ನವದೆಹಲಿ – ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್.ಐ.ಎ.) ದೇಶದ 4 ರಾಜ್ಯಗಳ 19 ಸ್ಥಳಗಳಲ್ಲಿ ‘ಇಸ್ಲಾಮಿಕ್ ಸ್ಟೇಟ್’ ಹಾಗೂ ಭಯೋತ್ಪಾದಕ ಸಂಘಟನೆಯ ನೆಲೆಗಳ ಮೇಲೆ ದಾಳಿ ನಡೆಸಿದೆ. ಈ ಪೈಕಿ ಕರ್ನಾಟಕದ 11, ಜಾರ್ಖಂಡ್‌ನಲ್ಲಿ 4, ಮಹಾರಾಷ್ಟ್ರದಲ್ಲಿ 3 ಮತ್ತು ದೆಹಲಿಯಲ್ಲಿ 1 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ `ಎನ್.ಐ.ಎ.’ಯು ಅಪಾರ ಪ್ರಮಾಣದ ನಗದು, ಮಾರಕಾಸ್ತ್ರಗಳು, ಸೂಕ್ಷ್ಮ ದಾಖಲೆಗಳು ಮತ್ತು ವಿವಿಧ ಡಿಜಿಟಲ್ ಉಪಕರಣಗಳನ್ನು ವಶಪಡಿಸಿಕೊಂಡಿದೆ. ಈ ಆರೋಪಿಗಳು ಭಾರತದಲ್ಲಿ ‘ವಿದೇಶಿ ಭಯೋತ್ಪಾದಕರ’ ಸೂಚನೆಯ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದರು ಮತ್ತು ದೇಶದ ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.
ಕಳೆದ ವಾರ, ರಾಷ್ಟ್ರೀಯ ತನಿಖಾ ದಳವು ಮಹಾರಾಷ್ಟ್ರದ 40 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿ 15 ಜನರನ್ನು ವಶಕ್ಕೆ ಪಡೆದಿದ್ದರು. ಬಂಧಿತ ಭಯೋತ್ಪಾದಕರಲ್ಲಿ ಒಬ್ಬ ‘ಇಸ್ಲಾಮಿಕ್ ಸ್ಟೇಟ್’ ಮುಖ್ಯಸ್ಥನಾಗಿದ್ದನು. ಅವನು ‘ಇಸ್ಲಾಮಿಕ್ ಸ್ಟೇಟ್’ ನಲ್ಲಿ ಹೊಸದಾಗಿ ಭರ್ತಿಯಾಗಿರುವ ಸಂಘಟನೆಯೊಂದಿಗೆ ಏಕನಿಷ್ಟೆಯಿಂದ ಇರುವ ಬಗ್ಗೆ ಪ್ರತಿಜ್ಞೆಯನ್ನು ಬೋಧಿಸುತ್ತಿದ್ದನು.
ಸಂಪಾದಕೀಯ ನಿಲುವು‘ಇಸ್ಲಾಮಿಕ್ ಸ್ಟೇಟ್ ‘ ಈ ಭಯೋತ್ಪಾದಕ ಸಂಘಟನೆಯು ದೇಶದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಜಾಲವನ್ನು ಹರಡುವ ಭಾರತೀಯ ಗುಪ್ತಚರ ಇಲಾಖೆ ಮತ್ತು ಭದ್ರತಾ ಸಂಸ್ಥೆಗಳು ಏನು ಮಾಡುತ್ತಿದ್ದವು?’, ಎನ್ನುವ ಪ್ರಶ್ನೆ ಸಾಮಾನ್ಯ ನಾಗರಿಕರಿಗೆ ಮೂಡಿದರೆ ಆಶ್ಚರ್ಯ ಪಡಬಾರದು. |