ಸಾಧನೆಯನ್ನು ಮಾಡಿ ಉನ್ನತಿಯನ್ನು ಮಾಡಿಕೊಂಡವರ ಕೈಬೆರಳುಗಳಿಂದ ತೇಜತತ್ತ್ವ ಪ್ರಕ್ಷೇಪಿಸುವುದನ್ನು ತೋರಿಸುವ ಪ್ರಯೋಗ

ಸದ್ಗುರು ಡಾ. ಮುಕುಲ ಗಾಡಗೀಳ

‘ಸಾಧಕರ ಅಥವಾ ಜಿಜ್ಞಾಸುಗಳ ಸತ್ಸಂಗದಲ್ಲಿ ‘ಸಾಧನೆಯನ್ನು ಮಾಡಿ ಉನ್ನತಿ ಮಾಡಿಕೊಂಡವರ ಕೈಬೆರಳುಗಳಿಂದ ತೇಜತತ್ತ್ವ ಹೇಗೆ ಪ್ರಕ್ಷೇಪಿಸುತ್ತದೆ ?’, ಇದರ ಪ್ರಯೋಗವನ್ನು ತೋರಿಸಲಾಗುತ್ತದೆ’ ಇದರಲ್ಲಿ ಮುಂದಿನ ೩ ಪ್ರಯೋಗಗಳನ್ನು ತೋರಿಸಲಾಗುತ್ತದೆ. ೨೫/೧೫ನೆ ಸಂಚಿಕೆಯಲ್ಲಿ ನಾವು ೧ ಮತ್ತು ೨ ನೇ ಪ್ರಯೋಗಗಳ ಬಗ್ಗೆ ತಿಳಿದುಕೊಂಡಿದ್ದೆವು. ಈ ವಾರ ೩ ನೇ ಪ್ರಯೋಗದ ಬಗ್ಗೆ ತಿಳಿದುಕೊಳ್ಳೋಣ

೩. ಬೆರಳುಗಳಿಂದ ಪ್ರಕಾಶ ಪ್ರಕ್ಷೇಪಿಸುವುದು ಕಾಣಿಸುವುದು

೩ ಅ. ಪ್ರಯೋಗದ ತಯಾರಿ : ಪ್ರಯೋಗಕ್ಕಾಗಿ ಕುಳಿತ ವ್ಯಕ್ತಿಗಳ ಮೊದಲ ಸಾಲಿನಿಂದ ಸುಮಾರು ೩ ಮೀಟರ್‌ ದೂರದಲ್ಲಿ ಕಪ್ಪು ಬಣ್ಣದ ಪರದೆಯನ್ನು ಇರಿಸಲಾಯಿತು. ಪ್ರಯೋಗ ತೋರಿಸಲು ಉನ್ನತ ವ್ಯಕ್ತಿಯು ಆ ಕಪ್ಪು ಪರದೆಯಿಂದ ಸುಮಾರು ೩ ಮೀಟರ್‌ ದೂರ, ಪರದೆಯ ಕಡೆಗೆ ಮುಖ ಮಾಡಿ ಮತ್ತು ಪರದೆಯ ಮಧ್ಯಭಾಗದ ಎದುರು ಕುರ್ಚಿ ಯಲ್ಲಿ ಕುಳಿತರು. ಕೋಣೆಯಲ್ಲಿ ಮಂದ ಪ್ರಕಾಶವನ್ನು ಇಡಲಾಯಿತು. ಪ್ರಯೋಗವನ್ನು ತೋರಿಸುವ ಉನ್ನತ ವ್ಯಕ್ತಿಯು ಕುಳಿತ ಸ್ಥಳದಿಂದ ತಮ್ಮ ಬಲಗೈಯ ಬೆರಳುಗಳನ್ನು ನೇರವಾಗಿಟ್ಟು ಕಪ್ಪು ಪರದೆಯ ಮಧ್ಯಭಾಗದೆದುರು ಹಿಡಿದು ನಿಧಾನವಾಗಿ ಗೋಲಾಕಾರದಲ್ಲಿ ತಿರುಗಿಸುವುದಾಗಿ ಹೇಳಿದರು.

