ಕಾಮಿಯಾ ಜಾನಿ ಗೋಮಾಂಸ ಸೇವನೆ ಮಾಡುತ್ತಾರೆ ಮತ್ತು ಅದಕ್ಕೆ ಪ್ರೋತ್ಸಾಹ ನೀಡುತ್ತಾರೆ ಎಂದು ಆರೋಪಿಸುತ್ತಾ ಬಂಧನಕ್ಕೆ ಒತ್ತಾಯ !

ಯು ಟ್ಯೂಬ್ ಚಾನಲ್ ನಡೆಸುವ ಕಾಮಿಯಾ ಜಾನಿ ಇವರು ಪುರಿ ಜಗನ್ನಾಥ ದೇವಸ್ಥಾನದಲ್ಲಿ ದರ್ಶನ ಪಡೆದರು

ಭುವನೇಶ್ವರ (ಓಡಿಸಾ) – ಯು ಟ್ಯೂಬ್ ನಲ್ಲಿ ಸಕ್ರಿಯ ಇರುವ ಕಾಮಿಯಾ ಜಾನಿ ಇವರು ಪುರಿ ಜಗನ್ನಾಥ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದರು. ಈ ಸಂದರ್ಭದಲ್ಲಿನ ಒಂದು ವಿಡಿಯೋ ಜಾನಿ ಇವರು ಸ್ವಂತ ‘ಕಲಿ ಟೇಲ್ಸ್’ ಈ ಯೂ ಟ್ಯೂಬ್ ಚಾನಲ್ ನಲ್ಲಿ ಪ್ರಸಾರ ಮಾಡಿದ್ದಾರೆ. ಇದರಲ್ಲಿ ಅವರು ಮತ್ತು ಬಿಜು ಜನತಾದಳ ನಾಯಕ ವಿ.ಕೆ. ಪಾಂಡಿಯನ ದೇವಸ್ಥಾನದಲ್ಲಿ ಮಹಾಪ್ರಸಾದ ಪಡೆಯುವುದು ಕಾಣುತ್ತಿದೆ. ಭಾಜಪವು ಕಾಮಿಯಾ ಜಾನಿ ಇವರ ದೇವಸ್ಥಾನ ಪ್ರವೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಭಾಜಪ, ಕಾಮಿಯ ಜಾನಿ ಗೋಮಾಂಸದ ಪ್ರಚಾರ ಮಾಡಿದ್ದರು. ಆಕೆಯ ದೇವಸ್ಥಾನ ದರ್ಶನವು ಕೋಟ್ಯಾಂತರ ಹಿಂದುಗಳ ಭಾವನೆಗೆ ನೋವುಂಟು ಆಗಿದೆ. ಆಕೆಯನ್ನು ಬಂಧಿಸಬೇಕು. ಕಾಮಿಯಾ ಇವರು ಈ ಹಿಂದೆ ಒಂದು ವಿಡಿಯೋ ಪ್ರಸಾರ ಮಾಡಿ ಅದರಲ್ಲಿ ಗೋಮಾಂಸಕ್ಕೆ ಪ್ರೋತ್ಸಾಹದ ಬಗ್ಗೆ ಮಾತನಾಡಿದ್ದರು.

