ದೆಹಲಿಯಲ್ಲಿ ವಿರೋಧಿಗಳ ಆಂದೋಲನ !
ನವ ದೆಹಲಿ – ಸಂಸತ್ತಿನ ಮೇಲೆ ನಡೆದಿರುವ ದಾಳಿಯ ಅಂಶಗಳ ಬಗ್ಗೆ ವಿರೋಧ ಪಕ್ಷದಿಂದ ರಾಜಕಾರಣ ಮಾಡಲಾಗುತ್ತಿದೆ. ಈ ದಾಳಿ ಖಂಡಿಸುವುದಕ್ಕಾಗಿ ವಿರೋಧ ಪಕ್ಷದ ಸಂಸದರು ಡಿಸೆಂಬರ್ ೨೧ ರಂದು ಹಳೆಯ ಸಂಸತ್ತಿನಿಂದ ವಿಜಯ ಚೌಕದವರೆಗೆ ಕಾಲ್ನಡಿಗೆಯ ಆಂದೋಲನ ನಡೆಸಿದರು. ಆ ಸಮಯದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇವರು ಮಾತನಾಡಿ, ಸಂಸತ್ತಿನ ರಕ್ಷಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ ಶಾಹ ಇವರು ಸಂಸತ್ತಿನಲ್ಲಿ ಉತ್ತರ ನೀಡಬೇಕು. ‘ಇಂಡಿಯಾ’ ಮೈತ್ರಿಕೂಟದ ಸಂಸದರಿಂದ ಸಂಸದರನ್ನು ಅಮಾನತುಗೊಳಿಸಿರುವುದರ ವಿರುದ್ಧ ಡಿಸೆಂಬರ್ ೨೨ ರಂದು ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಖರ್ಗೆ ಮಾತು ಮುಂದುವರೆಸಿ, ಪ್ರಧಾನಮಂತ್ರಿ ವಾರಣಾಸಿ ಮತ್ತು ಕರ್ಣಾವತಿಗೆ (ಅಹಮದಾಬಾದ) ಹೋಗಿದ್ದಾರೆ. ಅವರು ಎಲ್ಲೆಡೆ ಮಾತನಾಡುತ್ತಾರೆ; ಆದರೆ ಸಂಸತ್ತಿನ ಸುರಕ್ಷೆಯ ಬಗ್ಗೆ ಏನನ್ನು ಮಾತನಾಡುವುದಿಲ್ಲ. ಗೃಹ ಸಚಿವ ಅಮಿತ್ ಶಾಹ ಇವರು ಕೂಡ ಸಂಸತ್ತಿನ ಸುರಕ್ಷೆಯ ಸಂದರ್ಭದಲ್ಲಿ ಏನನ್ನು ಮಾತನಾಡುವುದಿಲ್ಲ. ಅದನ್ನು ನಾವು ಖಂಡಿಸುತ್ತೇವೆ. ಸರಕಾರಕ್ಕೆ ಸಂಸತ್ತಿನ ಕಾರ್ಯಕಲಾಪ ನಡೆಯುವುದು ಬೇಕಿಲ್ಲ. ವಿರೋಧಕರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ಸಂಸತ್ತಿನಲ್ಲಿ ಮಾತನಾಡುವುದು ಇದು ನಮ್ಮ ಅಧಿಕಾರವಾಗಿದೆ ಎಂದು ಹೇಳಿದರು.
೧. ಬಸಪಾದ (ಬಹುಜನ ಸಮಾಜ ಪಾರ್ಟಿ) ಮುಖ್ಯಸ್ಥೆ ಮಾಯಾವತಿ ಇವರು, ವಿರೋಧ ಪಕ್ಷದ ಸಂಸದರನ್ನು ಸಂಸತ್ತಿನಿಂದ ಅಮಾನತುಗೊಳಿಸುವುದು ಯೋಗ್ಯವಲ್ಲ, ಆದರೂ ಕೂಡ ಉಪರಾಷ್ಟ್ರಪತಿ ಮತ್ತು ರಾಜ್ಯಸಭೆಯ ಸಭಾಪತಿ ಜಗದೀಪ ಧನಖಡ ಇವರ ನಕಲು ಮಾಡಿರುವುದು ಕೂಡ ದುರ್ದೈವವಾಗಿದೆ ಎಂದು ಹೇಳಿದರು.