ಆ ಸಮಯದಲ್ಲಿ ಪ್ರಯೋಗ ನೋಡುವವರಿಗೆ ಪರದೆಯ ಮಧ್ಯಭಾಗದಲ್ಲಿ ಕಾಣುವ ಕಪ್ಪು ಬಣ್ಣವನ್ನು ಪರದೆಯ ಇತರ ಭಾಗಗಳ ಜೊತೆಗೆ ಹೋಲಿಸಿ ನೋಡಲು ಹೇಳಲಾಯಿತು.

೩ ಆ. ಪ್ರತ್ಯಕ್ಷ ಪ್ರಯೋಗ : ಪ್ರಯೋಗವನ್ನು ತೋರಿಸುವ ಉನ್ನತ ವ್ಯಕ್ತಿಯು ಕೋಣೆಯಲ್ಲಿ ಮಂದಪ್ರಕಾಶವಿರುವಾಗ ಕಪ್ಪು ಪರದೆಯ ಮಧ್ಯಭಾಗದೆದುರು ತಮ್ಮ ಕೈ ಹಿಡಿದು ಅದನ್ನು ಗೋಲಾಕಾರವಾಗಿ ತಿರುಗಿಸಿದಾಗ, ಪ್ರಯೋಗ ನೋಡುವವರಿಗೆ ಪರದೆಯ ಮಧ್ಯಭಾಗದ ಕಪ್ಪು ಬಣ್ಣ ಕಡಿಮೆಯಾಗಿ, ಬೂದುಬಣ್ಣಕ್ಕೆ ತಿರುಗಿರುವುದು ಅಥವಾ ಪ್ರಕಾಶಮಾನವಾಗಿದೆ, ಎಂದು ಕಾಣಿಸಿತು. ಆ ಸಮಯದಲ್ಲಿ ಪರದೆಯ ಇತರ ಭಾಗದಲ್ಲಿ ಮೊದಲಿನಂತೆ ಕಪ್ಪು ಬಣ್ಣವೇ ಇದೆಯೆಂದು ಪ್ರಯೋಗ ನೋಡುವವರು ಹೇಳಿದರು.

೩ ಇ. ಕೋಣೆಯಲ್ಲಿ ಮಂದ ಪ್ರಕಾಶ ಇರುವಾಗ ಕಪ್ಪು ಪರದೆಯ ಮಧ್ಯಭಾಗದ ಎದುರಿಗೆ ಕೈ ಮಾಡಿದಾಗ ಅಲ್ಲಿನ ಕಪ್ಪುಬಣ್ಣ ಕಡಿಮೆಯಾಗಿ ಆ ಭಾಗಕ್ಕೆ ಬೆಳಕು ಹೆಚ್ಚಾಗುವುದರ ಹಿಂದಿನ ಶಾಸ್ತ್ರ : ಪ್ರಯೋಗವನ್ನು ತೋರಿಸುವ ಉನ್ನತ ವ್ಯಕ್ತಿಯ ಬೆರಳುಗಳಿಂದ ತೇಜತತ್ತ್ವರೂಪಿ ಪ್ರಕಾಶವು ಸತತವಾಗಿ ಹೊರ ಬೀಳುತ್ತಿರುತ್ತದೆ. ಅವರು ಮಂದ ಪ್ರಕಾಶದಲ್ಲಿ ಕಪ್ಪು ಪರದೆಯ ಮಧ್ಯಭಾಗದೆದುರು ಕೈಹಿಡಿದು ಅದನ್ನು ಗೋಲಾಕಾರದಲ್ಲಿ ತಿರುಗಿಸಿದಾಗ ಅವರ ಬೆರಳುಗಳಿಂದ ಪ್ರಕ್ಷೇಪಿಸಿದ ಪ್ರಕಾಶ ಪರದೆಯ ಅಷ್ಟೇ ಭಾಗದ ಮೇಲೆ ಬಿದ್ದಿತು. ಆದುದರಿಂದ ಕಪ್ಪುಪರದೆಯ ಅಷ್ಟೇ ಮಧ್ಯಭಾಗ ಆ ಸಮಯದಲ್ಲಿ ಸ್ವಲ್ಪ ಪ್ರಕಾಶಮಯವಾದಂತೆ ಅಥವಾ ಅದರ ಕಪ್ಪುಬಣ್ಣ ಕಡಿಮೆಯಾಗಿ ಅದು ಬೂದುಬಣ್ಣಕ್ಕೆ ತಿರುಗಿದಂತೆ ಕಾಣಿಸಿತು. ಆಗ ಕೇವಲ ಕಪ್ಪುಪರದೆಯ ಮಧ್ಯಭಾಗದೆದುರು ಕೈ ತಿರುಗಿಸಿದುರಿಂದ ಪರದೆಯ ಅಷ್ಟೇ ಭಾಗದ ಮೇಲೆ ಅತಿ ತಿಳಿ ಪ್ರಕಾಶ ಕಾಣಿಸಿತು ಮತ್ತು ಉಳಿದ ಭಾಗವು ಹಾಗೆಯೇ ಕಪ್ಪು ಉಳಿಯಿತು.

