ಲೋಕಸಭಾ ಚುನಾವಣೆ : ಪ್ರಚಾರ ಸಮಯದಲ್ಲಿ ವಿಕಲಾಂಗರಿಗೆ ‘ಕುಂಟ’ ಮತ್ತು ‘ಮೂಗ’ ಎನ್ನುವುದು ನಿಷೇಧ !

ನವ ದೆಹಲಿ – ೨೦೨೪ ರ ಲೋಕಸಭಾ ಚುನಾವಣೆಯ ಮುನ್ನ ಚುನಾವಣಾ ಆಯೋಗದಿಂದ ರಾಜಕೀಯ ಪಕ್ಷಗಳಿಗಾಗಿ ವಿಕಲಾಂಗರ ದೃಷ್ಟಿಯಿಂದ ಕೆಲವು ಮಾರ್ಗದರ್ಶಕ ಸೂಚಿ ಪ್ರಸಾರಗೊಳಿಸಿದೆ. ಪ್ರಚಾರದ ಸಮಯದಲ್ಲಿ ವಿಕಲಾಂಗರಿಗಾಗಿ ಅವಮಾನಾಸ್ಪದ ಭಾಷೆ ಉಪಯೋಗಿಸಬಾರದೆಂದು ಸೂಚಿಸಲಾಗಿದೆ. ಇದರ ಅಂತರ್ಗತ ಮುಗರು, ಹುಚ್ಚರು, ಕುರುಡರು, ಒಕ್ಕಣ್ಣು, ಕಿವುಡರು, ಕುಂಟರು, ಅಶಕ್ತರು ಈ ರೀತಿ ಪದಬಳಿಕೆ ವಿಕಲಾಂಗರಿಗಾಗಿ ಬಳಸಬಾರದೆಂದು ಆಯೋಗದಿಂದ ಪಕ್ಷದವರಿಗೆ ಹೇಳಲಾಗಿದೆ. ಪ್ರಚಾರದ ಸಮಯದಲ್ಲಿ ನಾಯಕರ ಭಾಷಣಗಳಲ್ಲಿ, ಸೋಶಿಯಲ್ ಮೀಡಿಯಾ ಪೋಸ್ಟ್, ಜಾಹೀರಾತು ಮತ್ತು ಪ್ರಸಿದ್ಧಿ ಪತ್ರಕದಲ್ಲಿ ಈ ರೀತಿಯ ಪದಗಳಿಗೆ ಮಾಡಬಾರದು. ಅದರ ಉಲ್ಲಂಘನೆ ಮಾಡುವವರಿಗೆ ವಿಕಲಾಂಗ ವ್ಯಕ್ತಿಯ ಅಧಿಕಾರ ಅಧಿನಿಯಮದ ೨೦೧೬ ರ ಪ್ರಕಾರ ಕಲಾಂ ೯೨ ಅಂತರ್ಗತ ೫ ವರ್ಷವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಪಕ್ಷಗಳಿಂದ ವಿಕಲಾಂಗರನ್ನು ಸದಸ್ಯರನ್ನಾಗಿ ಮಾಡಬೇಕು. ಆದ್ದರಿಂದ ಚುನಾವಣೆಯಲ್ಲಿ ವಿಕಲಾಂಗರ ಸಹಭಾಗ ಹೆಚ್ಚುವುದು, ಆಯೋಗದಿಂದ ಹೀಗೂ ಕೂಡ ಹೇಳಲಾಗಿದೆ.

ಮೇ ೨೦೨೩ ರಲ್ಲಿ ಕರ್ನಾಟಕದಲ್ಲಿ ನಡೆದ ವಿಧಾನಸಭೆಯ ಚುನಾವಣೆಯಲ್ಲಿ ವಿಕಲಾಂಗರಿಗೆ ಮನೆಯಲ್ಲಿ ಕುಳಿತು ನೀಡಲಾದ ಮತದಾನದ ಸೌಲಭ್ಯ !

ವಿಕಲಾಂಗರ ಮತದಾನದ ಶೇಕಡವಾರು ಹೆಚ್ಚಾಗಬೇಕು, ಇದಕ್ಕಾಗಿ ಕಳೆದ ಕೆಲವು ಸಮಯದಿಂದ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಅನೇಕ ಪ್ರಯತ್ನ !

ಕರ್ನಾಟಕ ವಿಧಾನಸಭಾ ಚುನಾವಣೆಯಿಂದ ಇದಕ್ಕಾಗಿ ವಿಶೇಷ ಸೌಲಭ್ಯದ ಆರಂಭ !

ಇದರ ಅಂತರ್ಗತ ಶೇಕಡ ೪೦ ಕ್ಕಿಂತಲೂ ಹೆಚ್ಚಿನ ವಿಕಲಾಂಗರು ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆ !

ವಿಕಲಾಂಗರಿಗೆ ಚುನಾವಣೆಯ ಅಧಿಸೂಚನೆ ಜಾರಿಯಾದ ನಂತರ ೧೫ ದಿನಗಳ ಒಳಗೆ ಒಂದು ಫಾರಂ ತುಂಬುವುದು ಆವಶ್ಯಕವಾಗಿದೆ ! ಅದರ ನಂತರ ಸರಕಾರಿ ಸಿಬ್ಬಂದಿ ಮತದಾನಕ್ಕಾಗಿ ವಿಕಲಾಂಗರ ಮನೆಗೆ ತಲುಪುವರು. ಈ ಪ್ರಕ್ರಿಯೆಯ ಚಿತ್ರೀಕರಣ ಕೂಡ ಮಾಡಲಾಗುವುದು.

ಮಧ್ಯಪ್ರದೇಶ, ಛತ್ತಿಸ್ಗಢ ಮತ್ತು ರಾಜಸ್ಥಾನ ಸಹಿತ ೫ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕೂಡ ಈ ಸೌಲಭ್ಯ ಒದಗಿಸಲಾಗಿತ್ತು.