರನ್ನು ಖಳನಾಯಕರನ್ನಾಗಿ ತೋರಿಸಿದ್ದರಿಂದ ಟೀಕೆಯೂ ವ್ಯಕ್ತವಾಗುತ್ತಿದೆ. ಚಲನ ಚಿತ್ರದ ಸಹ ನಿರ್ಮಾಪಕ ಮತ್ತು ನಿರ್ದೇಶಕ ಸಂದೀಪ್ ರೆಡ್ಡಿ ವಾಂಗಾ ಅವರ ಸಹೋದರ ಪ್ರಣಯ್ ರೆಡ್ಡಿ ವಾಂಗಾ ಇವರು ಸಂದರ್ಶನವೊಂದರಲ್ಲಿ ಈ ಟೀಕೆಗೆ ಪ್ರತಿಕ್ರಿಯಿಸಿದ್ದಾರೆ. ಅವರು, ನಾವು 3 ಹೆಂಡತಿಯರು ಮತ್ತು 8 ಮಕ್ಕಳಿರುವ ಖಳನಾಯಕನನ್ನು ತೋರಿಸಿದ್ದೇವೆ. ಅವರು ಅಲ್ಪಸಂಖ್ಯಾತ ಧರ್ಮಕ್ಕೆ ಸೇರಿದವರಾಗಿರುವುದರಿಂದ ಜನರು ಅವರನ್ನು ಟೀಕಿಸಲು ಪ್ರಾರಂಭಿಸಿದರು. ಕಳೆದ 20 ರಿಂದ 30 ವರ್ಷಗಳಿಂದ ಹಣೆಯ ಮೇಲೆ ತಿಲಕ ಇರುವ ಹಿಂದೂ ಖಳನಾಯಕನನ್ನು ಸಿನಿಮಾದಲ್ಲಿ ತೋರಿಸಿದಾಗ ಯಾರೂ ಅದನ್ನು ಪ್ರಶ್ನಿಸಿರಲಿಲ್ಲ. ಮುಸ್ಲಿಮರನ್ನು ‘ಅಲ್ಪಸಂಖ್ಯಾತರು’ ಎಂದು ಗುರುತಿಸಲಾಗಿದೆ. ಈ ಕಾರಣಕ್ಕಾಗಿಯೇ ಕೆಲವರು ಚಿತ್ರಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಈ ಚಿತ್ರದಲ್ಲಿ ನಟ ಬಾಬಿ ಡಿಯೋಲ್ ಮುಸ್ಲಿಂ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅವನಿಗೆ 3 ಹೆಂಡತಿಯರು ಮತ್ತು 8 ಮಕ್ಕಳನ್ನು ತೋರಿಸಲಾಗಿದೆ. ಇದಕ್ಕಾಗಿ ಟೀಕೆಯಾಗಿತ್ತು ಎಂದು ಹೇಳಿದರು.