೪. ಮೇಲಿನ ೩ ಪ್ರಯೋಗಗಳ ಮಂಡಣೆಗೆ ಸಂಬಂಧಿಸಿದ ಅಂಶಗಳು

ಅ. ಮೇಲಿನ ೩ ಪ್ರಯೋಗಗಳು ಬೆರಳುಗಳಿಂದ ಪ್ರಕ್ಷೇಪಿಸುವ ತೇಜತತ್ತ್ವಕ್ಕೆ ಸಂಬಂಧಿಸಿದ್ದವು
ಆ. ‘ನೀರಿನಲ್ಲಿ ಬೆರಳುಗಳನ್ನು ಮುಳುಗಿಸಿದಾಗ ನೀರಿಗೆ ಗುಲಾಬಿ ಬಣ್ಣ ಬರುವುದು’ ಈ ಮೊದಲ ಪ್ರಯೋಗದಲ್ಲಿ ತೇಜತತ್ತ್ವ ನೀರಿನಲ್ಲಿ ಪ್ರಕ್ಷೇಪಣೆಯಾದುದರಿಂದ ಅದು ಬಣ್ಣದ ರೂಪದಲ್ಲಿ ಕಣ್ಣುಗಳಿಗೆ ಸಹಜವಾಗಿ ಕಾಣಿಸಿತು; ಏಕೆಂದರೆ ಆಗ ‘ನೀರು’ ಮಾಧ್ಯಮವಾಗಿತ್ತು ಮತ್ತು ಅದು ನಮಗೆ ಕಣ್ಣುಗಳಿಗೆ ಕಾಣಿಸುತ್ತದೆ. ‘ಬೆರಳುಗಳ ತುದಿಗಳಿಂದ ಹೊಗೆ ಪ್ರಕ್ಷೇಪಿಸುವುದು ಕಾಣಿಸುವುದು’ ಮತ್ತು ‘ಕೈಯ ಬೆರಳುಗಳಿಂದ ಪ್ರಕಾಶ ಪ್ರಕ್ಷೇಪಿಸುವುದು ಕಾಣಿಸುವುದು’ ಇದು ಅನುಕ್ರಮವಾಗಿ ಎರಡನೇ ಮತ್ತು ಮೂರನೇ ಪ್ರಯೋಗದಲ್ಲಿ ತೇಜತತ್ತ್ವವು ಕಾಣಿಸುವುದರಲ್ಲಿ ‘ಗಾಳಿ’ ಇದು ಮಾಧ್ಯಮವಾಗಿತುತ್.’ ಗಾಳಿಯು ನಮ್ಮ ಕಣ್ಣುಗಳಿಗೆ ಕಾಣಿಸುವುದಿಲ್ಲ. ಆದುದರಿಂದ ಎರಡನೇ ಮತ್ತು ಮೂರನೇ ಪ್ರಯೋಗವನ್ನು ಕಣ್ಣುಗಳಿಂದ ನೋಡಲು ಸ್ವಲ್ಪ ಕಠಿಣವಾಗಿತ್ತು ಮತ್ತು ಅದು ಹೆಚ್ಚೆಚ್ಚು ಕಠಿಣವಾಗುತ್ತಾ ಹೋಯಿತು.
ಇ. ಮೊದಲ ಪ್ರಯೋಗದಲ್ಲಿ ಬೆರಳುಗಳಿಂದ ಪ್ರಕ್ಷೇಪಿಸುವ ತೇಜತತ್ತ್ವವು ಬಣ್ಣದ ರೂಪದಲ್ಲಿ ಕಾಣಿಸಿತು. ಎರಡನೇ ಪ್ರಯೋಗದಲ್ಲಿ ಅದು ಹೊಗೆಯ ರೂಪದಲ್ಲಿ ಮತ್ತು ಮೂರನೇ ಪ್ರಯೋಗದಲ್ಲಿ ಅದು ಪ್ರಕಾಶದ ರೂಪದಲ್ಲಿ ಕಾಣಿಸಿತು. ಈ ಮೂರು ಪ್ರಯೋಗಗಳಲ್ಲಿ ನಾವು ಸ್ಥೂಲದಿಂದ ಸೂಕ್ಷ್ಮದೆಡೆಗೆ ಮತ್ತು ಸೂಕ್ಷ್ಮದಿಂದ ಇನ್ನೂ ಸೂಕ್ಷ್ಮದ ಕಡೆಗೆ ಹೋದೆವು. ಆದುದರಿಂದ ಮೂರನೇ ಪ್ರಯೋಗದಲ್ಲಿ ಬೆರಳುಗಳಿಂದ ಪ್ರಕ್ಷೇಪಿಸಲಾದ ಪ್ರಕಾಶ ಕಾಣಿಸಲು ಹೆಚ್ಚು ಕಠಿಣವಾಗಿದೆ.

