ಪುಣೆ – ರಾಜಸ್ಥಾನದಿಂದ ಪರಾರಿಯಾದ ನಂತರ, ಪುಣೆ ನಗರದಲ್ಲಿ ಜಿಹಾದಿ ಭಯೋತ್ಪಾದಕ ಸಂಘಟನೆಯಾದ ಐಸಿಸ್‌ನ ಜಾಲವನ್ನು ಸಕ್ರಿಯಗೊಳಿಸಲು ಕೆಲವು ಭಯೋತ್ಪಾದಕರು ಕೆಲಸ ಮಾಡುತ್ತಿದ್ದರು. ಪುಣೆ ಪೊಲೀಸರು ಜುಲೈ 18 ರಂದು ಇಬ್ಬರು ಉಗ್ರರನ್ನು ಬಂಧಿಸಿದ್ದರು. ‘ಐಸಿಸ್ ಮಾಡ್ಯೂಲ್’ ಬಗ್ಗೆ ಮಾಹಿತಿ ಪಡೆದ ನಂತರ, ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (‘ಎನ್.ಐ.ಎ.’) ಗೆ ಹಸ್ತಾಂತರಿಸಲಾಯಿತು. ಈ ಪ್ರಕರಣದಲ್ಲಿ ಎನ್.ಐ.ಎ. 15ಕ್ಕೂ ಹೆಚ್ಚು ಜನರನ್ನು ಬಂಧಿಸಿದೆ. ಇದರಲ್ಲಿ ಠಾಣೆ, ಮುಂಬಯಿ ಮತ್ತು ಪುಣೆ ನಗರಗಳ ಭಯೋತ್ಪಾದಕರು ಸೇರಿದ್ದಾರೆ. ಅವರ ತನಿಖೆಯಿಂದ ರೈಲ್ವೆಯ ಉತ್ತರ ವಿಭಾಗದ ಗುಮಾಸ್ತರೊಬ್ಬನು ಭಯೋತ್ಪಾದಕರಿಗೆ ರೈಲ್ವೆ ಹಣವನ್ನು ನೀಡಿರುವುದು ಬೆಳಕಿಗೆ ಬಂದಿದೆ. ಈಗ ಎನ್.ಐ.ಎ. ಆ ರೈಲ್ವೇ ಗುಮಾಸ್ತನನ್ನು ಹುಡುಕುತ್ತಿದ್ದಾರೆ.
(ಸೌಜನ್ಯ – India Today)
ಹೀಗೆ ಪ್ರಕರಣ ಬಹಿರಂಗಗೊಂಡಿತು !
ಈ ಗುಮಾಸ್ತ ರೈಲ್ವೆ ಇಲಾಖೆಗೆ ಹಲವು ನಕಲಿ ವೈದ್ಯಕೀಯ ಬಿಲ್‌ಗಳನ್ನು ಸಲ್ಲಿಸಿದ್ದ. ಆ ಮೂಲಕ ಪಡೆದ ಹಣವನ್ನು ಭಯೋತ್ಪಾದಕರಿಗೆ ನೀಡಿದ್ದಾನೆ. ಈ ಪ್ರಕರಣದಲ್ಲಿ ದೆಹಲಿ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಳ್ಳಲಿದ್ದಾರೆ. ದೆಹಲಿ ಪೊಲೀಸ್‌ನ ವಿಶೇಷ ವಿಭಾಗ, ಎನ್.ಐ.ಎ.ಯು 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದ ಶಹನವಾಜ್ ಸೇರಿದಂತೆ 3 ಭಯೋತ್ಪಾದಕರನ್ನು ದೆಹಲಿಯಿಂದ ಬಂಧಿಸಿದ್ದು, ಈ ಭಯೋತ್ಪಾದಕರ ವಿಚಾರಣೆಯಿಂದ ಹಲವು ರಹಸ್ಯಗಳು ಹೊರಬಿದ್ದಿವೆ. ಗುಮಾಸ್ತರು ಭಯೋತ್ಪಾದಕರಿಗೆ ಹಣ ಒದಗಿಸಿದ್ದರು ಎಂದು ಮಾಹಿತಿ ನೀಡಲಾಗಿದೆ. ಈ ಗುಮಾಸ್ತನ ಬಂಧನದ ನಂತರ ಹೆಚ್ಚಿನ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.