ರಾಜ್ಯದಲ್ಲಿ ಒಂದೇ ವರ್ಷದಲ್ಲಿ ೨೮ ಸಾವಿರದ ೬೫೭ ಅಪ್ರಾಪ್ತ ವಯಸ್ಸಿನ ಹುಡುಗಿಯರು ಗರ್ಭಿಣಿ !

ಬೆಂಗಳೂರು – ರಾಜ್ಯದಲ್ಲಿ ಈಗ ಭ್ರೂಣ ಪತ್ತೆ, ಭ್ರೂಣ ಹತ್ಯೆ ಇಂತಹ ಅನೇಕ ಕಾನೂನ ಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ಬೆನ್ನಲ್ಲೇ ಬಾಲ್ಯ ವಿವಾಹ ಮತ್ತು ಅಪ್ರಾಪ್ತ ವಯಸ್ಸಿನ ಹುಡುಗಿಯರು ಗರ್ಭಿಣಿಯಾಗುವ ಪ್ರಕರಣಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತಿದೆ. ರಾಜ್ಯ ಸರಕಾರವು ಬಾಲ್ಯ ವಿವಾಹ ತಡೆಯುವುದಕ್ಕಾಗಿ ಕಾನೂನು ರೂಪಿಸಿ ಅದರ ಕಟ್ಟುನೀಟ್ಟಾದ ಪಾಲನೆ ಮಾಡುವುದನ್ನು ನಿಶ್ಚಯಿಸಿದೆ. ಆದರೂ ಕೂಡ ರಾಜ್ಯದಲ್ಲಿ ಒಂದು ವರ್ಷದಲ್ಲಿ ೨೮ ಸಾವಿರದ ೬೫೭ ಅಪ್ರಾಪ್ತ ವಯಸ್ಸಿನ ಹುಡುಗಿಯರು ಗರ್ಭಿಣಿಯಾಗಿರುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ವಿಭಾಗದಿಂದ ಮಾಹಿತಿ ಬಹಿರಂಗವಾಗಿದೆ.

ಯಾದಗಿರಿ ಜಿಲ್ಲೆಯಲ್ಲಿ ೯೨೧ ಅಪ್ರಾಪ್ತ ವಯಸ್ಸಿನ ಹುಡುಗಿಯರು ಗರ್ಭಿಣಿಯಾಗಿದ್ದು ಸುರಪುರ ತಾಲೂಕಿನಲ್ಲಿ ೩೦೦ ಕ್ಕಿಂತಲೂ ಹೆಚ್ಚಿನ ಅಪ್ರಾಪ್ತ ವಯಸ್ಸಿನ ಹುಡುಗಿಯರು ಗರ್ಭಿಣಿಯಾಗಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಲಾಗುತ್ತಿಲ್ಲ, ಇದೇ ಇದರಿಂದ ಸ್ಪಷ್ಟವಾಗುತ್ತದೆ. ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಮಕ್ಕಳ ರಕ್ಷಣಾ ಇಲಾಖೆಯವರ ಕಣ್ಣು ತಪ್ಪಿಸಿ ಬಾಲ್ಯ ವಿವಾಹ ನಡೆಯುತ್ತಿರುವುದು ಬಹಿರಂಗವಾಗಿದೆ.

ಸಂಪಾದಕೀಯ ನಿಲುವು

ಸಂಪೂರ್ಣ ದೇಶದಲ್ಲಿ ಬಾಲ್ಯ ವಿವಾಹದ ಮೇಲೆ ನಿಷೇಧ ಇರುವಾಗ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಬಾಲ್ಯ ವಿವಾಹ ನಡೆಯುವವರೆಗೆ ಸರಕಾರ ಮತ್ತು ಪೊಲೀಸರು ನಿದ್ರಿಸುತ್ತಿದ್ದರೆ ?