೫. ಬೆರಳುಗಳಿಂದ ಪ್ರಕ್ಷೇಪಿಸುವ ಪ್ರಕಾಶ ದೂರದ ವರೆಗೆ ಹೋಗುವುದು ಕಾಣಿಸುವುದು

೫ ಅ. ಪ್ರಯೋಗದ ಸಿದ್ಧತೆ : ಈ ಪ್ರಯೋಗದಲ್ಲಿ ಹೊರಗೆ ಕತ್ತಲೆ ಇರುವಾಗ ಪ್ರಯೋಗ ನೋಡುವವರನ್ನು ರಾಮನಾಥಿ ಆಶ್ರಮದ ಐದನೇ ಮಹಡಿಯ ಮೇಲ್ಛಾವಣಿಯ ಮೇಲೆ (ಟೆರೇಸ್‌ನ ಮೇಲೆ) ಕರೆದೊಯ್ಯಲಾಯಿತು. ಅಲ್ಲಿಂದ ೨೦-೨೫ ಮೀಟರ್‌ ದೂರದಲ್ಲಿ ಆಶ್ರಮದ ಇನ್ನೊಂದು ಕಟ್ಟಡದ ಹಂಚಿನ ಚಪ್ಪರವಿದೆ. ಹಾಗೆಯೇ ಆಶ್ರಮದೆದುರು ಸುಮಾರು ಅರ್ಧ ಕಿಲೋಮೀಟರ್‌ ದೂರದಲ್ಲಿ, ಹಾಗೆಯೇ ಇನ್ನೂ ಮುಂದೆ ೨-೩ ಕಿಲೋಮೀಟರ್‌ ದೂರದಲ್ಲಿ ಗುಡ್ಡಗಳಿವೆ. ಪ್ರಯೋಗ ನೋಡುವವರಿಗೆ ಪ್ರಯೋಗವನ್ನು ತೋರಿಸುವ ಉನ್ನತ ವ್ಯಕ್ತಿಯು ತಮ್ಮ ಕೈಯನ್ನು ಮೊದಲು ಹತ್ತಿರದ ಹಂಚಿನ ಚಪ್ಪರದ ಕಡೆಗೆ, ಅನಂತರ ಹತ್ತಿರದ ಗುಡ್ಡದ ಕಡೆಗೆ ಮತ್ತು ಕೊನೆಗೆ ದೂರವಿರುವ ಗುಡ್ಡದ ಕಡೆಗೆ ಮಾಡುವುದಾಗಿ ಹೇಳಿದರು. ಆ ಸಮಯದಲ್ಲಿ ಪ್ರಯೋಗ ನೋಡುವವರಿಗೆ ‘ಆಯಾ ಸ್ಥಳಗಳ ಕತ್ತಲಿನಲ್ಲಿ ಏನು ಬದಲಾವಣೆಯಾಗುತ್ತದೆ ?’, ಎಂಬುದನ್ನು ನೋಡಲು ಹೇಳಲಾಯಿತು.

