|
ಡೆಹರಾಡೂನ (ಉತ್ತರಾಖಂಡ) – ಉತ್ತರಾಖಂಡದಲ್ಲಿನ ಭಾಜಪ ಸರಕಾರವು ಚುನಾವಣೆಯ ಮೊದಲು ನೀಡಿರುವ ಸಮಾನ ನಾಗರಿಕ ಕಾನೂನಿನ ಆಶ್ವಾಸನೆ ಪೂರ್ಣಗೊಳಿಸುವುದು ಕಾಣುತ್ತಿದೆ. ಮುಖ್ಯಮಂತ್ರಿ ಪುಷ್ಕರ ಸಿಂಹ ಧಾಮಿ ಇವರು ಮೇ ೨೦೨೩ ರಲ್ಲಿ ಚುನಾವಣೆ ಬರುತ್ತಲೆ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಇವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯ ಸ್ಥಾಪನೆ ಮಾಡಿ ರಾಜ್ಯದಲ್ಲಿ ಸಮಾನ ನಾಗರಿಕ ಕಾನೂನು ಜಾರಿಗೊಳಿಸುವ ಸಂದರ್ಭದಲ್ಲಿ ವರದಿ ಸಿದ್ದಪಡಿಸುವ ಆದೇಶ ನೀಡಿದ್ದರು. ಈಗ ಮುಂದಿನ ತಿಂಗಳಲ್ಲಿ ವರದಿ ಪ್ರಸ್ತುತಪಡಿಸಲಾಗುವುದು. ಇದರ ಆಧಾರದಲ್ಲಿ ಮುಂದಿನ ತಿಂಗಳಲ್ಲಿ ಇದರ ಕ್ರಮ ಕೈಗೊಳ್ಳಲಾಗುವುದು, ಎಂದು ಮುಖ್ಯಮಂತ್ರಿ ಧಾಮಿ ಇವರು ಒಂದು ವಾರ್ತಾ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದರು. ಈ ದೃಷ್ಟಿಕೋನದಿಂದ ಜನವರಿಯಲ್ಲಿ ವಿಶೇಷ ಅಧಿವೇಶನ ಕರೆಯುವುದರ ಬಗ್ಗೆ ಕೂಡ ಯೋಚನೆ ನಡೆಯುತ್ತಿದೆ ಎಂದು ಕೂಡ ಅವರು ಹೇಳಿದರು.
ಸುಮಾರು ಎರಡುವರೆ ಲಕ್ಷ ಸೂಚನೆಗಳು ದೊರೆತಿವೆ !
ಮುಖ್ಯಮಂತ್ರಿ ಧಾಮಿ ಮಾತು ಮುಂದುವರಿಸಿ, ಸಮಾನ ನಾಗರಿಕ ಕಾನೂನು ಗೋವಾ ರಾಜ್ಯದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಜಾರಿ ಇದೆ. ಸ್ವತಂತ್ರ ಭಾರತದಲ್ಲಿ ಅದನ್ನು ಜಾರಿಗೊಳಿಸುವ ಉತ್ತರಖಂಡ ಇದು ಮೊಟ್ಟಮೊದಲು ರಾಜ್ಯವಾಗುವುದು. ತಜ್ಞರ ಸಮಿತಿಯಿಂದ ಸಮಾನ ನಾಗರಿಕ ಕಾನೂನಿನ ಮಸೂದೆಯ ಕುರಿತು ಕಾರ್ಯ ನಡೆಸಿದೆ. ಕಾನೂನು ರೂಪಿಸುವಾಗ ಎಲ್ಲಾ ತೊಡಕುಗಳನ್ನು ಗಮನಿಸಲಾಗಿದೆ. ಸಮಾನ ನಾಗರಿಕ ಕಾನೂನಿನ ಆಶ್ವಾಸನೆಯಲ್ಲಿಯೇ ಜನರು ನಮಗೆ ಜನಾದೇಶ ನೀಡಿದ್ದಾರೆ. ಸಮಿತಿಯು ವಿವಿಧ ಸ್ಥಳಗಳಿಗೆ ಹೋಗಿ ಎಲ್ಲಾ ವರ್ಗ, ಧರ್ಮ ಮತ್ತು ರಾಜಕೀಯ ಪಕ್ಷಗಳ ಸಾವಿರಾರು ಜನರ ಜೊತೆಗೆ ಚರ್ಚಿಸಿದ್ದಾರೆ. ಎಲ್ಲಾ ಮಾಧ್ಯಮದಿಂದ ಸುಮಾರು ಎರಡುವರೆ ಲಕ್ಷ ಸೂಚನೆಗಳು ದೊರೆತಿವೆ. ಈ ಆಧಾರದಲ್ಲಿ ಅಂತಿಮ ವರದಿ ಸಿದ್ದಪಡಿಸಲಾಗಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಜಾತ್ಯಾತೀತ ಭಾರತದಲ್ಲಿ ೭೫ ವರ್ಷದಲ್ಲಿ ಇಂತಹ ಕಾನೂನು ಯಾವುದೇ ರಾಜ್ಯದಲ್ಲಿ ರೂಪಿಸದಿರುವುದು, ಅದರ ಜಾತ್ಯತೀತ ತತ್ವಕ್ಕೆ ಮಸಿಬಳಿದಂತೆ ! |