‘ನಾನು ದೇಶದ್ರೋಹಿಯೋ ಅಥವಾ ದೇಶಭಕ್ತನೋ ?’ ಇದು ಚುನಾವಣಾ ಕ್ಷೇತ್ರದ ಜನ ಚುನಾವಣೆಯಲ್ಲಿ ನಿರ್ಧರಿಸುವರು ! – ಬಿಜೆಪಿ ಸಂಸದ ಪ್ರತಾಪ್ ಸಿಂಹ

ಸಂಸತ್ತಿನೊಳಗೆ ನುಸುಳಿದವರಿಗೆ ಪಾಸ್ ನೀಡಿದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಇವರ ಹೇಳಿಕೆ !

ನವದೆಹಲಿ – ‘ನಾನು ದೇಶದ್ರೋಹಿಯೋ ಅಥವಾ ದೇಶಭಕ್ತನೋ ?’ಇದರ ಬಗ್ಗೆ 2024 ರ ಲೋಕಸಭಾ ಚುನಾವಣೆಯಲ್ಲಿ ನನ್ನ ಕ್ಷೇತ್ರದ ಜನರು ನಿರ್ಧರಿಸುತ್ತಾರೆ ಎಂದು ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಡಿಸೆಂಬರ್ 13 ರಂದು ಸಂಸತ್ತಿನ ಚಳಿಗಾಲದ ಅಧಿವೇಶನದ ವೇಳೆ ಯುವಕರು ಲೋಕಸಭೆಗೆ ಪ್ರವೇಶಿಸಿ ಗ್ಯಾಲರಿಯಿಂದ ಜಿಗಿದು ಬಣ್ಣದ ಹೊಗೆಯನ್ನು ಹೊರಹಾಕಿದರು. ಪ್ರತಾಪ್ ಸಿಂಹ ಅವರ ಶಿಫಾರಸ್ಸಿನಿಂದ ಇಬ್ಬರೂ ಸಂಸತ್ ಪ್ರವೇಶಿಸಲು ಪಾಸ್ ಪಡೆದಿದ್ದರು. ಇದರಿಂದಾಗಿ ಸಂಸದ ಸಿಂಹ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಅದನ್ನು ಆಧರಿಸಿ ಸಿಂಹ ಇವರು ಮೇಲಿನ ಹೇಳಿಕೆ ನೀಡಿದ್ದಾರೆ.

ಕೆಲವು ದಿನಗಳ ಹಿಂದೆ ಪ್ರತಾಪ್ ಸಿಂಹ ಅವರು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ, ‘ಒಳನುಗ್ಗಿದ ಇಬ್ಬರಿಗೂ ಏಕೆ ಪಾಸ್ ನೀಡಿದರು ಎಂಬುದನ್ನು ವಿವರಿಸಿದರು. ‘ಒಳನುಗ್ಗಿದ ಡಿ. ಮನೋರಂಜನ್ ಅವರ ತಂದೆ ನನ್ನ ಕ್ಷೇತ್ರದಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರು ಸಂಸತ್ತನ್ನು ನೋಡಬೇಕೆಂದು ಪಾಸ್ ಕೇಳಿದ್ದರು. ಅವರು ನನ್ನ ಕ್ಷೇತ್ರದವರೇ ಆಗಿದ್ದರಿಂದ ಅವರಿಗೆ ಪಾಸ್ ನೀಡಿದ್ದೆ. ಜೊತೆಗೆ ಈ ಯುವಕರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ’ ಎಂದು ಸಿಂಹ ಇವರು ಹೇಳಿದ್ದಾರೆ.