ಅಮಾನತುಗೊಂಡಿರುವ ಸಂಸದರ ಸಂಖ್ಯೆ ೧೪೩ ಕ್ಕೆ ಏರಿಕೆ !
ಇನ್ನೊಂದು ಕಡೆ ಸಂಸತ್ತಿನ ಸುರಕ್ಷತೆಗೆ ಧಕ್ಕೆ ಬಂದಿರುವ ಅಂಶಗಳ ಕುರಿತು ವಿರೋಧಿಗಳಿಂದ ನಡೆಸಿರುವ ರಂಪಾಟದಿಂದ ಡಿಸೆಂಬರ್ ೨೦ ರಂದು ಇನ್ನೂ ಇಬ್ಬರು ಸಂಸದರನ್ನು ಲೋಕಸಭೆಯಿಂದ ಅಮಾನತುಗೊಳಿಸಲಾಯಿತು. ಆದ್ದರಿಂದ ಇಲ್ಲಿಯವರೆಗೆ ಅಮಾನತು ಗೊಂಡಿರುವ ಸಂಸದರ ಸಂಖ್ಯೆ ೧೪೩ ರಷ್ಟು ಆಗಿದೆ. ಅದರಲ್ಲಿ ೧೦೯ ಲೋಕಸಭೆಯ ಹಾಗೂ ೩೪ ರಾಜ್ಯಸಭೆಯ ಸಂಸದರು ಇದ್ದಾರೆ. ಡಿಸೆಂಬರ್ ೨೧ ರಂದು ಕೂಡ ಸಂಸತ್ತಿನ ಎರಡು ಸದನದಲ್ಲಿ ರಂಪಾಟ ನಡೆಯಿತು. ಪ್ರಶ್ನೋತ್ತರ ಸಮಯದಲ್ಲಿ ಕೆಲವು ವಿರೋಧ ಪಕ್ಷದ ಸಂಸದರು ಘೋಷಣೆ ಕೂಗುತ್ತಿರುವುದು ಕಂಡುಬಂದಿತು.
ಸಂಪಾದಕರ ನಿಲುವು* ಸಂಸತ್ತಿನ ರಕ್ಷಣೆಯ ಬಗ್ಗೆ ಸರಕಾರದಿಂದ ಆದಷ್ಟು ಬೇಗನೆ ಅಧಿಕೃತ ನಿಲುವು ಮಂಡಿಸುವುದು ಅಪೇಕ್ಷಿತವಾಗಿದೆ, ಆದರೂ ಅದಕ್ಕಾಗಿ ವಿರೋಧಿ ಪಕ್ಷದ ಸಂಸದರಿಂದ ಸಂಸತ್ತಿನಲ್ಲಿ ಮಾಡಲಾಗುವ ರಂಪಾಟ ಖಂಡನೀಯವಾಗಿದೆ. ಸಂಸತ್ತಿನ ಅಮೂಲ್ಯ ಸಮಯ ವ್ಯರ್ಥ ಮಾಡಿ ಜನರಿಂದ ತೆರಿಗೆಯ ರೂಪದಲ್ಲಿ ಪಡೆಯುವ ಹಣದ ಈ ರೀತಿಯ ದುರುಪಯೋಗ ಮಾಡುವ ಜನಪ್ರತಿನಿಧಿಗಳಿಗೆ ಜನರು ಮರೆಯಲಾರರು, ಇದು ಕೂಡ ಅಷ್ಟೇ ಸತ್ಯವಾಗಿದೆ ! |