|
ನವ ದೆಹಲಿ – ದೇಶದ ಒಟ್ಟು ಸಾಲದ ಪ್ರಮಾಣ 205 ಲಕ್ಷ ಕೋಟಿ ದಾಟಿದೆ. ಇದರಿಂದಾಗಿ ಭಾರತದ ಜನಸಂಖ್ಯೆಯನ್ನು 142 ಕೋಟಿ ಎಂದು ಪರಿಗಣಿಸಿದರೆ, ತಲಾ ಸಾಲ 1 ಲಕ್ಷ 40 ಸಾವಿರ ರೂಪಾಯಿ ಇದೆ. ಸರಕಾರವು ಅದರ ಪ್ರಸ್ತುತ ದರದಲ್ಲಿ ಸಾಲವನ್ನು ಮುಂದುವರೆಸಿದರೆ, ದೇಶವು ತನ್ನ ಉತ್ಪಾದನೆಯ ಶೇ. 100 ಪ್ರತಿಶತದಷ್ಟು ಸಾಲ ಆಗಬಹುದು ಹೀಗಾದರೆ ಸಾಲ ತೀರಿಸಲು ಕಷ್ಟವಾಗುತ್ತದೆಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ಭಾರತಕ್ಕೆ ತಿಳಿಸಿದೆ. ಹೆಚ್ಚಿನ ಸಾಲಗಳು ಭಾರತೀಯ ರೂಪಾಯಿಗಳಲ್ಲಿ ಇರುವುದರಿಂದ ದೇಶಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಭಾರತ ಸರಕಾರ ಹೇಳಿದೆ.
ಹೀಗೆ ಹೆಚ್ಚಾಯಿತು ವಿದೇಶಿ ಸಾಲ !
ಸೆಪ್ಟೆಂಬರ್ 2023 : ಒಟ್ಟು ಸಾಲ 205 ಲಕ್ಷ ಕೋಟಿ ರೂಪಾಯಿ ಇದರಲ್ಲಿ ಕೇಂದ್ರ ಸರಕಾರ 161 ಲಕ್ಷ ಕೋಟಿ ಸಾಲ ಹೊಂದಿದ್ದರೆ, ರಾಜ್ಯ ಸರಕಾರಗಳು 44 ಸಾವಿರ ಕೋಟಿ ಸಾಲ ಹೊಂದಿವೆ !
ವರ್ಷ 2014 : ಕೇಂದ್ರ ಸರಕಾರದ ಒಟ್ಟು ಸಾಲ 55 ಲಕ್ಷ ಕೋಟಿ ರೂಪಾಯಿ ಇತ್ತು ಅಂದರೆ ಕಳೆದ 9 ವರ್ಷಗಳಲ್ಲಿ ಶೇ.192ರಷ್ಟು ಏರಿಕೆಯಾಗಿದೆ.
ವರ್ಷ 2004 : ಮನಮೋಹನ್ ಸಿಂಗ್ ಸರಕಾರ ರಚನೆಯಾದಾಗ ಕೇಂದ್ರ ಸರಕಾರವು 17 ಲಕ್ಷ ಕೋಟಿ ರೂಪಾಯಿ ಸಾಲವನ್ನು ಹೊಂದಿತ್ತು.
ಸಾಲ ಮತ್ತು ಆರ್ಥಿಕತೆಯ ಗಣಿತ !
ಒಂದು ದೇಶದ ಸಾಲವು ತೆಗೆದುಕೊಳ್ಳುವುದು, ಇದು ಸರಕಾರದ ಒಟ್ಟು ಆದಾಯ ಮತ್ತು ವೆಚ್ಚವನ್ನು ಅವಲಂಬಿಸಿರುತ್ತದೆ. ಆದಾಯಕ್ಕಿಂತ ಖರ್ಚು ಹೆಚ್ಚಾದರೆ ಸರಕಾರ ಸಾಲ ಮಾಡಬೇಕಾಗುತ್ತದೆ. ಸರಕಾರ ಸಾಲ ಪಡೆದಂತೆ ಅದರ ಆದಾಯ ಕೊರತೆ ಹೆಚ್ಚಾಗುತ್ತದೆ.