೫ ಆ. ಪ್ರತ್ಯಕ್ಷ ಪ್ರಯೋಗ : ಪ್ರಯೋಗವನ್ನು ತೋರಿಸುವ ಉನ್ನತ ವ್ಯಕ್ತಿಯು ಮೊದಲು ಹತ್ತಿರದ ಹಂಚಿನ ಚಪ್ಪರದ ಕಡೆಗೆ ಕೈಮಾಡಿ ಆ ಚಪ್ಪರದ ಅಡ್ಡ ಭಾಗದೆದುರು ಎಡ ಗಡೆಯಿಂದ ಬಲಗಡೆಗೆ ತಮ್ಮ ಕೈಯನ್ನು ಒಯ್ದರು. ಆಗ ಪ್ರಯೋಗವನ್ನು ನೋಡುವವರಿಗೆ ಚಪ್ಪರದ ಮೇಲೆ ಕತ್ತಲು ಸ್ವಲ್ಪ ಕಡಿಮೆಯಾಗಿರುವುದು ಕಾಣಿಸಿತು, ಅದೇ ರೀತಿ ಚಪ್ಪರದ ಮೇಲೆ ಬೆಳಕು ಅಲುಗಾಡುವುದು ಕಾಣಿಸಿತು. ಉನ್ನತ ವ್ಯಕ್ತಿಯು ಹತ್ತಿರದ ಗುಡ್ಡದ ಭಾಗದೆದುರು ಕೈ ಮಾಡಿ ಅಡ್ಡ ಉದ್ದ ಅಲುಗಾಡಿಸಿದಾಗ ಅಲ್ಲಿಯೂ ಹೊಗೆಯಂತಹ ಬಿಳಿ ಪ್ರಕಾಶ ಕಾಣಿಸಿದ ಬಗ್ಗೆ ಪ್ರಯೋಗವನ್ನು ನೋಡುವವರು ಹೇಳಿದರು. ಎದುರಿಗಿನ ದೂರದಲ್ಲಿರುವ ಗುಡ್ಡದ ಅಡ್ಡ ಅಂಚು ಕತ್ತಲಲ್ಲಿ ಕಾಣಿಸುತ್ತಿತ್ತು. ಉನ್ನತ ವ್ಯಕ್ತಿಯು ಆ ದಿಕ್ಕಿಗೆ ಕೈ ಮಾಡಿದಾಗ ಆ ಅಂಚು ಪ್ರಯೋಗ ನೋಡುವವರಿಗೆ ಸ್ಪಷ್ಟವಾಗಿ ಕಾಣಿಸತೊಡಗಿತು. ಕೆಲವು ಜನರಿಗೆ, ‘ಆ ಗುಡ್ಡದ ಹಿಂದಿನಿಂದ ಯಾರೋ ಬೆಳಕನ್ನು ಹರಿಸಿದ್ದಾರೆ’, ಎಂದರಿವಾಯಿತು. ನಂತರ ಆ ದೂರದಲ್ಲಿರುವ ಗುಡ್ಡಕ್ಕೆ ಹೊಂದಿದಂತೆ ಆಕಾಶದ ದಿಶೆಗೆ ಉನ್ನತ ವ್ಯಕ್ತಿಯು ತಮ್ಮ ಕೈಯನ್ನು ಹಿಡಿದರು. ಆಗ ಪ್ರಯೋಗ ನೋಡುವವರಿಗೆ ಆಕಾಶ ಮತ್ತು ಮೋಡಗಳು ಸ್ವಲ್ಪ ಹೊಳೆದಂತೆ ಕಾಣಿಸಿತು .

