ರಾಜ್ಯ ಶಿಕ್ಷಣ ಸಚಿವರಿಂದ ಪುಸ್ತಕಗಳ ಪ್ರಕಟಣೆ !
ಕರ್ಣಾವತಿ (ಗುಜರಾತ್) – ಮುಂದಿನ ಸೆಮಿಸ್ಟರ್‌ನಿಂದ ಗುಜರಾತ್‌ನ ಶಾಲೆಗಳಲ್ಲಿ ಶ್ರೀಮದ್ ಭಗವದ್ಗೀತೆಯನ್ನು ಬೋಧಿಸಲಾಗುವುದು. ಡಿಸೆಂಬರ್ 22 ರಂದು ಗೀತಾ ಜಯಂತಿಯ ಸಂದರ್ಭದಲ್ಲಿ ಶಿಕ್ಷಣ ರಾಜ್ಯ ಸಚಿವ ಪ್ರಫುಲ್ಲ ಪನ್ಶೇರಿಯಾ ಅವರು ಈ ಘೋಷಣೆ ಮಾಡಿದರು. ಮುಂದಿನ ಶೈಕ್ಷಣಿಕ ವರ್ಷದಿಂದ 6ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಗೀತಾ ಬೋಧನೆ ಮಾಡಲಾಗುವುದು ಎಂದರು. ಇದಕ್ಕಾಗಿ ಪುಸ್ತಕಗಳನ್ನು ಪನ್ಶೇರಿಯಾ ಪ್ರಕಟಿಸಿದರು.
ಪನ್ಶೇರಿಯಾ ಮಾತನ್ನು ಮುಂದುವರೆಸುತ್ತಾ,
1. ಸನಾತನ ಹಿಂದೂ ಧರ್ಮದ ಶ್ರೇಷ್ಠ ಗ್ರಂಥವಾದ ‘ಶ್ರೀಮದ್ ಭಗವದ್ಗೀತೆ’ ನಮ್ಮ ಇಡೀ ಜೀವನದ ಸಾರವಾಗಿದೆ. ಇದರಲ್ಲಿ ಆಧ್ಯಾತ್ಮ, ನಿರ್ವಹಣೆ, ನಾಯಕತ್ವ, ಸೃಜನಶೀಲತೆ, ಮೌಲ್ಯಗಳು ಮುಂತಾದ ಉತ್ತಮ ಸಮಾಜವನ್ನು ನಿರ್ಮಿಸಲು ಇದು ವಿಶಿಷ್ಟ ಸೂತ್ರಗಳನ್ನು ಹೊಂದಿದೆ.
2. ವಿದ್ಯಾರ್ಥಿಗಳು ಗೀತಾ ಪಾರಾಯಣ ಮಾಡಿ ಜೀವನದಲ್ಲಿ ಕಷ್ಟ ಬಂದರೂ ಸೋಲನ್ನು ಒಪ್ಪಿಕೊಳ್ಳದೆ ಉನ್ನತ ಗುರಿ ಸಾಧಿಸುತ್ತಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಅವರ ದೃಷ್ಟಿಕೋನಗಳು ಬದಲಾಗುತ್ತದೆ. ಚಿಕ್ಕ ವಯಸ್ಸಿನಲ್ಲಿ ಪಡೆದ ಶಿಕ್ಷಣ ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯುತ್ತದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಗುಜರಾತ್ನಲ್ಲಿ ಇದು ಸಾಧ್ಯವಾದರೆ, ಇತರ ರಾಜ್ಯಗಳಲ್ಲಿ ಮತ್ತು ಕೇಂದ್ರ ಸರಕಾರದ ಅಧೀನದಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿಯೂ ಹಿಂದೂ ಧರ್ಮಗ್ರಂಥಗಳನ್ನು ಕಲಿಸಲು ನಿರ್ಧರಿಸಬಹುದು ! |