ಗುಜರಾತ್‌ನ ಸಮುದ್ರದಲ್ಲಿ ವಿದೇಶಿ ವ್ಯಾಪಾರಿ ನೌಕೆಯ ಮೇಲೆ ಡ್ರೋನ್ ಮೂಲಕ ದಾಳಿ : ಜೀವಹಾನಿ ನಡೆದಿಲ್ಲ

ಇರಾನ್‌ದಿಂದ ದಾಳಿ ಬಗ್ಗೆ ಅಮೇರಿಕಾದ ದಾವೆ !

ನವ ದೆಹಲಿ – ಗುಜರಾತದ ತೀರದ ಹತ್ತಿರ ‘ಎಂವಿ ಕೆಮ್ ಪ್ಲುಟೊ’ ಈ ವ್ಯಾಪಾರಿ ಹಡಗಿನ ಮೇಲೆ ಡಿಸೆಂಬರ್ ೨೩ ರಂದು ಡ್ರೋನ್ ಮೂಲಕ ದಾಳಿ ನಡೆಸಲಾಗಿದೆ. ಹಡಗಿನ ಕೆಲವು ಸ್ಥಳಗಳಲ್ಲಿ ಬೆಂಕಿ ಅನಾಹುತ ನಡೆದಿದೆ. ಈ ದಾಳಿಯಲ್ಲಿ ಯಾವುದೇ ಜೀವ ಹಾನಿ ಆಗಿಲ್ಲ. ಆದರೆ ಹಡಗಿಗೆ ಹಾನಿಯಾಗಿದೆ. ಈ ಹಡಗಿನಲ್ಲಿ ೨೦ ಭಾರತೀಯ ಕಾರ್ಮಿಕರು ಇರುವುದರಿಂದ ಭಾರತೀಯ ನೌಕಾದಳದವರು ಅವರ ಸುರಕ್ಷೆಗಾಗಿ ತಮ್ಮ ಹಡಗನ್ನು ಕಳುಹಿಸಿದೆ. ಇನ್ನೊಂದು ಕಡೆ ಈ ದಾಳಿ ಇರಾನ್‌ದಿಂದ ನಡೆದಿದೆ ಎಂದು ಅಮೇರಿಕಾದ ರಕ್ಷಣಾ ದಳದಿಂದ ದಾವೆ ಮಾಡಲಾಗಿದೆ. ಈ ನೌಕೆಯ ಮೇಲೆ ಲೈಬೇರಿಯಾದ ಧ್ವಜ ಇತ್ತು ಮತ್ತು ಈ ನೌಕೆ ಇಸ್ರೈಲ್‌ ಗೆ ಸಂಬಂಧಪಟ್ಟಿದ್ದಾಗಿತ್ತು.

(ಸೌಜನ್ಯ – The Economic Times)

ದಾಳಿಗೊಳಗಾದ ಹಡಗು ಡಿಸೆಂಬರ್ ೯ ರಂದು ಕಚ್ಚಾ ತೈಲ ಹೊತ್ತಿಕೊಂಡು ಸೌದಿ ಅರೇಬಿಯಾದಿಂದ ಕರ್ನಾಟಕದಲ್ಲಿನ ಮಂಗಳೂರು ಬಂದರದ ಕಡೆಗೆ ಹೊರಟಿತ್ತು. ಡಿಸೆಂಬರ್ ೨೫ ರ ವರೆಗೆ ಈ ಹಡಗು ಮಂಗಳೂರು ತಲುಪುವುದು ಅಪೇಕ್ಷಿತವಾಗಿತ್ತು; ಆದರೆ ಗುಜರಾತದಲ್ಲಿನ ಪೊರಬಂದರ ತೀರದಿಂದ ೨೧೭ ಸಮುದ್ರ ಮೈಲ್ಲಿ ಅಂತರದಲ್ಲಿ ಸಮುದ್ರದಲ್ಲಿ ಅದರ ಮೇಲೆ ದಾಳಿ ನಡೆಯಿತು.