೫ ಇ. ರಾತ್ರಿಯ ಕತ್ತಲಲ್ಲಿ ಬೆರಳುಗಳಿಂದ ಪ್ರಕ್ಷೇಪಿಸುವ ಪ್ರಕಾಶ ದೂರದವರೆಗೆ ತಲುಪುವುದರ ಹಿಂದಿನ ಶಾಸ್ತ್ರ : ದೇಹದಲ್ಲಿನ ತೇಜತತ್ತ್ವದ ಬಣ್ಣ, ಹೊಗೆ ಇವುಗಳಂತೆ ಪ್ರಕಾಶದ ರೂಪದಲ್ಲಿಯೂ ಪ್ರಕ್ಷೇಪಿಸುತ್ತಿರುತ್ತದೆ. ಪ್ರಕಾಶಕ್ಕೆ ವೇಗ ಇರುತ್ತದೆ. ಆದುದರಿಂದ ಅದು ಒಂದು ಕ್ಷಣದಲ್ಲಿ ದೂರದವರೆಗೆ ಹೋಗಬಹುದು; ಆದುದರಿಂದ ಈ ಪ್ರಯೋಗದಲ್ಲಿ ಯಾವ ರೀತಿ ಹತ್ತಿರದ ಹಂಚುಗಳ ಮೇಲೆ ಬೆರಳುಗಳಿಂದ ಬೆಳಕು ಬೀಳುವುದು ಕಾಣಿಸಿತೋ, ಅದೇ ರೀತಿ ಅದು ದೂರದ ಗುಡ್ಡಗಳ ವರೆಗಷ್ಟೇ ಅಲ್ಲ, ಆಕಾಶದ ಮೇಲೆಯೂ ಬೀಳುವುದು ಕಾಣಿಸಿತು. ಇದರಿಂದ ಈ ಪ್ರಕಾಶಕ್ಕೆ ಸ್ಥೂಲದಲ್ಲಿನ ಪ್ರಕಾಶದಂತೆ ಮಿತಿ ಇಲ್ಲ ಎಂಬುದು ಗಮನಕ್ಕೆ ಬರುತ್ತದೆ. ಅದೇ ರೀತಿ ಬೆರಳುಗಳಿಂದ ದೂರಕ್ಕೆ ತಲುಪಿದ ಪ್ರಕಾಶ ಮುಂದೆ ಹಿಡಿದ ಕೈಯನ್ನು ಹಿಂದೆ ತೆಗೆದುಕೊಂಡರೂ ೩-೪ ನಿಮಿಷಗಳ ಕಾಲ ಉಳಿಯುತ್ತದೆ, ಎಂಬುದನ್ನು ಪ್ರಯೋಗ ನೋಡುವವರು ಹೇಳಿದರು.

