ಈಗ ಭಾರತ ಒಂದು ಕೆನ್ನೆಗೆ ಬಾರಿಸಿದ ನಂತರ ಇನ್ನೊಂದು ಕೆನ್ನೆ ತೋರಿಸುವಂತೆ ಉಳಿದಿಲ್ಲ ! – ಡಾ. ಎಸ್. ಜೈಶಂಕರ್

ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಇವರ ನೇರ ನುಡಿ !

ನವ ದೆಹಲಿ – ಒಂದು ಕೆನ್ನೆಗೆ ಬಾರಿಸಿದ ನಂತರ ಇನ್ನೊಂದು ಕೆನ್ನೆ ತೋರಿಸುವ ಮನಸ್ಥಿತಿಯಲ್ಲಿ ಭಾರತ ಇಲ್ಲ, ಬದಲಿಗೆ ಅದಕ್ಕೆ ತಕ್ಕಂತೆ ಪ್ರತ್ಯುತ್ತರ ನೀಡಲು ಸಿದ್ಧವಾಗಿದೆ ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಕಾರ್ಯಕ್ರಮವೊಂದರಲ್ಲಿ ಹೇಳಿದರು. ಡಾ. ಎಸ್. ಜೈಶಂಕರ ಇವರು, ಇಂದು ದೇಶದಲ್ಲಿ ಬದಲಾವಣೆಯಾಗಿದೆ. ಅದರಲ್ಲೂ ಮುಂಬಯಿನಲ್ಲಿ 26/11 ದಾಳಿಯ ನಂತರ ಅದರ ಮನಸ್ಥಿತಿಯೇ ಬದಲಾಗಿದೆ. ‘ಒಂದು ಕೆನ್ನೆಗೆ ಬಾರಿಸಿ ಇನ್ನೊಂದು ಕೆನ್ನೆ ತೋರಿಸುವುದು ಒಳ್ಳೆಯ ತಂತ್ರ’ ಎಂದು ಕೆಲವರು ಹೇಳುತ್ತಾರೆ, ಇನ್ನು ಮುಂದೆ ದೇಶ ಆ ರೀತಿ ಯೋಚಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಭಾರತದ ಗಡಿಯಲ್ಲಿ ಯಾರಾದರೂ ಭಯೋತ್ಪಾದಕ ಚಟುವಟಿಕೆ ನಡೆಸುತ್ತಿದ್ದರೆ ಅದಕ್ಕೆ ಉತ್ತರ ನೀಡಬೇಕು, ಅದಕ್ಕಾಗಿ ಹಣ ಖರ್ಚು ಮಾಡಲೇ ಬೇಕಾಗುತ್ತದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ಈ ರೀತಿಯ ಬದಲಾವಣೆ ಸಣ್ಣದಲ್ಲ, ಹೇಳಲೇಬೇಕು! ಭಾರತವು ಅಂತಹ ನೀತಿಯನ್ನು ಮೊದಲಿನಿಂದಲೇ ಅವಲಂಬಿಸಿದ್ದರೆ, ಭಾರತ ಇಂದು ಮಹಾಶಕ್ತಿ ಆಗುತ್ತಿತ್ತು !