ಓಡಿಸಾದಲ್ಲಿನ ಭಾಜಪದ ಕಾರ್ಯದರ್ಶಿ ಜತಿನ ಮೊಹಂತಿ ಇವರು, ಗೋಮಾಂಸದ ಪ್ರಚಾರ ಮಾಡುವವರರಿಗೆ ದೇವಸ್ಥಾನ ಪ್ರವೇಶಕ್ಕೆ ನಿಷೇಧವಿದೆ, ಆದರೂ ಕಾಮಿಯಾ ಜಾನಿ ಮತ್ತು ಪಾಂಡಿಯನ ಇವರಿಗೆ ಪ್ರವೇಶ ನೀಡಲಾಗಿದೆ. ಅವರು ಮಹಾಪ್ರಸಾದ ಕೂಡ ಸ್ವೀಕರಿಸಿದ್ದಾರೆ. ದೇವಸ್ಥಾನದಲ್ಲಿ ಕ್ಯಾಮೆರಾ ತೆಗೆದುಕೊಂಡು ಹೋಗಲು ನಿಷೇಧವಿದೆ; ಆದರೆ ಕಾಮಿಯಾ ಚಿತ್ರೀಕರಣ ಕೂಡ ಮಾಡಿದ್ದಾರೆ. ಕೋಟ್ಯಾಂತರ ಹಿಂದುಗಳ ಭಾವನೆ ನೋಯಿಸಿರುವುದರಿಂದ ಆಕೆಯನ್ನು ಬಂಧಿಸಬೇಕು. ಆಕೆಯನ್ನು ಬಂಧಿಸದಿದ್ದರೆ ನಾವು ನ್ಯಾಯಾಲಯಕ್ಕೆ ಮೊರೆ ಹೋಗುವೇವು ಎಂದು ಹೇಳಿದರು.

ಭಾಜಪ ಸುಳ್ಳು ಸುದ್ದಿ ಪಸರಿಸುತ್ತಿದೆ ! – ಬಿಜು ಜನತಾದಳ

ಬಿಜು ಜನತಾದಳದ ಸಂಸದ ಮಾನಸ ಮಂಗರಾಜ ಇವರು ಸಾಮಾಜಿಕ ಜಾಲತಾಣದಲ್ಲಿ, ಕಾಮಿಯಾ ಇವರು ಚಾರಧಾಮಗೆ ಕೂಡ ಭೇಟಿ ನೀಡಿದ್ದಾರೆ. ಅವರು ರಾಮಲಲ್ಲನ ದರ್ಶನ ಕೂಡ ಪಡೆದಿದ್ದಾರೆ. ಸಂಸದ ಮಂಗರಾಜ ಇವರು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ ಇವರಿಗೆ ಪ್ರಶ್ನಿಸುತ್ತಾ, ನಿಮಗೆ ಏನು ಅಡಚಣೆ ಇದೆ? ನೀವು ಸುಳ್ಳು ಸುದ್ದಿ ಏಕೆ ಪಸರಿಸುತ್ತಿರ ? ಓಡಿಸಾದ ಜನರನ್ನು ಏಕೆ ಅವಮಾನಿಸುತ್ತಿರ ? ಎಂದು ಕೇಳಿದ್ದಾರೆ.

ನಾನು ಎಂದೂ ಗೋಮಾಂಸ ಸೇವಿಸಿಲ್ಲ ! – ಕಾಮಿಯಾ ಜಾನಿ ಇವರ ದಾವೆ

ಕಾಮಿಯಾ ಜಾನಿ ಇವರು ಇನ್ಸ್ಟಾಗ್ರಾಂನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಅವರು, ಭಾರತೀಯನಾಗಿರುವುದರಿಂದ ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಜಗತ್ತಿನ ಮುಂದೆ ಕೊಂಡೊಯ್ಯುವುದು ನನ್ನ ಧ್ಯೇಯವಾಗಿದೆ. ನಾನು ಭಾರತದಲ್ಲಿನ ಎಲ್ಲಾ ಜ್ಯೋತಿರ್ಲಿಂಗ ಮತ್ತು ಚಾರ ಧಾಮಕ್ಕೆ ಭೇಟಿ ನೀಡಿದ್ದೇನೆ. ನಾನು ಗೋಮಾಂಸ ಸೇವಿಸುವುದಿಲ್ಲ ಮತ್ತು ಗೋಮಾಂಸ ಎಂದು ಸೆವಿಸಿಲ್ಲ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಒಡಿಸಾ ಸರಕಾರವು ಈ ಆರೋಪದ ವಿಚಾರಣೆ ನಡೆಸಿ ಸತ್ಯ ಹೊರ ತರಬೇಕು,ಆರೋಪದಲ್ಲಿ ಸತ್ಯ ಇದ್ದರೆ, ಕ್ರಮ ಕೈಗೊಳ್ಳಬೇಕು !