ಭಾರತ ತೆಗೆದುಕೊಂಡಿರುವ ಸಾಲವನ್ನು ಮುಖ್ಯವಾಗಿ ಯಾವುದಕ್ಕೆ ಖರ್ಚು ಮಾಡಲಾಗುತ್ತಿದೆ ?
2020 ರಲ್ಲಿ ಕರೋನಾ ಬಂದ ನಂತರ, ಸರಕಾರವು ಪ್ರತಿ ತಿಂಗಳು 80 ಕೋಟಿ ಜನರಿಗೆ ಉಚಿತ ಆಹಾರವನ್ನು ನೀಡುತ್ತದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 2 ಕೋಟಿ ಜನರಿಗೆ ಮನೆ ನಿರ್ಮಿಸಿಕೊಳ್ಳಲು ಆರ್ಥಿಕ ನೆರವು ನೀಡಲಾಗಿದೆ.
ಅಂದಾಜು 9 ಕೋಟಿ ರೈತರಿಗೆ ವಾರ್ಷಿಕ 6 ಸಾವಿರ ರೂಪಾಯಿ ನೀಡಲಾಗುತ್ತದೆ.
ಉಜ್ವಲಾ ಯೋಜನೆಯಡಿ ಅಂದಾಜು 10 ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡಲಾಗುತ್ತದೆ.
ಸಾಲದ ಬೆಳವಣಿಗೆ ಮತ್ತು ಹಣದುಬ್ಬರದ ನಡುವಿನ ಪರೋಕ್ಷ ಸಂಬಂಧ !
ಅರ್ಥಶಾಸ್ತ್ರಜ್ಞ ಮದನ್ ಸಬಮವಿಸ್ ಪ್ರಕಾರ, ‘ದೇಶದಲ್ಲಿ ಸಾಲದ ಬೆಳವಣಿಗೆ ಮತ್ತು ಹಣದುಬ್ಬರ ನಡುವೆ ನೇರ ಸಂಬಂಧವಿಲ್ಲ. ಸಾಲ ಪಡೆದ ಹಣವನ್ನು ಸರಕಾರವು ಆದಾಯವನ್ನು ಹೆಚ್ಚಿಸಲು ಬಳಸುತ್ತದೆ. ಸಾಲದ ಹಣವು ಮಾರುಕಟ್ಟೆಯನ್ನು ಪ್ರವೇಶಿಸಿದಾಗ, ಅದು ಸರಕಾರದ ಆದಾಯವನ್ನು ಹೆಚ್ಚಿಸುತ್ತದೆ.
ಹೀಗಿದ್ದರೂ, ಸಾಲದ ಹಣವನ್ನು ದುರುಪಯೋಗಪಡಿಸಿಕೊಳ್ಳುವುದರಿಂದವ ಹಣದುಬ್ಬರಕ್ಕೆ ಕಾರಣವಾಗಬಹುದು. ಸಾಲ ಪಡೆದ ಹಣವನ್ನು ಸಾಮಾನ್ಯ ಜನರ ನಡುವೆ ಹಂಚಿಕೊಂಡರೆ, ಜನರು ಹೆಚ್ಚು ಸರಕುಗಳನ್ನು ಖರೀದಿಸುತ್ತಾರೆ. ಇದು ಮಾರುಕಟ್ಟೆಯಲ್ಲಿ ಸರಕುಗಳ ಬೇಡಿಕೆಯನ್ನು ಹೆಚ್ಚಿಸುತ್ತದೆ. ಪೂರೈಕೆಯು ಹೆಚ್ಚಿದ ಬೇಡಿಕೆಗೆ ಹೊಂದಿಕೆಯಾಗದಿದ್ದರೆ, ಸರಕುಗಳ ಮೌಲ್ಯವು ಹೆಚ್ಚಾಗುತ್ತದೆ.
ಸಾಲ ಮಾಡುವುದು ಯಾವಾಗಲೂ ಕೆಟ್ಟದ್ದಲ್ಲ !
