ದ್ವಾರಕಾ ಹತ್ತಿರದ ಸಮುದ್ರದಲ್ಲಿ ಮುಳುಗಿರುವ ಶ್ರೀ ಕೃಷ್ಣನ ದ್ವಾರಕಾನಗರ ನೋಡುವುದಕ್ಕಾಗಿ ಗುಜರಾತ ಸರಕಾರದಿಂದ ಜಲಾಂತರ್ಗಾಮಿ ಸೇವೆ !

೩೦೦ ಅಡಿ ಕೆಳಗೆ ಹೋಗಿ ದರ್ಶನ ಪಡೆಯಬಹುದು !

ಕರ್ಣಾವತಿ (ಗುಜರಾತ) – ಗುಜರಾತ ಸರಕಾರ ದ್ವಾರಕಾದಿಂದ ಕೆಲವು ಕಿಲೋಮೀಟರ್ ಅಂತರದಲ್ಲಿ ಸಮುದ್ರದಲ್ಲಿ ಮುಳುಗಿರುವ ಭಗವಾನ್ ಶ್ರೀ ಕೃಷ್ಣನ ದ್ವಾರಕಾನಗರಿಯ ಅವಶೇಷಗಳನ್ನು ನೋಡಲು ಜಲಾಂತರ್ಗಾಮಿ ನಡೆಸಲಿದೆ. ಈ ಜಲಾಂತರ್ಗಾಮಿ ೩೫ ಟನ್ ತೂಕದ ಆಗಿದ್ದು, ಇದರಲ್ಲಿ ಒಂದು ಸಮಯದಲ್ಲಿ ೩೦ ಜನರು ಕುಳಿತುಕೊಳ್ಳಬಹುದು. ‘ಮಾಝಗಾವ ಡಾಕ್ ಶಿಪಯಾರ್ಡ್’ ಈ ಭಾರತ ಸರಕಾರದ ಕಂಪನಿಯ ಜೊತೆಗೆ ರಾಜ್ಯ ಸರಕಾರದ ಒಪ್ಪಂದ ಕರಾರು ಮಾಡಿಕೊಂಡಿದೆ. ಜನವರಿಯಲ್ಲಿ ನಡೆಯುವ ವ್ಯಾಪಾರದ ಸಂದರ್ಭದಲ್ಲಿ ಪರಿಷತ್ತಿನಲ್ಲಿ ಇದರ ಘೋಷಣೆ ಮಾಡಲಾಗುವುದು.

ರಾಜ್ಯದ ಪ್ರವಾಸೋದ್ಯಮ ಇಲಾಖೆಯ ಮುಖ್ಯ ಸಚಿವ ಹರಿತ ಶುಕ್ಲಾ ಇವರು ನೀಡಿರುವ ಮಾಹಿತಿಯ ಪ್ರಕಾರ ಇದು ಸ್ವದೇಶಿ ಜಲಾಂತರ್ಗಾಮಿ ಮಾಝಾಗಾವ ಡಾಕ್ ಮೂಲಕ ನಡೆಸಲಾಗುವುದು. ಇದರ ಪ್ರಾರಂಭ ಮುಂದಿನ ವರ್ಷ ಜನ್ಮಾಷ್ಠಮಿ ಅಥವಾ ದೀಪಾವಳಿಯಿಂದ ಆಗುವುದು. ಈ ಜಲಾಂತರ್ಗಾಮಿ ಸಮುದ್ರದಲ್ಲಿ ೩೦೦ ಅಡಿ ಕೆಳಗೆ ಹೋಗುವುದು. ಈ ಪ್ರಯಾಣಕ್ಕೆ ಎರಡರಿಂದ ಎರಡುವರೆ ಗಂಟೆ ಸಮಯ ಬೇಕಾಗುವುದು. ಇದರ ಬಾಡಿಗೆ ಎಷ್ಟು ಇರುವುದು ? ಇದು ಇನ್ನೂ ಸ್ಪಷ್ಟವಾಗಿಲ್ಲ; ಆದರೆ ಇದಕ್ಕಾಗಿ ಸರಕಾರ ಅನುದಾನ ಅಥವಾ ಇತರ ಸವಲತ್ತು ನೀಡಬಹುದು ಎಂದು ಹೇಳಿದರು.