Triple Talaq : ತ್ರಿವಳಿ ತಲಾಖ್‌ ವಿರೋಧಿ ಕಾನೂನು ರೂಪಿಸಿ ೫ ವರ್ಷಗಳಾದರೂ ಘಟನೆಗಳಲ್ಲಿ ಕಾಣದ ಇಳಿಕೆ !

೫ ವರ್ಷಗಳಲ್ಲಿ, ೧೩ ಲಕ್ಷದ ೭ ಸಾವಿರಕ್ಕೂ ಹೆಚ್ಚು ಮುಸಲ್ಮಾನ ಮಹಿಳೆಯರಿಗೆ ತ್ರಿವಳಿ ತಲಾಕ್‌

ನವ ದೆಹಲಿ – ಕೇಂದ್ರ ಸರಕಾರವು ಮುಸಲ್ಮಾನ ಮಹಿಳೆಯರಿಗಾಗಿರುವ ‘ತ್ರಿವಳಿ ತಲಾಕ್’ (ಮೂರು ಬಾರಿ ‘ತಲಾಕ್’ ಎಂದು ಹೇಳುವ ಮೂಲಕ ವಿಚ್ಛೇದನ) ಅನ್ನು ಕಾನೂನು ಮೂಲಕ ರದ್ದುಗೊಳಿಸಿದೆ. ಇದು ಈಗ ೫ ವರ್ಷ ಪೂರ್ಣಗೊಂಡಿದೆ; ಆದರೆ ಇನ್ನೂ ತ್ರಿವಳಿ ತಲಾಕ್‌ ಪ್ರಕರಣಗಳು ಕಡಿಮೆಯಾಗಿಲ್ಲ. ಕೇಂದ್ರ ಕಾನೂನು ಸಚಿವಾಲಯದ ಅಂಕಿಅಂಶಗಳ ಪ್ರಕಾರ, ೨೦೨೩ ರಲ್ಲಿ ೧ ಲಕ್ಷದ ೫೭ ಸಾವಿರದ ೭೨೫ ಮುಸಲ್ಮಾನ ಮಹಿಳೆಯರಿಗೆ ತ್ರಿವಳಿ ತಲಾಕ್‌ ನೀಡಲಾಗಿದೆ. ಇವರಲ್ಲಿ ಹೆಚ್ಚಿನ ವರು ಬಡಮಹಿಳೆಯರಾಗಿದ್ದಾರೆ. ಸೆಪ್ಟೆಂಬರ್‌ ೧೯, ೨೦೧೮ ರಂದು ಕಾನೂನು ಜಾರಿಗೆ ಬಂದ ನಂತರ, ೧೩ ಲಕ್ಷದ ೭ ಸಾವಿರಕ್ಕೂ ಹೆಚ್ಚು ತ್ರಿವಳಿ ತಲಾಕ್‌ ಪ್ರಕರಣಗಳು ನಡೆದಿವೆ. ೨೦೧೯ ರಲ್ಲಿ ೨ ಲಕ್ಷ ೬೯ ಸಾವಿರ, ೨೦೨೦ ರಲ್ಲಿ ೯೫ ಸಾವಿರ, ೨೦೨೧ ರಲ್ಲಿ ೫ ಲಕ್ಷ ೪೧ ಸಾವಿರ ಮತ್ತು ೨೦೨೨ ರಲ್ಲಿ ೨ ಲಕ್ಷ ೪೫ ಸಾವಿರ ಘಟನೆಗಳು ನಡೆದಿವೆ. ಈ ಪ್ರಕರಣಗಳಲ್ಲಿ ಈ ಮಹಿಳೆಯರಿಗೆ ವಿವಿಧ ಸರಕಾರಿ ಪ್ರಾಧಿಕರಣಗಳ ಮೂಲಕ ಕಾನೂನು ನೆರವು ನೀಡಲಾಗಿದೆ.

ಸಂಪಾದಕೀಯ ನಿಲುವು

ಮುಸಲ್ಮಾನರ ವಿರುದ್ಧ ಎಷ್ಟೇ ಕಠಿಣ ಕಾನೂನುಗಳನ್ನು ಮಾಡಿದರೂ, ಅವರು ತಮ್ಮ ಧರ್ಮವನ್ನು ಅನುಸರಿಸುತ್ತಾರೆ ಮತ್ತು ಭಾರತೀಯ ಕಾನೂನುಗಳನ್ನು ರಾಜಾರೋಷವಾಗಿ ಉಲ್ಲಂಘಿಸಿ ಅಪರಾಧಗಳನ್ನು ಮಾಡುತ್ತಲೇ ಇರುತ್ತಾರೆ. ಮುಂದೆ ಸಮಾನ ನಾಗರಿಕ ಕಾನೂನು, ಜನಸಂಖ್ಯಾ ನಿಯಂತ್ರಣ ಕಾನೂನು ಇತ್ಯಾದಿ ಕಾನೂನುಗಳು ಜಾರಿಯಾದರೂ ಅದನ್ನು ಮುಸಲ್ಮಾನರು ಎಷ್ಟು ಪಾಲಿಸುತ್ತಾರೆ ಎಂಬುದು ಪ್ರಶ್ನೆ ! ಈ ಸ್ಥಿತಿಯು ಹಿಂದೂ ರಾಷ್ಟ್ರವನ್ನು ಅನಿವಾರ್ಯವಾಗಿಸುತ್ತದೆ.