ಅರ್ಥಶಾಸ್ತ್ರಜ್ಞ ಸುವರೋಕಮಲ್ ದತ್ತಾ ಅವರ ಪ್ರಕಾರ, ಸಾಲ ಮಾಡುವುದು ಯಾವಾಗಲೂ ದೇಶಕ್ಕೆ ಕೆಟ್ಟದ್ದಲ್ಲ. ಭಾರತದ ಆರ್ಥಿಕತೆಯು 4 ಟ್ರಿಲಿಯನ್ ಡಾಲರ್‌ಗೆ (ರೂ. 333 ಲಕ್ಷ ಕೋಟಿಗೂ ಹೆಚ್ಚು) ಬೆಳೆದಿದೆ. ಈ ದೃಷ್ಟಿಕೋನದಿಂದ ನೋಡಿದರೆ 205 ಲಕ್ಷ ಕೋಟಿ ರೂಪಾಯಿಗಳ ಸಾಲ ವಿಶೇಷವೇನಲ್ಲ. ದೇಶದ ಅಭಿವೃದ್ಧಿಗೆ ಅಗತ್ಯವಾಗಿರುವ ‘ವಂದೇ ಭಾರತ’ದಂತಹ ರೈಲುಗಳನ್ನು ಓಡಿಸಲು, ರಸ್ತೆಗಳನ್ನು ನಿರ್ಮಿಸಲು ಮತ್ತು ವಿಮಾನ ನಿಲ್ದಾಣಗಳನ್ನು ನಿರ್ಮಿಸಲು ಸರಕಾರ ಈ ಹಣವನ್ನು ಖರ್ಚು ಮಾಡುತ್ತದೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿ ಭಾರತಕ್ಕೆ ಏಕೆ ಎಚ್ಚರಿಕೆ ನೀಡಿತು ?
ಜಪಾನ್‌ನಂತಹ ದೇಶಗಳು ವಿಶ್ವದ ಅತ್ಯಂತ ಸಾಲ ಪಡೆಯುವ ದೇಶಗಳಲ್ಲಿ ಸೇರಿವೆ. ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾದ ಅಮೆರಿಕ ಸಾಲ ಪಡೆಯುವಲ್ಲಿ ಭಾರತಕ್ಕಿಂತ ಮುಂದಿದೆ. ಹಿಗೀದ್ದರೂ, ಭಾರತಕ್ಕೆ ಅಂತರಾಷ್ಟ್ರೀಯ ಹಣಕಾಸು ನಿಧಿಯ ಎಚ್ಚರಿಕೆಯ ಹಿಂದಿನ ಕಾರಣಗಳು : ಅಭಿವೃದ್ಧಿ ಹೊಂದಿದ ದೇಶಗಳು ತಮ್ಮದೇ ಆದ ರಿಸರ್ವ್ ಬ್ಯಾಂಕಿನಿಂದ ಸಾಲ ಪಡೆಯುತ್ತವೆ. ಭಾರತವು ಜಾಗತಿಕ ಸಂಸ್ಥೆಗಳಿಂದ ಅಥವಾ ದೊಡ್ಡ ಖಾಸಗಿ ಸಂಸ್ಥೆಗಳಿಂದ ಸಾಲ ಪಡೆಯುತ್ತದೆ. ಇದರಿಂದ ಭಾರತಕ್ಕೆ ಸಾಲ ತೀರಿಸಲು ಕಷ್ಟವಾಗುತ್ತದೆ.
ಅಮೇರಿಕಾ ಮತ್ತು ಚೀನಾದಂತಹ ದೇಶಗಳು ತಾವೇ ದುಡಿದ ಹಣ ಹೊಂದಿವೆ. ಅವರು ಭಾರತಕ್ಕಿಂತ ಹಲವು ಪಟ್ಟು ಹೆಚ್ಚು ಮೀಸಲು ಹಣ ಹೊಂದಿದ್ದಾರೆ. ಅಲ್ಲದೆ, ಕರೆನ್ಸಿ ಬಲವಾಗಿರುತ್ತದೆ, ನೀವು ಕಡಿಮೆ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಡಾಲರ್‌ಗೆ ಹೋಲಿಸಿದರೆ ಭಾರತೀಯ ರೂಪಾಯಿ ಮೌಲ್ಯ ತೀರಾ ಕಡಿಮೆ ಇದೆ.