೬. ಸಾರಾಂಶ

‘ಸಾಧನೆಯನ್ನು ಮಾಡಿ ಉನ್ನತಿಯನ್ನು ಮಾಡಿ ಕೊಂಡರೆ ದೇಹವು ತೇಜತತ್ತ್ವದಿಂದ ಹೇಗೆ ಚೈತನ್ಯಮಯ ವಾಗುತ್ತದೆ ಮತ್ತು ಇತರರಿಗೆ ಅನುಭೂತಿ ನೀಡುತ್ತದೆ’ ಎಂಬುದು ಈ ಪ್ರಯೋಗದಿಂದ ಗಮನಕ್ಕೆ ಬರುತ್ತದೆ. ಹಾಗೆಯೇ ಈ ಸೂಕ್ಷ್ಮದ ಅನುಭೂತಿಗಳನ್ನು ಪಡೆಯಲೂ ಸಾಧನೆಯನ್ನೇ ಮಾಡಬೇಕಾಗುತ್ತದೆ. ಈಶ್ವರನು ಸೂಕ್ಷ್ಮಾತೀ ಸೂಕ್ಷ್ಮನಾಗಿದ್ದಾನೆ. ಅವನನ್ನು ತಿಳಿದುಕೊಳ್ಳಬೇಕಾದರೆ, ನಾವು ಸಾಧನೆಯನ್ನು ಎಷ್ಟು ಹೆಚ್ಚಿಸಬೇಕು ! ಈಶ್ವರಪ್ರಾಪ್ತಿಯು ಸಾಧನೆಯ ಧ್ಯೇಯವಾಗಿದೆ. ಈಶ್ವರನೊಂದಿಗೆ ಏಕರೂಪ ವಾಗಬೇಕಾದರೆ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಾಡಿ ಶುದ್ದ ಮತ್ತು ಪವಿತ್ರ ಆಗಬೇಕು, ಹಾಗೆಯೇ ತೇಜತತ್ತ್ವದಿಂದ ವಾಯುತತ್ತ್ವದ ಕಡೆಗೆ ಮತ್ತು ಅದಕ್ಕೂ ಮುಂದೆ ಆಕಾಶತತ್ತ್ವದ ಕಡೆಗೆ ಹೋಗಬೇಕು. ಇದಕ್ಕಾಗಿ ವ್ಯಷ್ಟಿ ಸಾಧನೆಯೊಂದಿಗೆ ಸಮಷ್ಟಿ ಸಾಧನೆಯನ್ನೂ ಮಾಡಬೇಕು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಂದ ಈ ಎರಡೂ ಸಾಧನೆಗಳಾಗಲು ಮಾರ್ಗದರ್ಶನ ಮಾಡುತ್ತಾರೆ. ಆದುದರಿಂದಲೇ ಸಾಧಕರು ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಳ್ಳುತ್ತಿದ್ದಾರೆ.’

– (ಸದ್ಗುರು) ಡಾ. ಮುಕುಲ ಗಾಡಗೀಳ ‘ಪಿಎಚ್‌.ಡಿ.’ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ ಗೋವಾ. (೬.೧೨.೨೦೨೨) (ಮುಕ್ತಾಯ)

‘ಸಂತರ ದೇಹದಲ್ಲಿನ ಬುದ್ಧಿಗೆ ಮೀರಿದ ಬದಲಾವಣೆಗಳ ಬಗ್ಗೆ ಸಂಶೋಧನೆಯನ್ನು ಮಾಡಿ ಅವುಗಳ ಕಾರ್ಯಕಾರಣಭಾವವನ್ನು ಕಂಡು ಹಿಡಿಯಲು ಸಾಧಕರು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಸಾಧನೆಯಲ್ಲಿ ಉನ್ನತಿ ಮಾಡಿಕೊಂಡವರ ಕೈ ಬೆರಳುಗಳಿಂದ ತೇಜತತ್ತ್ವ ಪ್ರಕ್ಷೇಪಿಸುವುದರ ಹಿಂದಿನ ಕಾರಣವೇನು ? ಇದಕ್ಕೆ ಸಂಬಂಧಿಸಿದಂತೆ ತಜ್ಞರು, ಅಧ್ಯಯನಕಾರರು, ಈ ವಿಷಯದಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದ ವಿದ್ಯಾರ್ಥಿಗಳು ಮತ್ತು ವೈಜ್ಞಾನಿಕ ದೃಷ್ಟಿಯಿಂದ ಸಂಶೋಧನೆ ಮಾಡುವವರ ಸಹಾಯ ನಮಗೆ ಲಭಿಸಿದರೆ ನಾವು ಕೃತಜ್ಞರಾಗಿರುವೆವು.’

ಸಂಪರ್ಕ : ಶ್ರೀ. ಆಶಿಷ ಸಾವಂತ
ವಿ-ಅಂಚೆ : ಮ್ಚಿವ್.ಡಿಎಸೆಚಿಡಿಛಿಹ್2014@ಗ್ಮ್ಚೀಟ.ಛಿಒಮ್