Ram Mandir Ceremony : ಅಯೋಧ್ಯೆಯಲ್ಲಿನ ಎಲ್ಲಾ ಹೋಟೆಲ್ ಮತ್ತು ಅತಿಥಿ ಗೃಹಗಳಲ್ಲಿನ ಕಾದಿರಿಸುವಿಕೆ ರದ್ದು !

  • ಶ್ರೀ ರಾಮ ಮಂದಿರ ಪ್ರತಿಷ್ಠಾಪನ ಸಮಾರಂಭದ ಪ್ರಯುಕ್ತ ರಾಜ್ಯ ಸರಕಾರದ ನಿರ್ಣಯ !

  • ಆಮಂತ್ರಣ ಇಲ್ಲದಿರುವವರಿಗೆ ಪ್ರವೇಶ ನಿಷಿದ್ಧ !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಶ್ರೀ ರಾಮಮಂದಿರ ಪ್ರತಿಷ್ಠಾಪನೆ ಸಮಾರಂಭದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಅಯೋಧ್ಯೆಯಲ್ಲಿನ ರಕ್ಷಣಾ ವ್ಯವಸ್ಥೆಯ ಸಂದರ್ಭದಲ್ಲಿ ಇತ್ತೀಚಿಗೆ ಒಂದು ಮಹತ್ವಪೂರ್ಣ ಸಭೆ ಆಯೋಜಿಸಿದ್ದರು. ಇದರಲ್ಲಿ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕಾಗಿ ಆಮಂತ್ರಣವಿಲ್ಲದೆ ಅಯೋಧ್ಯೆಯಲ್ಲಿ ಪ್ರವೇಶ ನಿಷೇಧಿಸಲು ನಿರ್ಣಯಿಸಲಾಗಿದೆ. ಆಮಂತ್ರಣ ಇಲ್ಲದಿರುವವರು ಅಯೋಧ್ಯೆಯಲ್ಲಿನ ಹೋಟೆಲ್ ಮತ್ತು ಅತಿಥಿಗೃಹದಲ್ಲಿ ಕಾದಿರಿಸುವಿಕೆಯನ್ನು ಕೂಡ ರದ್ದುಪಡಿಸಲಾಗುವುದು. ಅಯೋಧ್ಯೆಯಲ್ಲಿ ಆಗುವ ಗದ್ದಲದಿಂದ ವ್ಯವಸ್ಥೆಯ ದೃಷ್ಟಿಯಿಂದ ಸರಕಾರ ಜಾಗರೂಕವಾಗಿದೆ. ಈಗ ಜನವರಿ ೨೨ ರಂದು ಕೇವಲ ಆಮಂತ್ರಿದ ಜನರಷ್ಟೇ ಅಯೋಧ್ಯೆಗೆ ಹೋಗಲು ಸಾಧ್ಯ, ಯಾರ ಬಳಿ ಆಯೋಜನ ಸಮಿತಿಯ ಆಮಂತ್ರಣ ಪತ್ರ ಇರುವುದು.

೧. ಶ್ರೀರಾಮ ಮಂದಿರದ ಪ್ರತಿಷ್ಠಾಪನೆಯ ದಿನದಂದು ಎಂದರೆ ೨೨ ಜನವರಿಗೆ ಆಯೋಜನ ಸಮಿತಿಯ ಅನುಮತಿ ನೀಡದಿರುವ ಹೊರಗಿನ ಯಾವುದೇ ಜನರಿಗೆ ಮಂದಿರ ಪರಿಸರದಲ್ಲಿ ಪ್ರವೇಶ ನೀಡಲಾಗದು.

೨. ಜನವರಿ ೨೦ ರಿಂದ ಮಂದಿರ ಸಾಮಾನ್ಯ ಭಕ್ತರಿಗಾಗಿ ಮುಚ್ಚಲಾಗುವುದು. ಜನವರಿ ೨೩ ರಿಂದ ಮಂದಿರ ಎಲ್ಲರಿಗಾಗಿ ಮತ್ತೆ ತೆರೆಯಲಾಗುವುದು. ಆ ಸಮಯದಲ್ಲಿ ಭಕ್ತರ ಬಹಳ ಗದ್ದಲಾಗುವುದು. ಇಂತಹ ಪರಿಸ್ಥಿತಿಯಲ್ಲಿ ಅಯೋಧ್ಯೆಯಲ್ಲಿ ಸರಕಾರದಿಂದ ಬಿಗಿ ಸುರಕ್ಷಾ ವ್ಯವಸ್ಥೆ ಮಾಡಲಾಗಿದೆ.

೩. ಜನವರಿ ೨೨ ರಂದು ಹೋಟೆಲ್ ಮತ್ತು ಧರ್ಮಶಾಲೆಗಳಲ್ಲಿ ವಾಸಿಸುವವರಿಂದ ನಿಗದಿತ ಬಾಡಿಗೆಗಿಂತಲೂ ಹೆಚ್ಚಿನ ಶುಲ್ಕ ವಿಧಿಸಿದರೆ ಸಂಬಂಧಿಸಿದವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು.

೪. ಹೋಟೆಲ್ ಮತ್ತು ಧರ್ಮ ಶಾಲೆಗಳಲ್ಲಿ ಎಲ್ಲಾ ಸಿಬ್ಬಂದಿಯರ ಪೊಲೀಸ ಪರಿಶೀಲನೆ ಮಾಡುವ ಸೂಚನೆ ನೀಡಲಾಗಿದೆ.